-->

ಶ್ರೀ ಚಂದ್ರಶೇಖರ ಸ್ವಾಮೀಜಿಯವರಿಗೆ ಉಚ್ಛ ನ್ಯಾಯಾಲಯದಲ್ಲಿ ಐತಿಹಾಸಿಕ ಜಯದ ತೀರ್ಪು

ಶ್ರೀ ಚಂದ್ರಶೇಖರ ಸ್ವಾಮೀಜಿಯವರಿಗೆ ಉಚ್ಛ ನ್ಯಾಯಾಲಯದಲ್ಲಿ ಐತಿಹಾಸಿಕ ಜಯದ ತೀರ್ಪು

ಮಹತ್ವದ ಬೆಳವಣಿಗೆಯ   ಪ್ರಕರಣವೊಂದರಲ್ಲಿ ಆದಾಯ ತೆರಿಗೆ ಅಧಿಕಾರಿಗಳ ವಿರುದ್ಧ ನ್ಯಾಯಾಲಯದಲ್ಲಿ ಸುಧೀರ್ಘ ಕಾಲ ಸಮರ ಸಾರಿದ್ದ ಬೆಂಗಳೂರಿನ ಅಂತಾರಾಷ್ಟ್ರೀಯ ವಾಸ್ತುತಜ್ಞರು, ಆಧ್ಯಾತ್ಮಿಕ ಗುರು, ಜ್ಯೋತಿಷ್ಯರಾದ ಶ್ರೀ ಚಂದ್ರಶೇಖರ ಸ್ವಾಮೀಜಿಯರ ಪರವಾಗಿ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು ಪ್ರಕರಣದ ಆರೋಪಿ ಸ್ಥಾನದಲ್ಲಿದ್ದ ಆದಾಯ ತೆರಿಗೆ ಅಧಿಕಾರಿಗಳಿಗೆ ಹೈಕೋರ್ಟ್ ನ್ಯಾಯಾಧೀಶರು ತೀವ್ರವಾದ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. 
2013ರ ಮೇ 5ರಂದು ಆದಾಯ ತೆರಿಗೆ ದಾಳಿ ಎಂಬಂತೆ ಈ ಪ್ರಕರಣವನ್ನು ಬಿಂಬಿಸಿ, ಮಹತ್ತರವಾದ ದಾಖಲೆಗಳನ್ನು ಅಧಿಕಾರಿಗಳ ತಂಡವು ವಶಪಡಿಸಿಕೊಂಡಿತ್ತು ಇದನ್ನು ನೇರವಾಗಿ ನ್ಯಾಯಾಲಯದಲ್ಲಿಯೇ ಪ್ರಶ್ನಿಸಿದ ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಪರವಾಗಿ 2023ರ ಆಗಸ್ಟ್ 30ರಂದು ಬೆಂಗಳೂರಿನ ಹೈಕೋರ್ಟ್  ನ್ಯಾಯಪೀಠವು ಸ್ವಾಮೀಜಿಯವರಿಂದ ವಶಪಡಿಸಿಕೊಂಡ ಎಲ್ಲಾ ದಾಖಲೆಗಳನ್ನು ಕೂಡಲೆ ಹಿಂದುರಿಗಿಸಬೇಕು,ಹಾಗೂ ಸಮಾಜದಲ್ಲಿ ಅವರ ಬಗ್ಗೆ ಇರುವ  ಗೌರವಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಅಧಿಕಾರಿಗಳು ವರ್ತಿಸಬೇಕಾಗಿತ್ತು. ಕಾರಣವಿಲ್ಲದೇ, ಪ್ರಕರಣದಲ್ಲಿ ವಿನಾ ಕಾರಣ ಅವರ ಹೆಸರನ್ನು ತಳುಕು ಹಾಕಿಕೊಂಡು ಹಾಗೂ ಅವರ ವಿರುದ್ಧ ಕ್ರಮ ಕೈಗೊಂಡಿದ್ದು ಸಮಾಜವೇ ಮೆಚ್ಚುವಂತದ್ದಲ್ಲ  ಎಂದು ಆದೇಶಿಸಿದ್ದಾರೆ.  
ಈ ನಡುವೆ ಪ್ರಕರಣದಲ್ಲಿ ವಿವಿಧ ದಾಖಲೆಗೆ ಸಂಬಂಧಿಸಿದಂತೆ ಮೈಸೂರಿನ ಮಹಾರಾಜರಾದಶ್ರೀ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಸಹ ಸ್ವಾಮೀಜಿಯವರ ಪರವಾಗಿ ಸಾಕ್ಷಿ ನುಡಿದಿದ್ದು ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಪ್ರಕರಣಕ್ಕೆ ಪುಷ್ಠಿ ನೀಡಿತ್ತು. ಬೆಂಗಳೂರಿನ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು, ಕಮಿಷನರ್, ಸಹಾಯಕ ಕಮಿಷನರ್, ಜಿಲ್ಲಾ ಅಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಿ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಸ್ವಾಮೀಜಿಯವರು ನೇರವಾಗಿ ಇವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಯಾಕೆ ದಾಖಲಿಸಬಾರದು ಎಂದು ನ್ಯಾಯಾಧೀಶರೇ ಪ್ರಶ್ನಿಸಿರುವುದು ಪ್ರಕರಣದ ಗಂಭೀರತೆಗೆ ಸಾಕ್ಷಿಯಾಗಿದೆ.
ಸುಪ್ರೀಂ ಕೋರ್ಟ್ ನ ಹಿರಿಯ ವಕೀಲರು ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಪರವಾಗಿ ನ್ಯಾಯಾಲಯದಲ್ಲಿ ವಾದವನ್ನು ಮಂಡಿಸಿದ್ದರು.  ಈ ಆದೇಶವನ್ನು ಪ್ರಶ್ನಿಸಿ ಆದಾಯ ತೆರಿಗೆ ಇಲಾಖೆ ಯವರು ಹೈಕೋರ್ಟ್ ವಿಭಾಗ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಮನವಿಯನ್ನು ವಿಚಾರಣೆಗೆ ಕೈಗೊಂಡ ವಿಭಾಗ ಪೀಠ ಆದಾಯ ತೆರಿಗೆ ಯವರು ಸಲ್ಲಿಸಿದ್ದ ಅರ್ಜಿ ಯನ್ನು ತಿರಸ್ಕರಿಸಿ,ಮಹತ್ವದ ಹೈಕೋರ್ಟ್ ಆದೇಶವನ್ನು ಪಾಲಿಸುವಂತೆ ಸೂಚಿಸಿತು.ಹತ್ತು ವರ್ಷಗಳ ಸುದೀರ್ಘ ಕಾನೂನು ಸಮರದಲ್ಲಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಐತಿಹಾಸಿಕ ವಿಜಯ ಸಾಧಿಸಿದ್ದಾರೆ.
ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದ ಮೂಲಕ ಸಮಾಜದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಕ್ರೀಡೆಯಲ್ಲಿನ ಸಾಧಕರನ್ನು ಗುರುತಿಸಿ ಗೌರವಿಸಿ, ನೆರವನ್ನು ನೀಡುತ್ತಾ, ಸಾಮಾಜಿಕ ಚಿಂತನೆಯೊಂದಿಗೆ ಕೋಟ್ಯಾಂತರ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ಕಾರ್ಯರೂಪಕ್ಕೆ ಸ್ವಾಮೀಜಿಯವರ ಸಮಾಜ ಸ್ಪಂದನೆಯೇ ಈ ಗೆಲುವಿಗೆ ಮೂಲ ಕಾರಣ ಎಂದು ಅವರ ಅಭಿಮಾನಿಗಳು ವ್ಯಾಖ್ಯಾನಿಸಿದ್ದಾರೆ. ಇಂತಹ ಅಡತಡೆಗಳು ನೂರಾರು ಬಂದರೂ ಸಹ ಅವರನ್ನು ವಿಚಲಿತರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807