-->

ಹರಿಪಾದ ಶ್ರೀ ಜಾರಂತಾಯ ಯುವಕ, ಯುವತಿ ಮಂಡಲದ ಆಶ್ರಯದಲ್ಲಿ ಪುಸ್ತಕ ವಿತರಣೆ,   ಸಾಧಕರಿಗೆ ಸನ್ಮಾನ

ಹರಿಪಾದ ಶ್ರೀ ಜಾರಂತಾಯ ಯುವಕ, ಯುವತಿ ಮಂಡಲದ ಆಶ್ರಯದಲ್ಲಿ ಪುಸ್ತಕ ವಿತರಣೆ, ಸಾಧಕರಿಗೆ ಸನ್ಮಾನ

ಪಕ್ಷಿಕೆರೆ  : ಹರಿಪಾದ ಶ್ರೀ ಜಾರಂತಾಯ ಯುವಕ ಮಂಡಲ  ಮತ್ತು ಮಹಿಳಾ ಮಂಡಳಿಯ  ವತಿಯಿಂದ ಸ್ಥಳೀಯ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಮತ್ತು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿಅಧಿಕ  ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು  ಸನ್ಮಾನಿಸುವ ಕಾರ್ಯಕ್ರಮವು   ಭಾನುವಾರದಂದು  ನಡೆಯಿತು.
 
ಕಾರ್ಯಕ್ರಮವನ್ನು ಯುವಕ ಮಂಡಲದ ಗೌರವ ಸಲಹೆಗಾರರಾದ  ವಾಸುದೇವ ಭಟ್ ಪಂಜ ಅವರು  ಉದ್ಘಾಟಿಸಿದರು. 


ಕಾರ್ಯಕ್ರಮದಲ್ಲಿ  ಕೊಯಿಕುಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ವೀಣಾ ಕುಮಾರಿ ಯವರನ್ನು ಸನ್ಮಾನಿಸಲಾಯಿತು. 

 1ರಿಂದ 7  ನೇ ತರಗತಿವರೆಗಿನ  120 ವಿದ್ಯಾರ್ಥಿಗಳಿಗೆ  ದಾನಿಗಳ ಸಹಕಾರದೊಂದಿಗೆ ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.

 2024-24 ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.85 ಕ್ಕಿಂತಲೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ನಿರೀಕ್ಷಾ, ವೈಭವ್ ಬಿ. ಪೂಜಾರಿ, ಮಾನಸ, ದೇವಾಂಶು ಕೋಟ್ಯಾನ್ ಉಲ್ಯ, ಪೂಜಾ ಆರ್. ಶೆಟ್ಟಿ, ಮನ್ವಿತ್ ಎನ್. ಪೂಜಾರಿ, ಅನಿರುದ್ಧ ಪಿ. ರಾವ್ ರ ವರನ್ನು  ಸನ್ಮಾನಿಸಲಾಯಿತು


ಈ ಸಂದರ್ಭ  ಕೆಮ್ರಾಲ್ ಗ್ರಾಮ  ಪಂಚಾಯತ್ ಉಪಾಧ್ಯಕ್ಷ ಸುರೇಶ್ ಪಂಜ, ಯುವಕ ಮಂಡಲದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಗೌರವ ಸಲಹೆಗಾರರಾದ ಅನಿಲ್ ಅಮೀನ್,  ನವೀನ್ ಶೆಟ್ಟಿ ನಲ್ಯಗುತ್ತು, ಯುವರಾಜ್ ಪೂಜಾರಿ,  ಮಾಧವ ಪೂಜಾರಿ ಭಂಡಾರ ಮನೆ, ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಜಾರಂತಾಯ ಮಹಿಳಾ ಮಂಡಳಿಯ ಅಧ್ಯಕ್ಷೆ ರೇಖಾ ಹಾಗೂ  ಜಾರಂತಾಯ ಯುವಕ ಮಂಡಲ  ಮತ್ತು ಮಹಿಳಾ ಮಂಡಳಿಯ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು. 
 ಜಯಲಕ್ಷ್ಮಿ ಮತ್ತು ರೇಖಾ ಪ್ರಾರ್ಥಿಸಿದರು. ಕೀರ್ತನ್  ಸ್ವಾಗತಿಸಿ, ಸರಿತಾ ಆರ್. ಶೆಟ್ಟಿ ವಂದಿಸಿದರು. 
ಸಂದೀಪ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807