ಐಕಳ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ
Saturday, December 16, 2023
ಕಿನ್ನಿಗೋಳಿ:ಮನುಷ್ಯನ ಮಾನಸಿಕ ಹಾಗೂ ದೈಹಿಕ ಸದೃಡತೆಗೆ ಕ್ರೀಡೆಯು ಸಹಕಾರಿ ಎಂದು ಕಿನ್ನಿಗೋಳಿ ಲಯನ್ಸ್ ಕ್ಲಬ್ ನ ಅಧ್ಯಕ್ಷೆ ಹಿಲ್ಡಾ ಡಿಸೋಜ ಅವರು ಹೇಳಿದರು.ಅವರು ಐಕಳ ಶಕ್ತಿಕಲ್ಯಾಣಿ ಮೈದಾನದಲ್ಲಿ ಶನಿವಾರದಂದು ಐಕಳ ಕಂಬಲ ಫ್ರೆಂಡ್ಸ್ ವತಿಯಿಂದ ಆಶಕ್ತರಿಗೆ ವೈದ್ಯಕೀಯ ನೆರವಿಗಾಗಿ ಐಕಳ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷ ದೀವಾಕರ ಚೌಟ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.ಈ ವೇಳೆ ಉದ್ಯಮಿ ರಘುರಾಮ ಏಳಿಂಜೆ ಅವರನ್ನು ಶಾಲು ಹೊದಿಸಿ ಫಲಪುಷ್ಪಗಳನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭ ಐಕಳ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆ ಪದ್ಮಿನಿ ವಿ ಸಾಲ್ಯಾನ್ ,ಉದ್ಯಮಿ ರಘುರಾಮ ಏಳಿಂಜೆ,ಐಕಳ ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನದ ಅಧ್ಯಕ್ಷ ವಿನೂತನ್ ಕುಮಾರ್ ,ಜಯಪಾಲ ಶೆಟ್ಟಿ ಐಕಳಬಾವ,ರಮೇಶ್ ,ಐಕಳ ಗ್ರಾ.ಪಂ ನ ಸದಸ್ಯರುಗಳಾದ ಕಿರಣ್ ಕುಮಾರ್,ಚೇತನ್ ಶೆಟ್ಟಿ,ದಯೇಶ್ ,ಐಕಳ ಕಂಬಲ ಫ್ರೆಂಡ್ಸ್ ನ ಸದಸ್ಯರುಗಳಾದ ಶಶಿ,ಶ್ರೀಶ ಸರಾಫ್ ,ಸುನೀಲ್ ಡಿ.ಸೋಜ ,ಲಾಯಲ್ ಡಿ ಸೋಜ,ಸುನೀಲ್ ಲಾಯ್ಡ್ ಡಿ ಸೋಜ,ಶೇಖರ ಉಪಸ್ಥಿತರಿದ್ದರು.