ಪೇಸ್ಬುಕ್ ಮೂಲಕ ಆಶ್ಲೀಲ ಸಂದೇಶ,ಯುವತಿ ಆತ್ಮಹತ್ಯೆ ಯತ್ನ ಪೊಲೀಸ್ ಇಲಾಖೆ ವೈಫಲ್ಯಕ್ಕೆ ಡಾ. ಭರತ್ ಶೆಟ್ಟಿ ತೀವ್ರ ಆಕ್ರೋಶ
Friday, October 25, 2024
ಹಾಗೂ ತನ್ನೊಂದಿಗೆ ಬರದಿದ್ದರೆ 24 ತುಂಡು ಮಾಡಿ ಬಿಸಾಡುವೆ ಎಂದು ಬೆದರಿಕೆ ಹಾಕಿದ ಯುವಕನ ವಿರುದ್ಧ ಕ್ಷಿಪ್ರ ಕ್ರಮವನ್ನು
ಪೊಲೀಸರು ಕೈಗೊಳ್ಳದೆ ಇದ್ದ ಪರಿಣಾಮ ಸಂತ್ರಸ್ತ ಯುವತಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ ಎಂದು ಪೊಲೀಸ್ ವೈಫಲ್ಯದ ವಿರುದ್ಧ ಶಾಸಕರಾದ ಡಾ. ಭರತ್ ಶೆಟ್ಟಿ ವೈ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಯುವತಿ ಕುಟುಂಬಸ್ಥರು ದೂರು ದಾಖಲಿಸುವ ಸಂದರ್ಭವೇ ನಿರ್ಲಕ್ಷವಾಗಿ ವರ್ತಿಸಿರುವ ಠಾಣಾ ಪೊಲೀಸರ ಕ್ರಮ ಖಂಡನೀಯ.
ಯುವತಿ ಇದೀಗ ಜೀವನ್ಮರಣದ ಸ್ಥಿತಿಯಲ್ಲಿದ್ದು ಇದರ ಜವಾಬ್ದಾರಿಯನ್ನು ಪೊಲೀಸರೇ ಹೊರಬೇಕು .
ಹಿಂದೂ ಕಾರ್ಯಕರ್ತರು ಸಹನೆ ಕಳೆದುಕೊಳ್ಳುವ ಮುನ್ನ, ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ತಪ್ಪಿತಸ್ಥರನ್ನು ಬಂಧಿಸುವ ಮೂಲಕ
ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.