ಕೆಎಸ್ ರಾವ್ ನಗರ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ರಾಘವ ಎ ಸುವರ್ಣ ನಿಧನ
Friday, September 22, 2023
ಮುಲ್ಕಿ: ಮುಲ್ಕಿ ಸಮೀಪದ ಕೆಎಸ್ ರಾವ್ ನಗರ ನಿವಾಸಿ ರಾಘವ ಎ ಸುವರ್ಣ (80) ಅನಾರೋಗ್ಯದಿಂದ ಶುಕ್ರವಾರ ಬೆಳಿಗ್ಗೆ ನಿಧನರಾದರು.
ಅವರು ಪತ್ನಿ ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಅವರು ಮುಲ್ಕಿ ಕೆಎಸ್ ರಾವ್ ನಗರದ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ
ಪ್ರಸ್ತುತ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಕಳೆದ ಹಲವಾರು ವರ್ಷಗಳ ಹಿಂದೆ ಪ್ರತಿಷ್ಠಿತ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸದಸ್ಯರಾಗಿ ಹಾಗೂ ಭಜನಾ ಮಂಡಳಿಯ ಸದಸ್ಯರಾಗಿ, ಭಜನಕಾರರಾಗಿದ್ದರು.
ಬಾಂಬೆ ಟೈಲರ್ ಎಂದೇ ನಾಮಾಂಕಿತರಾಗಿದ್ದ ಅವರು ಮುಲ್ಕಿ ಪರಿಸರದ ವಿವಿಧ ದೇವಸ್ಥಾನಗಳ ಬ್ರಹ್ಮಕಲಶೋತ್ಸಕ್ಕೆ ಹಳೆಯ ಕಾಲದ ಚಪ್ಪರ, ಶಾಮಿಯಾನ ಒದಗಿಸುತ್ತಿದ್ದರು. ಮುಲ್ಕಿಯ ಮಾಜಿ ಶಾಸಕರಾದ ಕೆ ಸೋಮಪ್ಪ ಸುವರ್ಣ, ಡಾ. ದಾಮೋದರ್ ಮುಲ್ಕಿಗೆ ಆಪ್ತರಾಗಿದ್ದ ಅವರು ವಿವಿಧ ರಾಜಕೀಯ ಪಕ್ಷಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು.
ಅವರ ನಿಧನಕ್ಕೆ ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತುತಜ್ಞ ಹಾಗೂ ವೈಜ್ಞಾನಿಕ ಜ್ಯೋತಿಷಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ವೇ.ಮೂ.ವಾದಿರಾಜ ಉಪಾಧ್ಯಾಯ ಕೊಲಕಾಡಿ,ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು,
ಶಾಸಕ ಉಮಾನಾಥ ಕೋಟ್ಯಾನ್, ಮಾಜೀ ಸಚಿವ ಅಭಯ ಚಂದ್ರ, ವಿನಯ ಕುಮಾರ್ ಸೊರಕೆ, ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಉದ್ಯಮಿ ಅರವಿಂದ ಪೂಂಜ ಕಾರ್ನಾಡ್, ಜಿಎಸ್‌ಬಿ ಸಭಾದ ಅತುಲ್ ಕುಡ್ವ ,ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ಸುವರ್ಣ, ಮಾಜೀ ಅಧ್ಯಕ್ಷ ಗೋಪಿನಾಥ ಪಡಂಗ , ಕೆಎಸ್ ರಾವ್ ನಗರದ ಬಿಲ್ಲವ ಸಂಘದ ಅಧ್ಯಕ್ಷ ಮಹಾಬಲ ಸನಿಲ್, ಉಪಾಧ್ಯಕ್ಷ ಹರಿಶ್ಚಂದ್ರ ಕೋಟ್ಯಾನ್, ಗೌರವ ಸಲಹೆಗಾರ ಜನಾರ್ದನ ಬಂಗೇರ, ಮುಲ್ಕಿ ವಿಜಯ ರೈತ ಸೇವಾ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ, ಬಪ್ಪನಾಡು ಲೈನ್ಸ್ ಕ್ಲಬ್ ಇನ್ಸ್ಪೈರ್ ನ ಗೌರವಾಧ್ಯಕ್ಷ ವೆಂಕಟೇಶ್ ಹೆಬ್ಬಾರ್
ಅತಿಕಾರಿ ಬೆಟ್ಟು ಗ್ರಾಪಂ ಉಪಾಧ್ಯಕ್ಷ ಮನೋಹರ ಕೋಟ್ಯಾನ್ , ಮುಲ್ಕಿ ನ.ಪಂ ಸದಸ್ಯ ಹರ್ಷ ರಾಜ ಶೆಟ್ಟಿ, ಸತೀಶ್ ಅಂಚನ್, ಯೋಗೀಶ್ ಕೋಟ್ಯಾನ್,ಪುತ್ತು ಬಾವ, ಮುಲ್ಕಿ ನ.ಪಂ.ಮುಖ್ಯಾಧಿಕಾರಿ ಇಂದು ಎಂ,ಮಾಜೀ ಅಧ್ಯಕ್ಷ ಸುನಿಲ್ ಆಳ್ವ, ಹಿಂದೂ ಯುವ ಸೇನೆ ಮುಲ್ಕಿ ಘಟಕದ ಅಧ್ಯಕ್ಷ ದಿನೇಶ್ ಕೊಲ್ನಾಡ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ್ ಬೆರ್ನಾಡ್, ಡಾ. ಹರಿಶ್ಚಂದ್ರ ಪಿ.ಸಾಲ್ಯಾನ್, ವಿಠಲ್ ಎನ್ ಎಂ,
ಶಶಿಂದ್ರ ಸಾಲ್ಯಾನ್ ಪಯ್ಯೋಟ್ಟು , ಉದಯಕುಮಾರ್ ಶೆಟ್ಟಿ ಅಧಿಧನ್ , ಉದ್ಯಮಿ ಶಿವರಾಮ್ ಜಿ ಅಮೀನ್, ಕಿಶೋರ್ ಶೆಟ್ಟಿ ಬಪ್ಪನಾಡು, ಗೌತಮ್ ಜೈನ್ ಮುಲ್ಕಿ ಅರಮನೆ, ಉಮೇಶ್ ಮಾನಂಪಾಡಿ, ಪತ್ರಕರ್ತ ಪುನೀತ್ ಕೃಷ್ಣ, ಹರೀಶ್ ಹೆಜ್ಮಾಡಿ, ಶಂಕರ್ ಪಡಂಗ ಮತ್ತಿತರರು ಬಿಲ್ಲವ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.