-->

ನಾಗಗಳಿಗೆ ಅಹಿತವಾಗುವಂತೆ ನಾಗ ಬನಗಳ ನಿರ್ಮಾಣವಾಗುತ್ತಿರುದನ್ನು ನಿಲ್ಲಿಸೋಣ-  ಎಂ. ಬಾಲಕೃಷ್ಣ ಶೆಟ್ಟಿ

ನಾಗಗಳಿಗೆ ಅಹಿತವಾಗುವಂತೆ ನಾಗ ಬನಗಳ ನಿರ್ಮಾಣವಾಗುತ್ತಿರುದನ್ನು ನಿಲ್ಲಿಸೋಣ- ಎಂ. ಬಾಲಕೃಷ್ಣ ಶೆಟ್ಟಿ

ಕಟೀಲು :ತುಳುನಾಡಿನ ಕರಾವಳಿಯಲ್ಲಿ  ನಾಗಾರಾಧನೆ,ಧೈವರಾಧನೆಗೆ ಹೆಚ್ಚಿನ ಪ್ರಾಮುಖ್ಯತೆ ಇದ್ದು,ಅಧುನಿಕತೆಯ ಇಂದಿನ ಕಾಲಘಟ್ಟದಲ್ಲಿ  ಕೆಲವೊಂದು ಬದಲಾವಣೆಗಳು ಕಂಡುಬರುತ್ತಿದೆ.ಮುಖ್ಯವಾಗಿ ನಾಗಗಳಿಗೆ ಅಹಿತವಾಗುವಂತೆ ನಾಗ ಬನಗಳ ನಿರ್ಮಾಣವಾಗುತ್ತಿರುದನ್ನು ನಿಲ್ಲಿಸೋಣ  ಎಂದು ಉಪನ್ಯಾಸಕ ಎಂ. ಬಾಲಕೃಷ್ಣ ಶೆಟ್ಟಿ ಹೇಳಿದರು.
ಅವರು ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಾಗಮಂಡಲದ ಅಂಗವಾಗಿ ಮಂಗಳವಾರ  ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಮಾತನಾಡಿ ದೈವ ದೇವರ ಹೆಸರಿನಲ್ಲಿ ಉತ್ಸವ ಬ್ರಹ್ಮಕಲಶೋತ್ಸವಗಳ ಕಾರಣದಿಂದ ಗ್ರಾಮಸ್ಥರೆಲ್ಲರೂ ಸಂಘಟನೆಯಾಗುವ ಅತ್ಯುತ್ತಮ ಅವಕಾಶ.  ಸತ್ಯ ಧರ್ಮ ಶ್ರದ್ಧೆಯಿಂದ ದೈವ ದೇವರ ಚಾಕರಿ ಮಾಡುವ ಮೂಲಕ ಎಲ್ಲರಿಗೂ ಒಳಿತಾಗಲಿ ಎಂದು ಹೇಳಿದರು.


ಡಾ. ಹರಿಕೃಷ್ಣ ಪುನರೂರು ಮಾತನಾಡಿ  ಗಿಡಗಳನ್ನು ನೆಟ್ಟು ನಾಗ ಬನಗಳನ್ನು ಅಭಿವೃದ್ದಿ ಪಡಿಸುದರ ಜೊತೆಗೆ 
ನಾಗಗಳಿಗೆ ಬನ ನಿರ್ಮಿಸಿ ಬದಲಾಗಿ ಗುಡಿ ಕಟ್ಟಬೇಡಿ  ಎಂದು  ಪುನರೂರು ಹೇಳಿದರು.
ವೇದಿಕೆಯಲ್ಲಿ ಜೀರ್ಣೋದ್ಧಾರಕ್ಕೆ ಸಹಕರಿಸಿದ  ದಾನಿಗಳನ್ನು ಗೌರವಿಸಲಾಯಿತು. 
ಈ ಸಂದರ್ಭ ಕಟೀಲು ದೇವಳದ  ಅರ್ಚಕ ವೆಂಕಟರಮಣ ಆಸ್ರಣ್ಣ, ಐಡಿಯಲ್ ಐಸ್ ಕ್ರೀಮ್ ಆಡಳಿತ ನಿರ್ದೇಶಕ ಶಿಬರೂರು ಮುಕುಂದ್ ಕಾಮತ್, ಮೂಡುಬಿದ್ರೆ ಶ್ರೀಪತಿ ಭಟ್, ನಾರಾಯಣ ಪಿ.ಎಂ, ಪ್ರಕಾಶ್ ಬಿ.ಎನ್, ಡಾ. ಅಣ್ಣಯ್ಯ ಕುಲಾಲ್, ವೇಣುಗೋಪಾಲ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿಯ ಪ್ರಭಾಕರ ಶೆಟ್ಟಿ ಕೋಂಜಾಲಗುತ್ತು. ಪ್ರದ್ಯುಮ್ನ ರಾವ್, ಚೆನ್ನಪ್ಪ ಶೆಟ್ಟಿ, ಗಣೇಶ್ ಶೆಟ್ಟಿ, ಕಾಂತಪ್ಪ ಶೆಟ್ಟಿ, ರಘುನಾಥ ಶೆಟ್ಟಿ ಮತ್ತಿತರರಿದ್ದರು. 

ಸಂತೋಷ್ ಸುವರ್ಣ ಸ್ವಾಗತಿಸಿದರು. ವಿಜೇಶ್ ಶೆಟ್ಟಿ ಸಂಮಾನಿತರ ವಿವರ ನೀಡಿದರು. ಅಮಿತಾ ಸುದೀಪ್ ವಂದಿಸಿದರು. ಶರತ್ ಶೆಟ್ಟಿ ನಿರೂಪಿಸಿದರು.


ನಾಗೇಶ ಬಪ್ಪನಾಡು ಅವರಿಂದ ನಾದಸ್ವರ ವಾದನ, ಕಾರ್ತಿಕ್ ರಾವ್ ಬಳಗದವರಿಂದ ಭಕ್ತಿಗೀತೆಗಳ ಗಾಯನ, ಗಣೇಶ್ ಪಾಟೀಲ್ ಅವರಿಂದ ಹರಿಕಥೆ. ಶಿಬರೂರು ಮಹಿಳಾ ಮಂಡಳಿಯವರಿಂದ ನಾಟಕ ಬಾಲೆಗ್ ಒಲಿಯಿನ ಭ್ರಾಮರಿ ಪ್ರದರ್ಶನಗೊಂಡಿತು. ಧ್ಬಜಾಧಿವಾಸ ಧ್ಬಜಕಲಶಗಳು ನಡೆದು ಇಂದು ಬುಧವಾರ ನಾಗದೇವರಿಗೆ ಬ್ರಹ್ಮಕಲಶಾಭಿಷೇಕ, ಧ್ಬಜ ಪ್ರತಿಷ್ಟೆ ಕಲಾಶಭಿಷೇಕ ನಡೆಯಲಿದೆ.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807