ಮೂಲ್ಕಿಯ ದೀಪಾ ಅವರಿಗೆ ಡಾಕ್ಟರೇಟ್ ಪದವಿ
Monday, June 24, 2024
ಮೂಲ್ಕಿ: ನಿಟ್ಟೆಯ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ (ಎನ್ ಎಂ ಎ ಎಂ ಐ ಟಿ)ಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮೂಲ್ಕಿಯ ದೀಪಾ ಅವರಿಗೆ ಬೆಳಗಾವಿಯ ವಿ.ಟಿ. ಯೂನಿವರ್ಸಿಟಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರು ಶಿವಮೊಗ್ಗದ ಜೆಎನ್‌ಎನ್‌ಸಿಇ ಇದರ ಪ್ರೊಫೆಸರ್ ಡಾ. ಜ್ಯೋತಿ ಕೆ. ಅವರ ಮಾರ್ಗದರ್ಶದಲ್ಲಿ ಮಂಡಿಸಿದ Stcrco Correspondence of Images Us- ing Computer Vision Techniques ಎಂಬ ಸಂಶೋಧನೆಗಾಗಿ ಡಾಕ್ಟರೇಟ್ ಪದವಿ ನೀಡಲಾಗಿದೆ. ಮೂಲ್ಕಿಯ ಬಪ್ಪನಾಡು ಗುತ್ತು ದಿ. ಜಗನ್ನಾಥ ಶೆಟ್ಟಿ ಹಾಗೂ ಮಾಲತಿ ಶೆಟ್ಟಿ ದಂಪತಿ ಪುತ್ರಿಯಾಗಿದ್ದು ಬೆಳ್ಳಂಪಳ್ಳಿ ಹಳೆಮನೆ ಮಹೀಮ್ ಹೆಗ್ಡೆ ಅವರ ಪತ್ನಿ.