ವಿವಿಧ ಸವಲತ್ತು ಹಾಗೂ ಪರಿಹಾರ ವಿತರಣೆ
Saturday, March 16, 2024
ಮಂಗಳೂರು ತಾಲೂಕು ಪಂಚಾಯತ್ ನಲ್ಲಿ ಶುಕ್ರವಾರದಂದು ವಿವಿಧ ಸವಲತ್ತು ಹಾಗೂ ಪರಿಹಾರ ವಿತರಣೆ ನಡೆಯಿತು.ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಫಲಾನುಭವಿಗಳಿಗೆ ಚೆಕ್ ಹಾಗೂ ಪರಿಹಾರದ ಮೊತ್ತದ ಚೆಕ್ ವಿತರಿಸಿದರು.
2023-24 ನೇ ಸಾಲಿನ ತಾಲೂಕು ಪಂಚಾಯತ್ ಅನಿರ್ಭಂದಿತ ಅನುದಾನದ ವಿಕಲಚೇತನ ಕಲ್ಯಾಣ ಕಾರ್ಯಕ್ರಮ ದಡಿ ಶ್ರೀಮತಿ ಧನಶ್ರೀ ಬಡಗುಳಿಪಾಡಿ ಗ್ರಾಮ ಗಂಜಿಮಠ ಪಂಚಾಯತ್ ರವರಿಗೆ ರೂ 1.20 ಲಕ್ಷ ವೆಚ್ಚದ ವಿಶೇಷ ದ್ವಿಚಕ್ರ ವಾಹನ ವಿತರಣೆ.
ಮತ್ತು ಹಂದಿ ಜ್ವರದಿಂದ ನಷ್ಟಕ್ಕೊಳಗಾದ ಹಂದಿ ಸಾಕಾಣಿಕೆ ದಾರ ನೀರುಮಾರ್ಗದ ಜೋಸೆಫ್ ಸ್ಟಾನಿ ಪ್ರಕಾಶ್ ಕೆ ರವರಿಗೆ ಪಶುಸಂಗೋಪನೆ ಇಲಾಖೆ ವತಿಯಿಂದ ರೂ ರೂ 5,88,400 ನ್ನು ಪರಿಹಾರ ಧನ ಚೆಕ್ ವಿತರಣೆ ನಡೆಯಿತು.
ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಮಹೇಶ್ ಹೊಳ್ಳ, ಮಂಗಳೂರು ತಾಲೂಕು ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಡಾ ಅಶೋಕ್, ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರು, ಲೆಕ್ಕಾಧಿಕಾರಿಗಳು ಹಾಜರಿದ್ದರು.