ಮುಲ್ಕಿ: ವಿಜಯ ರೈತ ಸೇವಾ ಸಂಘದಲ್ಲಿ ದೀಪಾವಳಿ ಆಚರಣೆ
Wednesday, November 15, 2023
ಮುಲ್ಕಿ: ಪ್ರತಿಷ್ಠಿತ ವಿಜಯ ರೈತ ಸೇವಾ ಸಂಘದಲ್ಲಿ ದೀಪಾವಳಿ ಆಚರಣೆ ವಿಜೃಂಭಣೆಯಿಂದ ನಡೆಯಿತು. ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ನರಸಿಂಹ ಭಟ್ ಲಕ್ಷ್ಮಿ ಪೂಜೆ ನೆರವೇರಿಸಿ ಆಶೀರ್ವಚನ ನೀಡಿ ಸಹಕಾರಿ ಕ್ಷೇತ್ರದಲ್ಲಿ ಮುಲ್ಕಿ ವಿಜಯಾ ರೈತ ಸೇವಾ ಸಹಕಾರಿ ಸಂಘ ಗ್ರಾಮೀಣ ಜನರ ಆಶೋತ್ತರಗಳನ್ನು ಈಡೇರಿಸುತ್ತಾ ಅಭಿವೃದ್ಧಿಯತ್ತ ಸಾಗುತ್ತಿದ್ದು ನಿರಂತರವಾಗಿ ನಡೆಯಲಿ ಎಂದರು.
Advertise:
ಈ ಸಂದರ್ಭ ವಿಜಯ ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ, ಆಡಳಿತ ನಿರ್ದೇಶಕ ಶಿವರಾಮ ಶೆಟ್ಟಿ, ನಿರ್ದೇಶಕರಾದ ಗಂಗಾಧರ ವಿ. ಶೆಟ್ಟಿ, ಬರ್ಕೆ ತೋಟ, ಅಶೋಕ್, ನರಸಿಂಹ ಪೂಜಾರಿ, ಪದ್ಮಿನಿ ವಿ ಶೆಟ್ಟಿ, ಪುಷ್ಪ ಎಂ, ರಾಜೇಶ್ ಶೆಟ್ಟಿ, ದೇವಪ್ರಸಾದ್ ಕೆಂಪುಗುಡ್ಡೆ, ನಂಜುಂಡ ಆರ್ ಕೆ, ರಾಮ ನಾಯ್ಕ ,ಯೂನಿಯನ್ ಬ್ಯಾಂಕ್ ಪ್ರಬಂಧಕ ಪ್ರಜ್ವಲ್ ಜೆ.ಹೆಗ್ಡೆ, ಪ್ರಕಾಶ್ ಭಂಡಸಾಲೆ ಹಾಗೂ ಆಡಳಿತ ಮಂಡಳಿಯ ಸಿಬ್ಬಂದಿ ವರ್ಗ
ಮತ್ತಿತರರು ಉಪಸ್ಥಿತರಿದ್ದರು