ಗುರುಪುರ ಬೈಲುಪೇಟೆ ಮಸೀದಿಯಲ್ಲಿಮುಂದಿನ ವರ್ಷ ಫೆಬ್ರವರಿ 17-23ರವರೆಗೆ ಊರೂಸ್
Thursday, August 29, 2024
ಮಂಗಳೂರು : ಮಂಗಳೂರು ತಾಲೂಕಿನ ಕಂದಾವರ ಗ್ರಾಮದ ಬೈಲುಪೇಟೆಯ ಸುಮಾರು 900 ವರ್ಷಗಳ ಇತಿಹಾಸವುಳ್ಳ ಜಮಾಲಿಯಾ ಜುಮ್ಮಾ ಮಸೀದಿ ಮತ್ತು ದರ್ಗಾ ಶರೀಫ್ ಇಲ್ಲಿ ಮುಂದಿನ ವರ್ಷ(2025) ಫೆಬ್ರವರಿ 17ರಿಂದ 23ರವರೆಗೆ ಊರೂಸ್ ಸಮಾರಂಭ ನಡೆಯಲಿದೆ.
ಇಷ್ಟಾರ್ಥ ಸಿದ್ಧಿಗಾಗಿ ಸರ್ವಧರ್ಮೀಯರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವ ಪರಂಪರೆಯುಳ್ಳ ಹಾಗೂ ಸಾಮರಸ್ಯಕ್ಕೆ ಹೆಸರಾದ ಈ ಮಸೀದಿಯಲ್ಲಿ ಶೈಖ್ ಸಯ್ಯದ್ ಮಹ್ಮುದ್ ಜಮಾಲುದ್ದೀನ್(ಖ. ಆ) ಸಯ್ಯದ್ ಹಯಾತುಲ್ ಅವುಲಿಯಾ(ಖ. ಆ) ಸಯ್ಯದ್ ಹಸನ್ ಹೈದ್ರೋಸ್(ಖ. ಆ) ಇವರ ಹೆಸರಿನಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಊರೂಸ್ ನಡೆಯುತ್ತಿದೆ ಎಂದು ಮಸೀದಿ ಜಮಾತ್ ಸಮಿತಿ ಮತ್ತು ಊರೂಸ್ ಸಮಿತಿಯು ಜಂಟಿಯಾಗಿ ಮಂಗಳೂರಿನ ಪ್ರೆಸ್ ಕ್ಲಬ್‍ನಲ್ಲಿ ಆ. 29ರಂದು ಕರೆದಿರುವ ಪತ್ರಿಕಾಗೋಷ್ಠಿಯಲ್ಲಿ ಊರೂಸ್ ಸಮಿತಿಯ ಕಾರ್ಯದರ್ಶಿ ಆರೀಫ್ ಕಮ್ಮಾಜೆ ತಿಳಿಸಿದರು.
ಒಟ್ಟು ಆರು ದಿನಗಳ ಪರ್ಯಂತ ನಡೆಯಲಿರುವ ಊರೂಸ್ ಕಾರ್ಯಕ್ರಮದ ಪ್ರತಿದಿನ ಧಾರ್ಮಿಕ ಪ್ರವಚನ, ಫೆ. 23ರಂದು ಹಗಲು ಊರೂಸ್ ಹಾಗೂ ಸರ್ವ ಧರ್ಮ ಮುಖಂಡರ ಸಮ್ಮೇಳನ ಜರುಗಲಿದೆ.
ಗೋಷ್ಠಿಯಲ್ಲಿ ಊರೂಸ್ ಸಮಿತಿಯ ಅಧ್ಯಕ್ಷ ಶೇಖ್ ಮೋನು ಅಡ್ಡೂರು, ಜಮಾತ್ ಕಾರ್ಯದರ್ಶಿ ಬಿ. ಎಚ್. ಸಲೀಂ, ಊರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಶೇಖ್ ಅಹ್ಮದ್, ಸಮಿತಿಯ ಕೋಶಾಧಿಕಾರಿ ಹನೀಫ್ ಹಾಜಿ, ಸಮಿತಿ ಉಪಾಧ್ಯಕ್ಷರಾದ ಶರೀಫ್ ಶಿಬಾ ಮತ್ತು ಅಝೀಝ್ ಎಸ್. ಎಂ., ಉಪಸ್ಥಿತರಿದ್ದರು.