-->


ಇಂದು ಕಿನ್ನಿಗೋಳಿಯ ಅನ೦ತಪ್ರಕಾಶ ವರ್ಷಾಚರಣೆಯ ಸಂಭ್ರಮ

ಇಂದು ಕಿನ್ನಿಗೋಳಿಯ ಅನ೦ತಪ್ರಕಾಶ ವರ್ಷಾಚರಣೆಯ ಸಂಭ್ರಮ

ಕಿನ್ನಿಗೋಳಿ  : ಕಿನ್ನಿಗೋಳಿಯ ಅನ೦ತಪ್ರಕಾಶ ಮಾಸಪತ್ರಿಕೆ-ಪ್ರಕಾಶನ ಸಂಸ್ಥೆಯ ೨೯ನೆಯ ವರ್ಷಾಚರಣೆಯ ಸಂಭ್ರಮವು ಇಂದು  ಮಧ್ಯಾಹ್ನ ೨ ರಿಂದ ಕಿನ್ನಿಗೋಳಿಯ ಬಸ್‌ನಿಲ್ದಾಣ ಬಳಿಯ ನೇಕಾರ ಸೌಧದಲ್ಲಿ ಜರಗಲಿದೆ. ಮಧ್ಯಾಹ್ನ ೨ ರಿಂದ
ಸುಬ್ರಹ್ಮಣ್ಯ ಬೈಪಡಿತ್ತಾಯರ ನೇತೃತ್ವದ ನಂದಳಿಕೆ ವಿಶಾಲ ಯಕ್ಷಕಲಾ ಬಳಗದವರಿಂದ ತಾಳಮದ್ದಲೆ ಖಳರಾಯ ಸಾಲ್ವ, ಸಂಜೆ ೪ ಗಂಟೆಗೆ ಜರಗಲಿರುವ ಸಭಾ ಕಾರ್ಯಕ್ರಮದಲ್ಲಿ ವಿದ್ವಾಂಸ ಕೆ.ಎಲ್.ಕುಂಡಂತಾಯರಿಗೆ ಅನಂತಪ್ರಕಾಶ ಪುರಸ್ಕಾರ ಪ್ರದಾನ ಮಾಡಲಿದ್ದು ಕುಂಡಂತಾಯರ ಅಭಿನಂದನ ಕೃತಿ ’ವ್ಯಂಗ್ಯ ಬದುಕು’ ಶಿಂಗಣ್ಣ ಖ್ಯಾತಿಯ ಕನ್ನೆಪ್ಪಾಡಿ ರಾಮಕೃಷ್ಣ ಶಾಸ್ತ್ರಿ ಇವರ ವ್ಯಂಗ್ಯ ಚಿತ್ರಗಳನ್ನೊಳಗೊಂಡ ಇಂಗ್ಲೀಷ್ ಅನುವಾದ ಕೃತಿ ಬಿಡುಗಡೆ ನಡೆಯಲಿದೆ.
ಕಟೀಲು ಕ್ಷೇತ್ರದ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಡಾ. ಹರಿಕೃಷ್ಣ ಪುನರೂರು, ಕೊಡೆತ್ತೂರು  ವೇದವ್ಯಾಸ ಉಡುಪ, ಮುಳಿಯ ಗೋಪಾಲಕೃಷ್ಣ ಭಟ್, ಶ್ರೀಮತಿ ಮನೋರಮಾ ಎಂ. ಭಟ್, ರಾಘವಯ್ಯ ಮುಳಿಯ, ಡಾ. ಅರುಣ್ ಎಂ. ಇನ್ನೂರು, ಉದ್ಯಮಿ ಪೃಥ್ವಿರಾಜ್ ಆಚಾರ್ಯ, ಧನಂಜಯ ಶೆಟ್ಟಿಗಾರ್, ಸುಧಾಕರ ಶೆಟ್ಟಿ ಭಾಗವಹಿಸಲಿದ್ದಾರೆ. ಬಳಿಕ ಸೀತಾರಾಮ ಕುಮಾರ್ ಕಟೀಲು ರವರ ನೂಪುರ ಕಲಾ ತಂಡದ ಕಲಾವಿದರಿಂದ ಬಡಗುತಿಟ್ಟು ಯಕ್ಷಗಾನ  ಚಂದ್ರಾವಳಿ ವಿಲಾಸ ಪ್ರದರ್ಶನ ನಡೆಯಲಿದೆ. 

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article