ಕಿನ್ನಿಗೋಳಿ ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆಯ ಸದಸ್ಯರಿಗೆ ರಾಜ್ಯಮಟ್ಟದ ಪ್ರಶಸ್ತಿ
Tuesday, September 17, 2024
ಕಿನ್ನಿಗೋಳಿ : ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ನಡೆದ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಬೆಂಜ್ ಪ್ರೆಸ್ ಸ್ಪರ್ಧೆಯಲ್ಲಿ ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆ ಕಿನ್ನಿಗೋಳಿಯ ಸದಸ್ಯರಾದ ಸಿಂಥಿಯಾ ಕುಟಿನ್ಹ 2ಚಿನ್ನ ಮತ್ತು M2 ವಿಭಾಗದಲ್ಲಿ ಬೆಸ್ಟ್ ಲ್ಲಿಫ್ಟರ್ ಪ್ರಶಸ್ತಿ, jnr ವಿಭಾಗದಲ್ಲಿ ಕೀರ್ತನ್ ಕಟೀಲ್ 2 ಚಿನ್ನ ಜಯಲಕ್ಷ್ಮಿ ಆಚಾರ್ಯ 2 ಚಿನ್ನ ಹಾಗೂ sub Jr ವಿಭಾಗದಲ್ಲಿ ಸಾತ್ವಿ ಸಾಲ್ಯಾನ್ 2 ಚಿನ್ನ, ಅದಿತ್ ಶೆಟ್ಟಿ ಕಂಚಿನ ಪದಕ ಪಡೆದಿರುತ್ತಾರೆ.
ಇವರು ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆಯ ವ್ಯಾಯಾಮ ಶಾಲೆಯ ಮುಖ್ಯ ಶಿಕ್ಷಕ ಈಶ್ವರ್ ಕಟೀಲ್ ಹಾಗೂ ತರಬೇತುದಾರ ಕೇಶವ ಕರ್ಕೇರ ಇವರಿಂದ ತರಬೇತಿಯನ್ನು ಪಡೆದಿದ್ದಾರೆ.