ಅತಿಕಾರಿಬೆಟ್ಟುವಿನ ಹಿಂದೂ ರುದ್ರಭೂಮಿಗೆ ಧರ್ಮಸ್ಥಳ ಧರ್ಮಧಿಕಾರಿಯವರಿಂದ ರೂ. 2.50 ಲಕ್ಷ ಅನುದಾನ
Wednesday, August 2, 2023
ಮುಲ್ಕಿ:ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಮುಲ್ಕಿ ವಲಯದ ಅತಿಕಾರಿಬೆಟ್ಟು ಪಂಚಾಯತಿ ವ್ಯಾಪ್ತಿಯ ಹಿಂದೂ ರುದ್ರಭೂಮಿಗೆ ಧರ್ಮಸ್ಥಳ ಧರ್ಮಧಿಕಾರಿಯವರಿಂದ ರೂಪಾಯಿ 2.50 ಲಕ್ಷ ಅನುದಾನವನ್ನು ಬಜಪೆ ತಾಲೂಕಿನ ಯೋಜನಾಧಿಕಾರಿ ಕರುಣಾಕರ್ ಆಚಾರ್ಯ ರವರು ಮಂಜೂರಾತಿ ಪತ್ರವನ್ನು ಹಸ್ತಾಂತರಿಸಿದರು
ಈ ಸಂದರ್ಭ ಅತಿಕಾರಿ ಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಮನೋಹರ ಕೋಟ್ಯಾನ್ ಮೇಲ್ವಿಚಾರಕರಾದ ನಿಶ್ಮಿತ ಶೆಟ್ಟಿ, ಸೇವಾಪ್ರತಿನಿಧಿ ಸುಕನ್ಯಾ ಹಾಗೂ ಒಕ್ಕೂಟ ಅಧ್ಯಕ್ಷರು ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.