ಕುಪ್ಪೆಪದವಿನ ಇಮಾಕ್ಯುಲೇಟ್ ಹಾರ್ಟ್ ಆಫ್ ಮೇರಿ ಚರ್ಚ್ ನ ಸಂಸ್ಥಾಪನಾ ದಿನಾಚರಣೆ
Monday, September 2, 2024
ಮಂಗಳೂರು:ಕುಪ್ಪೆಪದವಿನ ಇಮಾಕ್ಯುಲೇಟ್ ಹಾರ್ಟ್ ಆಫ್ ಮೇರಿ ಚರ್ಚ್ ನ ಸಂಸ್ಥಾಪನಾ ದಿನಾಚರಣೆಯು ನಡೆಯಿತು. ಪ್ರಧಾನ ಧರ್ಮಗುರುಗಳಾಗಿ ವಂ| ಧರ್ಮಗುರು ಮ್ಯಾಕ್ಸಿಮ್ ರೊಸಾರಿಯೊ ಬಲಿಪೂಜೆ ನೆರವೇರಿಸಿದರು. ವಂ| ಧರ್ಮಗುರು ವಿಲ್ಸನ್ ಡಿ'ಸೋಜಾ, ಚರ್ಚಿನಲ್ಲಿ ಈ ಹಿಂದೆ ಸೇವೆ ಸಲ್ಲಿಸಿದ್ದ ವಂ। ಧರ್ಮಗುರು ವಲೇರಿಯನ್ ಡಿಸೋಜಾ, ಪ್ರಸ್ತುತ ಧರ್ಮ ಗುರುಗಳಾದ ವಂ| ಮಾರ್ಸೆಲ್ ಸಲ್ದಾನ್ಹಾ ಸಹಬಲಿದಾನಗೈದರು. ವಂ| ಧರ್ಮಗುರು ವಲೇರಿಯನ್ ಡಿಸೋಜಾರವರನ್ನು ಅವರು ಸಲ್ಲಿಸಿದ ಸೇವೆಗಾಗಿ ಇದೇ ವೇಳೆ ಸನ್ಮಾನಿಸಲಾಯಿತು. ಚರ್ಚಿನ ಅಧಿಕೃತ ವೆಬ್ ಸೈಟ್ www.kuppepadavuchurch.in ನ್ನು ಧರ್ಮಗುರುಗಳು ಅನಾವರಣಗೊಳಿಸಿದರು. ಚರ್ಚ್ ಪಾಲನಾ ಪರಿಷದ್ ಉಪಾಧ್ಯಕ್ಷ ಲೂವಿಸ್ ಪಿರೇರಾ, ಕಾರ್ಯದರ್ಶಿ ಶ್ರೀಮತಿ ಲೋನಾ ರೊಸಾರಿಯೊ, ಮರಿಯಗಿರಿ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಮೇಬಲ್ ಡಿಸೋಜಾ ಮತ್ತು ವೆಬ್ ಸೈಟ್ ತಂಡದ ಶರತ್ ರೊಸಾರಿಯೊ ಮತ್ತು ಪ್ರದೀಪ್ ರೊಸಾರಿಯೊ ಉಪಸ್ಥಿತರಿದ್ದರು.