ಮಕ್ಕಳು ಸಮಾಜದ ಆಸ್ತಿ, - ವಂ. ಫಾ ಡಾ.ರೋನಾಲ್ಡ್ ಕುಟಿನ್ಹಾ
Sunday, June 16, 2024
2024-25 ನೇ ಸಾಲಿನ ಶಿಕ್ಷಕ-ರಕ್ಷಕ ಸಂಘ ದ ಮಹಾಸಭೆಯು ಶನಿವಾರದಂದು ನಡೆಯಿತು. ಈ ಸಂದರ್ಭದಲ್ಲಿ 2024-25 ನೇ ಸಾಲಿನ ಶಿಕ್ಷಕ ರಕ್ಷಕ ಸಂಘ ಹಾಗೂ ಅಮ್ಮಂದಿರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು.
ಸಂಸ್ಥೆಯ ಸಂಚಾಲಕ ವಂದನೀಯ ಫಾ ಡಾ.ರೋನಾಲ್ಡ್ ಕುಟಿನ್ಹೋ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಮಕ್ಕಳು ಸಮಾಜದ ಆಸ್ತಿ, ಅವರನ್ನು ಸಮಾಜದ ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು. ಮುಖ್ಯ ಶಿಕ್ಷಕ ಆಲ್ವಿನ್ ನೋರೋನ್ಹ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಅಶ್ವಥ್ ನಿಡ್ಡೋಡಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದರು. 2024-25ರ ಶಿಕ್ಷಕ ರಕ್ಷಕ ಸಂಘದ ನೂತನ ಉಪಾಧ್ಯಕ್ಷರಾಗಿ ಮ್ಯಾಕ್ಸಿಮ್ ಪಿಂಟೋ, ಅಮ್ಮಂದಿರ ಸಂಘದ ಅಧ್ಯಕ್ಷೆಯಾಗಿ ಶ್ರೀಮತಿ ಶರ್ಮಿಳಾ ಸಿ ಪೂಜಾರಿ ಆಯ್ಕೆಯಾದರು.
ಈ ಸಂದರ್ಭ ಹಿರಿಯ ಶಿಕ್ಷಕಿ ಮೋಲಿ ಲೋಬೋ, ಶಿಕ್ಷಕ ರಕ್ಷಕ ಸಂಘದ ನಿಕಟ ಪೂರ್ವ ಉಪಾಧ್ಯಕ್ಷೆ ಶ್ರೀಮತಿ ಶುಭ ನೋರೊನ್ಹ, ಅಮ್ಮಂದಿರ ಸಂಘದ ನಿಕಟ ಪೂರ್ವ ಅಧ್ಯಕ್ಷೆ ಶ್ರೀಮತಿ ಜಯಶ್ರೀ ನಾಗೇಶ್ ಉಪಸ್ಥಿತರಿದ್ದರು.
ಶಿಕ್ಷಕಿ ಶ್ರೀಮತಿ ಶಿಲ್ಪ ಡಿ'ಸೋಜಾ ಸ್ವಾಗತಿಸಿದರು.ಶಿಕ್ಷಕ ಲ್ಯಾನ್ಸಿ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.ಕು. ನಮಿತಾ ಧನ್ಯವಾದವಿತ್ತರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಹಳೆ ವಿದ್ಯಾರ್ಥಿ ದಿ. ಜೊಸ್ಸಿ ಡಿಲ್ಮಾ ಇವರ ಸ್ಮರಣಾರ್ಥ ಇವರ ಮಗಳು ಡೊರೆತಿ ಡಿಲ್ಮಾ ಇವರು ಕೊಡ ಮಾಡುವ ನಗದು ಪುರಸ್ಕಾರವನ್ನು ಎಸ್ ಎಸ್ ಎಲ್ ಸಿ ಸಾಧಕ ವಿದ್ಯಾರ್ಥಿಗಳಿಗೆ ನೀಡಿ ಪುರಸ್ಕಾರ,ಎಸ್ ಎಸ್ ಎಲ್ ಸಿ ಯಲ್ಲಿ ಅತಿ ಹೆಚ್ಚು ಅಂಕಗಳಿಸಿದ
ಸ್ತುತಿ ಜಗನ್ನಾಥ ಸುವರ್ಣ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.