-->

ಕಟೀಲು ಗೋಶಾಲೆಯಲ್ಲಿ  ಗೋಪೂಜೆ ಸಂಭ್ರಮ

ಕಟೀಲು ಗೋಶಾಲೆಯಲ್ಲಿ ಗೋಪೂಜೆ ಸಂಭ್ರಮ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮಾಂಜದಲ್ಲಿರುವ ಗೋಶಾಲೆಯಲ್ಲಿ ಸಜ್ಜನ ಬಂಧುಗಳ ಸಂಯೋಜನೆಯಲ್ಲಿ ಹತ್ತನೇ ವರ್ಷದ ಗೋಪೂಜೆ ನಡೆಯಿತು. ದನಗಳಿಗೆ ಅವಲಕ್ಕಿ ಪಂಚಕಜ್ಜಾಯ, ದೋಸೆ, ಹಿಂಡಿ ಹಣ್ಣುಗಳನ್ನು ನೀಡಲಾಯಿತು. ಅರ್ಚಕ ವೆಂಕಟರಮಣ ಆಸ್ರಣ್ಣ ಗೋವುಗಳಿಗೆ ಆರತಿ ಬೆಳಗಿದರು.
ಶ್ರೀಹರಿನಾರಾಯಣದಾಸ ಆಸ್ರಣ್ಣ ಮಾತನಾಡಿ, ಕಟೀಲು ದೇಗುಲದ ಗೋಶಾಲೆಯಲ್ಲಿ ದೇಸೀ ದನಗಳಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಗೋಮಾಳ ಜಾಗ ದೇಗುಲದ ಹೆಸರಿಗೆ ಇತ್ತೀಚಿಗಷ್ಟೇ ಆಗಿದ್ದು, ಗೋಶಾಲೆಯನ್ನು ಇನ್ನಷ್ಟು ವಿಸ್ತರಿಸಲು ಯೋಚಿಸಲಾಗಿದೆ. ಈಗ ೧೫೨ ಗೋವುಗಳಿವೆ. ಮಿಶ್ರ ತಳಿ ೬೫. ಮಲೆನಾಡ ಗಿಡ್ಡ ೬೦, ಜೆರ್ಸಿ ೧೦, ಗೀರ್ ೮, ಸಾಯಿವಾಲಾ ೧, ಹಳ್ಳಿಕಾರ್ ೩, ಎಚ್‌ಎಫ್ ೨, ಪುಂಗನೂರು ೩ ಗೋವುಗಳಿದ್ದು, ೯೦ ಗಂಡು ೬೨ ಹೆಣ್ಣು ದನಗಳಾಗಿವೆ. ಕಳೆದ ವರ್ಷ ಗೋಸೇವೆಗೆ ದೇಗುಲವು ಸುಮಾರು ರೂ. ೫೦ಲಕ್ಷ ವೆಚ್ಚ ಮಾಡಿದೆ ಎಂದು ಹೇಳಿದರು.
ಅರ್ಚಕ ಅನಂತಪದ್ಮನಾಭ ಆಸ್ರಣ್ಣ ಗೋಪಾಲನಾ ಸಿಬಂದಿಗಳನ್ನು ಗೌರವಿಸಿದರು. ಸುಮಂತ್ ಶೆಟ್ಟಿ ಮಂಗಳೂರು, ಜಯರಾಮ ಮುಕ್ಕಾಲ್ದಿ, ಈಶ್ವರ ಕಟೀಲು, ರಾಜೇಂದ್ರ ಪ್ರಸಾದ್, ದೇವದಾಸ ಮಲ್ಯ, ತಿಮ್ಮಪ್ಪ ಕೋಟ್ಯಾನ್, ಪುರುಷೋತ್ತಮ್, ಕೇಶವ ಕರ್ಕೇರ, ಸ್ಟ್ಯಾನಿ ಪಿಂಟೋ, ಗೀತಾ ಪೂಜಾರ‍್ತಿ, ರಾಮ್, ಪ್ರಕಾಶ್ ಆಚಾರ್, ಸಂತೋಷ್ ಶೆಟ್ಟಿ, ಸತೀಶ್ ಶೆಟ್ಟಿ, ನಿಶಾಂತ್ ಕಿಲೆಂಜೂರು, ಅಕ್ಷಯ್ ಪುನರೂರು, ದೇವೀಪ್ರಸಾದ್, ಶಿವಾಜಿ, ಸದಾನಂದ ಬೆಳ್ಚಡ, ಚ್ಯವನ ಉಡುಪ, ಸಮೀಕ್ಷಾ ಮತ್ತಿತರರಿದ್ದರು.

Advertise in articles 1

advertising articles 2

Advertise under the article

ಕಾರ್ಯಕ್ರಮಗಳ ನೇರ ಪ್ರಸಾರ, ಚಿತ್ರೀಕರಣ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 8618554807