ಕಟೀಲು ದೇವಳದಲ್ಲಿ 74 ಜೋಡಿ ವಿವಾಹ
Monday, April 29, 2024
ಕಟೀಲು :ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಆದಿತ್ಯವಾರದಂದು 74 ಜೋಡಿಗಳಿಗೆ ಸರಳ ರೀತಿಯಲ್ಲಿ ವಿವಾಹವು ನಡೆಯಿತು.ಬೆಳಿಗ್ಗೆ 8 ರಿಂದ ಆರಂಭವಾದ ವಿವಾಹ ಮುಹೂರ್ತ ಮಧ್ಯಾಹ್ನ 1 ಗಂಟೆಯ ತನಕ ನಡೆಯಿತು.
25 ಸಾವಿರಕ್ಕೂ ಹೆಚ್ಚು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದು,10 ಸಾವಿರ ಮಂದಿ ಅನ್ನ ಪ್ರಸಾದ ಸ್ವೀಕರಿಸಿದರು.
8 ಮಂದಿ ಅರ್ಚಕ ಪುರೋಹಿತರು 4 ಕೌಂಟರ್ ಹಾಗೂ ನೋಂದಣೆಗೆ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಲಾಗಿತ್ತು.
ಇಲ್ಲಿನ ಪೇಟೆ ,ರಥಬೀದಿ ಹಾಗೂ ಬಸ್ ನಿಲ್ದಾಣದ ಬಳಿ ಟ್ರಾಪಿಕ್ ಜಾಮ್ ಉಂಟಾಗಿತ್ತು. ವಾಹನಗಳ ನಿಲುಗಡೆಗೆ ಸಿತ್ಲ ಬೈಲು,ಕಾಲೇಜು ಆವರಣ ಹಾಗೂ ಉಲ್ಲಂಜೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ವ್ಯವಸ್ಥೆ ಮಾಡಲಾಗಿತ್ತು.ಅಲ್ಲದೆ ಇಲ್ಲಿನ ಸೇತುವೆಯ ಸಮೀಪ ಹೆದ್ದಾರಿಯು ಕಿರಿದಾಗಿದ್ದರಿಂದ ಕೆಲ ಕಾಲ ಎಕ್ಕಾರು - ಕಟೀಲು ಹೆದ್ದಾರಿಯಲ್ಲಿ ಟ್ರಾಪಿಕ್ ಜಾಮ್ ಉಂಟಾಗಿತ್ತು.