-->


ರಿಲಯನ್ಸ್ ಅಸೋಸಿಯೇಶನ್ (ರಿ) ಬೊಳ್ಳೂರು ಹಳೆಯಂಗಡಿ ಇದರ 27ನೇ ವಾರ್ಷಿಕೋತ್ಸವ,ವಿವಾಹ ಕಾರ್ಯಕ್ರಮ

ರಿಲಯನ್ಸ್ ಅಸೋಸಿಯೇಶನ್ (ರಿ) ಬೊಳ್ಳೂರು ಹಳೆಯಂಗಡಿ ಇದರ 27ನೇ ವಾರ್ಷಿಕೋತ್ಸವ,ವಿವಾಹ ಕಾರ್ಯಕ್ರಮ

ಹಳೆಯಂಗಡಿ: ರಿಲಯನ್ಸ್ ಅಸೋಸಿಯೇಶನ್ (ರಿ) ಬೊಳ್ಳೂರು ಹಳೆಯಂಗಡಿ ಇದರ 27ನೇ ವಾರ್ಷಿಕೋತ್ಸವದ ಪ್ರಯುಕ್ತ " ನಮ್ಮ ಸಹೋದರಿ"ಯ ವಿವಾಹ ಕಾರ್ಯಕ್ರಮವು ರವಿವಾರ  ಮುಹಿಯುದ್ದೀನ್‌ ಜುಮಾ ಮಸೀದಿಯ ವಠಾರದಲ್ಲಿ ನೆರವೇರಿತು.

ರಿಲಯನ್ಸ್ ಎಸೋಸಿಯೇಶನ್ ಅಧ್ಯಕ್ಷ ಕಲಂದರ್ ಕೌಶಿಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂ.ಜೆ.ಎಂ. ಬೊಳ್ಳೂರು ಇದರ ಖತೀಬ್‌ ಹಾಗೂ ಕಿಲ್ತಾನ್ ಲಕ್ಷದ್ವೀಪದ ನೂತನ ಖಾಝಿ ಅಲ್ಹಾಜ್ ಮುಹಮ್ಮದ್ ಅಝ್ಹರ್ ಫೈಝಿ‌ ಬೊಳ್ಳೂರು ಉಸ್ತಾದ್ ಉದ್ಘಾಟಿಸಿದರು. ಪಾಣಕ್ಕಾಡ್ ಸಯ್ಯದ್ ಹಾಶಿರಲಿ ಶಿಹಾಬ್ ತಂಙಳ್ ನಿಖಾ ನೆರವೇರಿಸಿ, ದುವಾ ಆಶೀರ್ವಚನ ಗೈದರು.
ಯುನಿವೆಫ್ ಅಧ್ಯಕ್ಷ ರಫೀವುದ್ದೀನ್ ಕುದ್ರೋಳಿ, ಲೇಖಕರು ಹಾಗೂ ಸಾಮಾಜಿಕ ಕಾರ್ಯಕರ್ತ ಇಸ್ಮತ್ ಫಜೀರ್, ನಂಡೆ ಪೆಂಙಳ್ ಅಭಿಯಾನದ ಪ್ರಚಾರ ಮುಖ್ಯಸ್ಥ ರಫೀಕ್ ಮಾಸ್ಟರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಟಿ.ಆರ್.ಎಫ್. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಕಣ್ಣೂರು, ಬೊಳ್ಳೂರು ಎಂ.ಜೆ.ಎಂ. ಮುದರ್ರಿಸ್ ಆರಿಫ್ ಬಾಖವಿ, ಬೊಳ್ಳೂರು ಜುಮಾ ಮಸ್ಜಿದ್ ಅಧ್ಯಕ್ಷ ಪಂಡಿತ್ ಹಾಜಿ ಇದ್ದಿನಬ್ಬ, ಎನ್‌ಎಚ್‌ಎಂಸಿಟಿ ಮಂಗಳೂರು ಇದರ ಸದಸ್ಯ ಅಬ್ದುಲ್ ಸತ್ತಾರ್, ಸೌದಿ ಸರೆಬಿಯಾದ ಅನಿವಾಸಿ ಉದ್ಯಮಿ ಅಬ್ದುಲ್ ಜಬ್ಬಾರ್, ರಿಲಯನ್ಸ್ ಅಸೋಸಿಯೇಶನ್ ಜಿಸಿಸಿ ಅಧ್ಯಕ್ಷ ಅಬ್ದುಲ್ ಜಲೀಲ್, ಸಂಯೋಜಕ ಅನೀಸ್ ಸಂಪಿಗೆ, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಅಝೀಝ್, ಬೊಳ್ಳೂರು ಎಸ್‌ಯುಎಂಎಫ್‌ ಅಧ್ಯಕ್ಷ ಬಿ.ಇ. ಮುಹಮ್ಮದ್, ಬೊಳ್ಳೂರು ಎಲ್‌ಐಡಿಸಿ ಅಧ್ಯಕ್ಷ ಅಬ್ದುಲ್ ಅಝೀಝ್, ಇಂದಿರಾನಗರ ಅಲ್ ಮದ್ರಸತುಲ್ ಖಿಲ್ರಿಯಾದ ಅಧ್ಯಕ್ಷ ಮುಹಮ್ಮದ್ ಯೂಸುಫ್ ಉಪಸ್ಥಿತರಿದ್ದರು.

ಇದೇ‌ ವೇಳೆ ಕಿಲ್ತಾನ್ ಲಕ್ಷದ್ವೀಪದ ನೂತನ ಖಾಝಿಯಾಗಿ ನೇಮಕಗೊಂಡ ಅಲ್ಹಾಜ್‌ ಮುಹಮ್ಮದ್ ಅಝ್ಹರ್ ಫೈಝಿ ಬೊಳ್ಳೂರು ಉಸ್ತಾದ್‌ ಅವರನ್ನು ಸನ್ಮಾನಿಸಲಾಯಿತು. ರಿಲಯನ್ಸ್ ಅಸೋಸಿಯೇಶನ್ ಸದಸ್ಯ ಆರೀಶ್ ನವರಂಗ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮುಬಾರಕ್ ಕಾರ್ಯಕ್ರಮ ನಿರೂಪಿಸಿದರು. ಇಕ್ಬಾಲ್ ಎಂ.ಎ. ವಂದಿಸಿದರು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

Advertise under the article