ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಡಾ. ವಿಜಯ್ ವಿ. ನೇಮಕಗೊಂಡಿದ್ದಾರೆ.
ಕಳೆದ ೩೦ ವರುಷಗಳಿಂದ ವಾಣಿಜ್ಯ ಉಪನ್ಯಾಸಕರಾಗಿ ಕಾರ‍್ಯನಿರ್ವಹಿಸುತ್ತ ಬಂದಿರುವ ಇವರು ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿಯಾಗಿ, ನ್ಯಾಕ್ ಹಾಗೂ ಐಕ್ಯೂಎಸಿ ಸಂಯೋಜಕರಾಗಿ, ಮಂಗಳೂರು ವಿವಿ ಪಠ್ಯರಚನ ಮಂಡಳಿ ಹಾಗೂ ಪರೀಕ್ಷಾ ಮಂಡಳಿ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.