-->

ಕಟೀಲು ವರ್ಷಾವಧಿ ಜಾತ್ರೆ

ಕಟೀಲು ವರ್ಷಾವಧಿ ಜಾತ್ರೆ
ಎ.13 ರಿಂದ ಎ.20 ರವರೆಗೆ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರೆ
ಕಟೀಲಿನಲ್ಲಿ ವಸಂತ ವೇದ ಶಿಬಿರ ಉದ್ಘಾಟನೆ

ಕಟೀಲಿನಲ್ಲಿ ವಸಂತ ವೇದ ಶಿಬಿರ ಉದ್ಘಾಟನೆ

ಕಟೀಲು : ವೇದ ಪುರಾಣಗಳ ಮಹತ್ವವನ್ನು ಮಕ್ಕಳಿಗೆ ಕಲಿಸುವ ಪ್ರಕ್ರಿಯೆ ನಿರಂತರವಾಗಿಬೇಕು. ಆ ಮೂಲಕ ಮಕ್ಕಳನ್ನು ಸಂಸ್ಕಾರ ಮತ್ತು ಜ್ಞಾನವಂತರನ್ನಾಗಿಸಬಹುದು ಎಂದು ನಿಟ್ಟೆ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ  ಡಾ. ನಿರಂಜನ ಚಿಪಳೂಣಕರ್ ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ದೇವಸ್ಥಾನ ಹಾಗೂ ಮುಂಬೈನ ಸಂಜೀವನಿ ಟ್ರಸ್ಟ್ ಸಹಯೋಗದಲ್ಲಿ ನಡೆಯುವ ವಸಂತವೇದ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಧಾರ್ಮಿಕ ಚಿಂತಕ ಕೊಲಕಾಡಿ ವಾದಿರಾಜ ಉಪಾಧ್ಯಾಯ ಮಾತನಾಡಿ ಶ್ಲೋಕ, ಮಂತ್ರಾದಿಗಳನ್ನು ಕಲಿಸುವ ಕರ್ತವ್ಯ ಹಿರಿಯರಿಗೆ ಇದೆ. ದೇವಸ್ಥಾನಗಳು ಆಧ್ಯಾತ್ಮ ಚಿಂತನೆಯನ್ನು ಮಕ್ಕಳಲ್ಲಿ ಬೆಳೆಸುವ ಕಾರ್ಯ ಅಭಿನಂದನೀಯ  ಎಂದರು. 
ಸಂಜೀವನಿ ಟ್ರಸ್ಟ್ ನ ಡಾ. ಸುರೇಶ್ ರಾವ್. ಪದವಿ ಕಾಲೇಜು ಪ್ರಾಚಾರ್ಯ ಡಾ. ವಿಜಯ್ ವಿ.  ಕಟೀಲು ದೇಗುಲದ ಆಡಳಿತ ಮಂಡಳಿಯ ಪ್ರಮುಖರು, ವೇದ ಶಿಬಿರದ ಗುರುಗಳಾದ ಮಧ್ವೇಶ ಮಠದ ಹಾಗೂ ವಾಗೀಶ ಆಚಾರ್ಯ  ಮತ್ತಿತರರಿದ್ದರು.
ಸಂಸ್ಕೃತ ಉಪನ್ಯಾಸಕರಾದ ಡಾ. ಪದ್ಮನಾಭ ಮರಾಠೆ ಸ್ವಾಗತಿಸಿದರು.  ಶ್ರೀವತ್ಸ ನಿರೂಪಿಸಿದರು.

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ