-->
ತೋಕೂರು ಸರಕಾರಿ ಹಿರಿಯ ಪ್ರಾಥಮಿಕ ಹಿಂದುಸ್ಥಾನಿ ಶಾಲಾ ವಿದ್ಯಾರ್ಥಿಗಳಿಗೆ  ಜೆರ್ಸಿ ವಿತರಣೆ

ತೋಕೂರು ಸರಕಾರಿ ಹಿರಿಯ ಪ್ರಾಥಮಿಕ ಹಿಂದುಸ್ಥಾನಿ ಶಾಲಾ ವಿದ್ಯಾರ್ಥಿಗಳಿಗೆ ಜೆರ್ಸಿ ವಿತರಣೆ

ಹಳೆಯಂಗಡಿ:ಜಿಲ್ಲಾ,ರಾಜ್ಯ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ)ತೋಕೂರು,ಹಳೆಯಂಗಡಿ ಇದರ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಹಿಂದುಸ್ಥಾನಿ ಶಾಲೆ,ತೋಕೂರು,ಹಳೆಯಂಗಡಿ ಇಲ್ಲಿನ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ,ಬೈಕಂಪಾಡಿ ಇದರ ಸಹಕಾರದಲ್ಲಿ ನೂತನ ಜೆರ್ಸಿ ಮತ್ತು ಪ್ಯಾಂಟ್ ವಿತರಣಾ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬೈಕಂಪಾಡಿ ಇದರ ವಲಯ ಸೇನಾನಿ ರೋ||ಗಣೇಶ್ .ಎಮ್ ಅವರು  ವಿಧ್ಯಾರ್ಥಿಗಳಿಗೆ ನೂತನ ಜೆರ್ಸಿ ಮತ್ತು ಪ್ಯಾಂಟ್ ವಿತರಿಸಿದರು.ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಕ್ರೀಡಾ ಸ್ಫೂರ್ತಿ ಹೆಚ್ಚಿಸಲು ಇಂತಹ ಕಾರ್ಯಕ್ರಮ‌ ಸಹಕಾರಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರೋಟರಿ ಕ್ಲಬ್ ನ ಅಧ್ಯಕ್ಷ ರೋ||ಹರೀಶ್. ಬಿ ಶೆಟ್ಟಿ ಅವರು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳೊಂದಿಗೆ ಕ್ರೀಡೆ ಕೂಡ ಮುಖ್ಯ ಎಂದರು.
ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ದೀಪಕ್ ಸುವರ್ಣ  ಮಾತನಾಡಿ ಉತ್ತಮ ಕಾರ್ಯ ಮತ್ತು ಸಮಾಜಮುಖಿ ಕೆಲಸಗಳನ್ನು ಸಂಘಟನೆಗಳು ಮಾಡುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಶಾಲೆಯ 20 ವಿದ್ಯಾರ್ಥಿಗಳಿಗೆ ಜೆರ್ಸಿ ಮತ್ತು ಪ್ಯಾಂಟ್ ಗಳನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನ ರೋ.ಶ್ರೀಕಾಂತ್ ಶೆಟ್ಟಿ,ರೋ.ಅಶೋಕ.ಎನ್,ರೋ.ಗಂಗಾಧರ ಕುಳಾಯಿ,ರೋ.ಯೋಗೀಶ್ ನಾಯಕ್,ಸರಕಾರಿ ಹಿರಿಯ ಪ್ರಾಥಮಿಕ ಹಿಂದುಸ್ಥಾನಿ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವನಿತಾ,ಸಹ ಶಿಕ್ಷಕಿ ಶ್ರೀಮತಿ ಸಿಲ್ವಿಯಾ ಕುಟಿನ್ಹೊ,ಗೌರವ ಶಿಕ್ಷಕಿ ಶ್ರೀಮತಿ ಪ್ರೇಮಲತಾ ಎಸ್.ಶೆಟ್ಟಿಗಾರ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಹಾಗೂ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ನ ಸದಸ್ಯರಾದ  ರಮೇಶ್ ಕರ್ಕೇರ, ಸಚಿನ್ ಆಚಾರ್ಯ ,ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಯಶೋಧ ದೇವಾಡಿಗ ಉಪಸ್ಥಿತರಿದ್ದರು.                                                                                         ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವನಿತಾ ಸ್ವಾಗತಿಸಿದರು.ಗೌರವ ಶಿಕ್ಷಕಿ ಶ್ರೀಮತಿ ಪ್ರೇಮಲತಾ ಎಸ್ ಶೆಟ್ಟಿಗಾರ್ ವಂದಿಸಿದರು.ಸಹ ಶಿಕ್ಷಕಿ ಶ್ರೀಮತಿ ಸಿಲ್ವಿಯಾ ಕುಟಿನ್ಹೊ ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article