ಅನಿ ಚಾರಿಟೇಬಲ್ ಫೌಂಡೇಶನ್ ನಿಂದ ಸಾಮೂಹಿಕ ವಿವಾಹ
Monday, April 22, 2024
ಮಂಗಳೂರು: ಬಡ ಹೆಣ್ಮಕ್ಕಳ ಜೀವನಕ್ಕೆ ಭದ್ರತೆ ನೀಡುವ ನಿಟ್ಟಿನಲ್ಲಿ ಸಿರಿವಂತರು ಯಾವುದೇ ಫಲಾಪೇಕ್ಷೆ ಇಲ್ಲದೆ ಹೆಣ್ಣುಮಕ್ಕಳಿಗೆ ವಿವಾಹ ಮಾಡಿಕೊಡುವುದು ಅತ್ಯಂತ ಮಹತ್ವದ ಕಾರ್ಯ ಎಂದು ಪಾಣಕ್ಕಾಡ್ ಸಯ್ಯದ್ ಸ್ವಾದಿಕಲಿ ಶಿಹಾಬ್ ತಂಙಳ್ ಅಭಿಪ್ರಾಯಪಟ್ಟರು.
ʼಅನಿ ಚಾರಿಟೇಬಲ್ ಫೌಂಡೇಶನ್ʼ ಆಶ್ರಯದಲ್ಲಿ ಉದ್ಯಮಿ ಲತೀಫ್ ಗುರುಪುರ ನೇತೃತ್ವದಲ್ಲಿ ಭಾನುವಾರ ತಲಪಾಡಿ ಸಮೀಪದ ಉಚ್ಚಿಲದಲ್ಲಿ ನಡೆದ ಹತ್ತು ಜೋಡಿಯ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಡ ಹೆಣ್ಮಕ್ಕಳ ಕಣ್ಣೀರು ಒರೆಸುವ ಸಾಮೂಹಿಕ ವಿವಾಹಕ್ಕಾಗಿ ಸಂಘಟಕರು ಪಟ್ಟ ಶ್ರಮ ಫಲ ನೀಡಬೇಕಾದರೆ ನೂತನ ದಂಪತಿ ಪರಸ್ಪರ ಅರ್ಥಮಾಡಿಕೊಂಡು ಜೀವನ ಸಾಗಿಸಬೇಕು. ಮುಂದೆ ನೀವೂ ಇಂತಹಾ ಬಡ ಹೆಣ್ಣುಮಕ್ಕಳ ವಿವಾಹಗಳಿಗೆ ಸಹಕರಿಸಬೇಕೆಂದು ನುಡಿದರು.
ರಾಜಕೀಯ ಮುಖಂಡ ರಿಯಾಝ್ ಕಡಂಬು ಮಾತನಾಡಿ, ನೊಂದವರ ಪಾಲಿಗೆ ಸದಾ ನೆರವಿನ ಹಸ್ತ ಚಾಚುತ್ತಾ ಬಂದಿರುವ ಅನಿ ಚಾರಿಟೇಬಲ್ ಫೌಂಡೇಶನ್ ಸಾಮೂಹಿಕ ವಿವಾಹದ ಮೂಲಕ ತಮ್ಮ ಸೇವೆ ಇನ್ನಷ್ಟು ವಿಸ್ತರಿಸಿದ್ದು ಇತರ ಸಿರಿವಂತರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಸಾಮೂಹಿಕ ವಿವಾಹ ಸಮಾರಂಭವನ್ನು ಸಯ್ಯದ್ ಜಿಫ್ರಿ ತಂಙಳ್ ಬೆಳ್ತಂಗಡಿ ಉದ್ಘಾಟಿಸಿದರು. ಸಯ್ಯದ್ ಅಲೀ ತಂಙಳ್ ಕುಂಬೋಲ್ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಖಾಹ್ ನೇತೃತ್ವ ವಹಿಸಿದರು. ಸಯ್ಯದ್ ಜಮಲುಲ್ಲೈಲಿ ತಂಙಳ್ ಕಾಜೂರು ಅನಿ ಚಾರಿಟೇಬಲ್ ಫೌಂಡೇಶನ್ ನ ಲೋಗೊ ಬಿಡುಗಡೆಗೊಳಿಸಿದರು. ಜಮಾಲುದ್ದೀನ್ ದಾರಿಮಿ ಕುತುಬಾ ಪಾರಾಯಣಗೈದರು.
ಸಮಸ್ತ ಮುಶಾವರ ಸದಸ್ಯ ಬಿ.ಕೆ. ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ, ಸಯ್ಯದ್ ಅಮೀರ್ ತಂಙಳ್ ಕಿನ್ಯ, ಇಬ್ರಾಹಿಂ ಬಾತಿಶಾ ತಂಙಳ್, ಉಸ್ಮಾನ್ ಫೈಝಿ ತೋಡಾರ್, ಎಸ್.ಬಿ. ದಾರಿಮಿ ಉಸ್ತಾದ್, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಮಜೀದ್ ದಾರಿಮಿ ಉಸ್ತಾದ್, ಶರೀಫ್ ದಾರಿಮಿ ಉಸ್ತಾದ್, ಸಾಮಾಜಿಕ ಕಾರ್ಯಕರ್ತ ಡಾ. ಫಿರೋಝ್ ಕುನ್ನಪರಂಬಿಲ್, ಅನಿ ಚಾರಿಟೇಬಲ್ ಫೌಂಡೇಶನ್ ಅಧ್ಯಕ್ಷ ಲತೀಫ್ ಗುರುಪುರ ಅವರ ಪಾಲುದಾರರಾದ ಅಹ್ಮದ್ ಅಲಿ ಮುಹಮ್ಮದ್ ರಹೀಮಿ ಯುಎಇ, ಸಯೀದ್ ಅಲ್ ಹಾಸಿಮಿ ಯುಎಇ, ಇಬ್ರಾಹೀಂ ಮುಹಮ್ಮದ್ ಮಲೇಶೀಯಾ, ಬದ್ರುದ್ದೀನ್ ಅಝ್ಹರಿ, ಹುಸೈನ್ ದಾರಿವಿ ರೆಂಜಿಲಾಡಿ, ಅನೀಸ್ ಕೌಸರಿ, ರಫೀಕ್ ಮಾಸ್ಟರ್, ನಾಸೀರ್ ಲಕ್ಕಿಸ್ಟಾರ್ ಮೊದಲದವರು ಉಪಸ್ಥಿತರಿದ್ದರು. ಇಕ್ಬಾಲ್ ಬಾಳಿಲ ಕಾರ್ಯಕ್ರಮ ನಿರೂಪಿಸಿದರು.