ಕೈಕಂಬ:ನೂಯಿ ಕುಸಿದ ಮನೆಗೆ ಡಾ. ಭರತ್ ಶೆಟ್ಟಿ ಭೇಟಿ ಸರ್ಕಾರದಿಂದ ಪರಿಹಾರ ಭರವಸೆ
Saturday, July 27, 2024
ಕೈಕಂಬ : ಅಡ್ಡೂರು ಗ್ರಾಮದ ನೂಯಿಯ ಇಂದಿರಾನಗರದಲ್ಲಿ ಜು. 25ರಂದು ಸಂಜೆ ಕುಸಿದು ಬಿದ್ದು ಹಾನಿಗೀಡಾದ ಮನೆಗೆ ಶನಿವಾರ ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡಿರುವ ಆರ್ಥಿಕವಾಗಿ ಹಿಂದುಳಿದ ಧನಲಕ್ಷ್ಮಿ ಅವರಿಗೆ ಸರ್ಕಾರದಿಂದ ಲಭ್ಯವಿರುವ ಮಳೆಹಾನಿ ನಿಧಿಯಿಂದ ಪರಿಹಾರ ಮಂಜೂರಾತಿಗೆ ಬೇಕಾದ ಕ್ರಮ ಕೈಗೊಳ್ಳಲಾಗುದು.
ಜೊತೆಗೆ ದಾನಿಗಳ ನೆರವು ಪಡೆದು ಹಾಗೂ ವೈಯಕ್ತಿಕ ನೆಲೆಯಲ್ಲಿ ಅವರ ಪುತ್ರನ ಕಾಲೇಜು ವಿದ್ಯಾಭ್ಯಾಸ ಮುಂದುವರಿಸಲು ಸಹಕರಿಸುವೆ ಎಂದು ಮನೆ ಮಂದಿಗೆ ಭರವಸೆ ನೀಡಿದರು.
ಶಾಸಕರೊoದಿಗೆ ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಸುವರ್ಣ, ಹರೀಶ್ ಬಳ್ಳಿ, ಚಂದ್ರಾವತಿ, ಬಿಜೆಪಿ ಪ್ರಮುಖ ಚಿದಾನಂದ ನಂದ್ಯ ಮತ್ತಿತರರು ಇದ್ದರು.