ಎಕ್ಕಾರು:ಕುಂಭಕಂಠಿಣಿ ರಿಕ್ಷಾ ಮಾಲಕರ ಚಾಲಕರ ಸಂಘದ ಸಭೆ
Monday, June 10, 2024
ಎಕ್ಕಾರು ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತಸರ ಹಾಗೂ ಸಂಘದ ಗೌರವಾಧ್ಯಕ್ಷ ನಿತಿನ್ ಹೆಗ್ಡೆ, ಕಾವರಮನೆ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸಂಘದ ಸದಸ್ಯರಾದ ರಮೇಶ್ ಕೋಟ್ಯಾನ್ ಅವರ ಪುತ್ರ ಕಾರ್ತಿಕ್ ಅರ್ ಕೋಟ್ಯಾನ್
ಅವರು ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.96 ಅಂಕದೊಂದಿಗೆ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದು, ಅವರಿಗೆ ಫಲಪುಷ್ಪ ನೀಡಿ ಗೌರವಿಸಲಾಯಿತು.
ಕೃಷಿಕ ಕುಟ್ಟಿ ಶೆಟ್ಟಿ ಬೂತಗುಂಡಿ, ಸಂಘದ ಅಧ್ಯಕ್ಷ ನಾಗೇಶ್ ಅಮೀನ್, ಉಪಾಧ್ಯಕ್ಷ ಯೋಗೀಶ್ ಕುಂದರ್, ಕಾರ್ಯದರ್ಶಿ ಪ್ರಕಾಶ್ ಬೆಳ್ಳಡ, ಜತೆ ಕಾರ್ಯದರ್ಶಿ ಹೇಮಚಂದ್ರ ಶೆಟ್ಟಿ ಮತ್ತು ಉದಯ ಶೆಟ್ಟಿ ಕೋಶಾಧಿಕಾರಿ ಪ್ರಕಾಶ್ ಗೌಡ ಹಾಗೂ ಸದಸ್ಯರು ಉಪಸ್ಥಿತರಿದ್ದರು