ತೋಕೂರು:ಆಟಿದ ನೆಂಪು - 2024 ಕಾರ್ಯಕ್ರಮ
Monday, July 22, 2024
ನೆಹರು ಯುವ ಕೇಂದ್ರ ಮಂಗಳೂರು,
ಇವರುಗಳ ಮಾರ್ಗದರ್ಶನದಲ್ಲಿ
ಜಿಲ್ಲಾ,ರಾಜ್ಯ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ),ತೋಕೂರು, ಹಳೆಯಂಗಡಿ
ಕಾರ್ಯಕ್ರಮವನ್ನು ಅಭಿಮತ ಟಿ.ವಿ ವಾಹಿನಿಯ ಆಡಳಿತ ಪಾಲುದಾರರಾದ ಶ್ರೀಮತಿ ಡಾ.ಮಮತಾ.ಪಿ.ಶೆಟ್ಟಿ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ತುಳುನಾಡಿನಲ್ಲಿ ಪುರಾತನ ಕಾಲದಲ್ಲಿ ನಮ್ಮ ಹಿರಿಯರು ರುಬ್ಬಲು ಉಪಯೋಗಿಸುತ್ತಿದ್ದ ಬಹಳ ಹಳೆಯ ಬೀಸುವ ಕಲ್ಲಿನಲ್ಲಿ ಉದ್ದು ಹಾಕಿ ಬೀಸುವ ಮೂಲಕ ಸಾಂಪ್ರದಾಯಿಕವಾಗಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.ಬಳಿಕ ಮಾತನಾಡಿದ ಅವರು ಆಷಾಡ ತಿಂಗಳ ಕಟ್ಟುಪಾಡುಗಳು ತುಳುನಾಡಿನ ವಿಶಿಷ್ಟ ಸಂಸ್ಕೃತಿ, ಪರಂಪರೆಯನ್ನು ಪ್ರಶಂಶಿಸಿದರು. ಅಲ್ಲದೆ ತುಳುನಾಡಿನ ಸಂಪ್ರದಾಯವನ್ನು ಬಿಂಬಿಸುವಂತಹ ಇಂತಹ ಆಚರಣೆಗಳನ್ನು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆಸಿ ಕೊಂಡು ಬರುತ್ತಿರುವುದನ್ನು ಶ್ಲಾಘಿಸಿದರು.
ಪಡುಪಣಂಬೂರು ಗ್ರಾ.ಪಂ ಇದರ ಅಧ್ಯಕ್ಷೆ ಶ್ರೀಮತಿ ಕುಸುಮಾ ಚಂದ್ರಶೇಖರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಸಂಸ್ಥೆಯ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.ಮತ್ತು ಆಷಾಡ ತಿಂಗಳಿನ ಮಹತ್ವದ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿದ್ದ ಗಣ್ಯರನ್ನು ಅಪ್ಪಟ ತುಳುನಾಡಿನ ಸಂಸ್ಕೃತಿ ಬಿಂಬಿಸುವ ಮುಟ್ಟಾಳೆ ತೊಡಿಸಿ,ಶಾಲು ಹೊದೆಸಿ,ವೀಳ್ಯದೆಲೆ-ಅಡಿಕೆ ಹಾಗೂ ಎಳನೀರು ನೀಡಿ ವಿಶೇಷವಾಗಿ ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಕಟೀಲೇಶ್ವರಿ ಕನ್ಸ್ಟ್ರಕ್ಷನ್ ನ ಮಾಲಕ ಅಭಿಲಾಷ್ ಶೆಟ್ಟಿ ಕಟೀಲು ಮಾತನಾಡಿ ಆಷಾಢ ತಿಂಗಳ ಆಚಾರ ವಿಚಾರ,ನಮ್ಮ ಪೂರ್ವಜರ ಆಷಾಡ ತಿಂಗಳ ಜೀವನ ಕ್ರಮ ಹೇಗಿತ್ತು,ಇಂದಿನ ಪೀಳಿಗೆಗೆ ಇವೆಲ್ಲವುಗಳ ಬಗ್ಗೆ ತಿಳಿದು ಕೊಳ್ಳಬೇಕಾದ ಅಗತ್ಯತೆ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿದರು.
ಪೆರ್ಮುದೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಪ್ರಸಾದ್ .ಎನ್ .ಅಂಚನ್ ಮಾತನಾಡಿ ಅನಾದಿ ಕಾಲದಿಂದಲೂ ತುಳುನಾಡಿನಲ್ಲಿ ಆಷಾಡ ತಿಂಗಳಿಗೆ ವಿಶೇಷವಾದ ಮಹತ್ವ ಇದೆ.ಆರೋಗ್ಯಕರ ಹಾಗೂ ನೈಸರ್ಗಿಕವಾದ ಸೊಪ್ಪು, ತರಕಾರಿಗಳ ವಿಶಿಷ್ಟ ಆಹಾರ ಪದಾರ್ಥಗಳನ್ನು ಆಷಾಡ ತಿಂಗಳಲ್ಲಿ ತಯಾರಿಸಲಾಗುತ್ತದೆ.ಇಂತಹ ವಿಶಿಷ್ಟ ಆಚರಣೆಗಳನ್ನು ಉಳಿಸಿ ಬೆಳೆಸಿ ಕೊಂಡು ಹೋಗುವತ್ತ ಆದ್ಯತೆ ನೀಡಬೇಕು ಎಂದರು.
ವೇದಿಕೆಯನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಸಿಂಗರಿಸಲಾಗಿತ್ತು.
ನೆರೆದವರಿಗೆ ತುಳುವ ಪರಂಪರೆ ಬಿಂಬಿಸುವ ಬೆಲ್ಲ,ಹುರಿ ಕಡಲೆ ಮತ್ತು ಕರಿಮೆಣಸಿನ ಕಷಾಯವನ್ನು ಆತಿಥ್ಯ ನೀಡಿ,ತುಳುನಾಡಿನಲ್ಲಿ ಆಷಾಡ ತಿಂಗಳಲ್ಲಿ ವಿಶೇಷವಾಗಿ ತಯಾರಿಸುವ ಖಾದ್ಯಗಳನ್ನು ಸಂಸ್ಥೆಯ ಸದಸ್ಯರು,ಸದಸ್ಯೆಯರು ತಮ್ಮ ತಮ್ಮ ಮನೆಯಲ್ಲಿಯೇ ತಯಾರಿಸಿ ತಂದ ವಿಧ-ವಿಧವಾದ 45 ಬಗೆಯ ಖಾದ್ಯಗಳನ್ನೊಳ ಗೊಂಡ ಶುಚಿ-ರುಚಿಯಾದ ಭೋಜನವನ್ನು ಸುಮಾರು 280 ಜನರಿಗೆ ಉಣ ಬಡಿಸಲಾಯಿತು.ತುಳು ಸಾಂಪ್ರದಾಯಿಕ ಜನಜೀವನದ ಹಿರಿಮೆಯನ್ನು ನೆನಪಿಸುವ ಹಳೆಯ ಪರಿಕರಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತ್ತು .
ಸ್ಪೋರ್ಟ್ಸ್ ಕ್ಲಬ್ ನ ಗೌರವ ಅಧ್ಯಕ್ಷ ಪ್ರಶಾಂತ್ ಕುಮಾರ್ ಬೇಕಲ್, ಅಧ್ಯಕ್ಷ ದೀಪಕ್ ಸುವರ್ಣ, ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಯಶೋಧ ದೇವಾಡಿಗ , ಮಾಜಿ ಗ್ರಾಮ ಪಂಚಾಯತ್ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಪಡು ಪಣಂಬೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹೇಮನಾಥ ಅಮೀನ್,ಸದಸ್ಯರಾದ ಮೋಹನ್ ದಾಸ್, ಸಂತೋಷ್ ಕುಮಾರ್,ಶ್ರೀಮತಿ ಜ್ಯೋತಿ ಕುಲಾಲ್,ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ತೋಕೂರು ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗುರುರಾಜ್. ಎಸ್.ಪೂಜಾರಿ ,ಸದಸ್ಯರಾದ ಪಿ.ಸಿ.ಕೋಟ್ಯಾನ್,ಶ್ರೀಮತಿ ಶೋಭಾ.ವಿ.ಅಂಚನ್,ಶ್ರೀಮತಿ ಸವಿತಾ ಬೆಳ್ಳಾಯರು,ನಿಕಟ ಪೂರ್ವ ಅಧ್ಯಕ್ಷ ಹರಿದಾಸ್ ಭಟ್, ನಿಕಟ ಪೂರ್ವ ಸದಸ್ಯ ಯೋಗೀಶ್ ಕೋಟ್ಯಾನ್,ತೋಕೂರು ಯುವಕ ಸಂಘದ ಅಧ್ಯಕ್ಷ ರಮೇಶ್ ದೇವಾಡಿಗ,ತೋಕೂರು ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಪ್ರೇಮಲತಾ ಶೆಟ್ಟಿಗಾರ್,ಫೇಮಸ್ ಯೂತ್ ಕ್ಲಬ್ ನ ಅಧ್ಯಕ್ಷ ಭಾಸ್ಕರ್ ಅಮೀನ್, ಮಹಿಳಾ ಅಧ್ಯಕ್ಷೆ ಶ್ರೀಮತಿ ಪ್ರೇಮಲತಾ, ಶ್ರೀ ವಿನಾಯಕ ಮಿತ್ರ ಮಂಡಳಿ ಪಕ್ಷಿಕೆರೆಯ ರಾಜೇಶ್ ದಾಸ್, ಚಂದ್ರಹಾಸ,ಲಯನ್ಸ್ ಮತ್ತು ಲಿಯೋ ಕ್ಲಬ್,ಕದ್ರಿಹಿಲ್ಸ್, ಮಂಗಳೂರು ಇದರ ಮಾಜಿ ಅಧ್ಯಕ್ಷ ಲ|ವಿಜಯ ಕುಮಾರ್ ಶೆಟ್ಟಿ,ಬಿಲ್ಲವ ಸಮಾಜ ಸೇವಾ ಸಂಘ ಎಸ್ಕೋಡಿ ಇದರ ಅಶೋಕ್ ಬಂಗೇರ,ಸ್ಪೋರ್ಟ್ಸ್ ಕ್ಲಬ್ ನ ಗೌರವ ಮಾರ್ಗದರ್ಶಕರುಗಳಾದ ಸುರೇಶ್ ಶೆಟ್ಟಿ,ಶಿವಾನಂದ ಪದ್ಮಶಾಲಿ, ಲಕ್ಷ್ಮಣ್ ಸಾಲ್ಯಾನ್, ರತನ್ ಶೆಟ್ಟಿ,ನಿಕಟ ಪೂರ್ವ ಅಧ್ಯಕ್ಷ ಜಗದೀಶ್ ಕುಲಾಲ್, ಸ್ಥಳೀಯ ಸಂಘ ಸಂಸ್ಥೆಗಳ ಸದಸ್ಯರು,ಸದಸ್ಯೆಯರು, ಗಣ್ಯರು,ಸ್ಪೋರ್ಟ್ಸ್ ಕ್ಲಬ್ ನ ಪದಾಧಿಕಾರಿಗಳು, ಸದಸ್ಯರು,ಸದಸ್ಯೆಯರು,ಮಕ್ಕಳು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ನೀಮಾ ಸನಿಲ್ ಅವರು ಆಟಿದ ನೆಂಪು- 2024 ಇದರ ಪ್ರಯುಕ್ತ ಜರುಗಿಸಿದ 'ಆಟಿದ ಐಸಿರ' ವಿಷಯದ ಬಗ್ಗೆ ಆನ್ಲೈನ್ ಮೂಲಕ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರ ಹೆಸರುಗಳನ್ನು ವಾಚಿಸಿದರು. ಹರಿಪ್ರಸಾದ್ ಸುವರ್ಣ ದುಬಾಯಿ ಶ್ರೀಮತಿ ವೈಶಾಲಿ ಕಿರೋಡಿಯನ್ ದುಬಾಯಿ ಹಾಗೂ ಶ್ರೀ ಶ್ರೀಕಾಂತ್ ಮಂಗಳೂರು ಇವರು ಬಹುಮಾನದ ಪ್ರಾಯೋಜಕರಾಗಿ ಸಹಕರಿಸಿದರು.ಮಹಿಳಾ ಜೊತೆ ಕಾರ್ಯದರ್ಶಿ ಶ್ರೀಮತಿ ಸುರೇಖಾ ಕಲ್ಲಾಪು ಇವರು ಆಷಾಡದ ತಿನಸುಗಳು ಮತ್ತು ಅವುಗಳನ್ನು ತಯಾರಿಸಿದವರ ಬಗ್ಗೆ ಮಾಹಿತಿ ನೀಡಿದರು.
ಪ್ರಧಾನ ಕಾರ್ಯದರ್ಶಿ ಶ್ರೀ ಪದ್ಮನಾಭ ಶೆಟ್ಟಿ,ಕೋಶಾಧಿಕಾರಿ ಸುನಿಲ್ ದೇವಾಡಿಗ ಸಹಕರಿಸಿದ್ದರು.ಸಂಸ್ಥೆಯ ಉಪಾಧ್ಯಕ್ಷ ಸಂತೋಷ್ ಕುಮಾರ್ ವಂದಿಸಿದರು. ಕಾರ್ಯಾಧ್ಯಕ್ಷ ಸಂತೋಷ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಎಸ್.ಎಸ್.ಎಂ.ಜಿ. ಡ್ಯಾನ್ಸ್ ಗ್ರೂಪ್ ಇದರ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರುಗಿತು. ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಗೀತಾ ಶೆಟ್ಟಿಗಾರ್ ಅವರು ನಡೆಸಿ ಕೊಟ್ಟರು. ಸುವರ್ಣ ನ್ಯೂಸ್ ಚಾನೆಲ್ ನ ನಿರೂಪಕರಾದ ಶ್ವೇತಾ ಆಚಾರ್ಯ ಮತ್ತು ಭಾವನ ಇವರು ವಿಶೇಷವಾಗಿ ಸ್ಪೋರ್ಟ್ಸ್ ಕ್ಲಬ್ ಗೆ ಬೇಟಿ ನೀಡಿ ಆಟಿದ ನೆಂಪು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿ,ಸಂಸ್ಥೆಯ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ಸಂಸ್ಥೆಯ ವತಿಯಿಂದ ಶಾಲು,ಸ್ಮರಣಿಕೆ ನೀಡಿ ಅವರನ್ನು ಗೌರವಿಸಲಾಯಿತು.
ಶ್ರೀಮತಿ ವಾಣಿ ಮಹೇಶ್ ,ಶ್ರೀಮತಿ ಸುಷ್ಮಾ ಆಚಾರ್ಯ ಹಾಗೂ ಶ್ರೀಮತಿ ಮೀನಾಕ್ಷಿ ದೇವಾಡಿಗ ರವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು.