-->

ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು 🙏

ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು  🙏
ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯಗಳು 🙏
ಶ್ರೀದೇವಿ ಸ್ಪೋರ್ಟ್ಸ್ ಅ್ಯಂಡ್ ಗೇಮ್ಸ್ ಕ್ಲಬ್ ಕೆಂಜಾರು  - ಕರಂಬಾರು ಆಶ್ರಯದಲ್ಲಿ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮ

ಶ್ರೀದೇವಿ ಸ್ಪೋರ್ಟ್ಸ್ ಅ್ಯಂಡ್ ಗೇಮ್ಸ್ ಕ್ಲಬ್ ಕೆಂಜಾರು - ಕರಂಬಾರು ಆಶ್ರಯದಲ್ಲಿ ಕೆಸರ್ ಡ್ ಒಂಜಿ ದಿನ ಕಾರ್ಯಕ್ರಮ

ಬಜಪೆ: ಕೆಂಜಾರು - ಕರಂಬಾರಿನ  ಶ್ರೀದೇವಿ   ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ನ  ವತಿಯಿಂದ ಕರಂಬಾರಿನ ಕೊರ್ದಬ್ಬು ದೈವಸ್ಥಾನದ ಬಳಿಯ ಗದ್ದೆಯಲ್ಲಿ ಆಯೋಜಿಸಲಾಗಿದ್ದ  ಕೆಸರ್ಡ್ ಒಂಜಿ ದಿನ ಕಾರ್ಯಕ್ರಮವನ್ನು ಕರಂಬಾರು ಪಡುಮನೆ ರತ್ನಾ ಲಕ್ಕಪ್ಪ ಶೆಟ್ಟಿ ವೇದಿಕೆಯಲ್ಲಿ ಕಳಸೆಯಲ್ಲಿ ಇಡಲಾದ ತೆಂಗಿನ ಕೊಂಬನ್ನು ಆರಳಿಸಿ ದೀಪ ಬೆಳಗಿಸಿ ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಆಗಷ್ಟ್ 13 ರಂದು  ಉದ್ಘಾಟಿಸಿದರು. ಉದ್ಘಾಟನೆಗೆ ಮೊದಲು ಶ್ರೀದೇವಿ ಭಜನಾ ಮಂದಿರದಿಂದ ಕೆಸರುಗದ್ದೆಗೆ ಭಜನೆಯೊಂದಿಗೆ ಅದ್ದೂರಿ ಮೆರವಣೆಗೆಯು ನಡೆಯಿತು.ಕಾರ್ಯಕ್ರಮದಲ್ಲಿ ನಾಗರೀಕರ ಪರವಾಗಿ ವೇಣುಗೋಪಾಲ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಶ್ರೀದೇವಿ ಸ್ಪೋರ್ಟ್ಸ್ ಮತ್ತು ಗೇಮ್ಸ್ ಕ್ಲಬ್ ನ ಅಧ್ಯಕ್ಷ ರವಿ ಶೆಟ್ಟಿ , ಶ್ರೀದೇವಿ ಭಜನಾ ಮಂದಿರದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀ ಟಿ.ಅರ್.ಶ್ರೀಧರ್ ಶ್ರೀಮಂತರಾಯ ಪೇಜಾವರ,ಪುಣೆ ಬಂಟ್ಸ್ ಅಸೊಸಿಯೇಶನ್ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ,ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ,ಕರಂಬಾರಿನ ಶ್ರೀಮಾರಿಯಮ್ಮಕೋಟೆ ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷ ಜಗನ್ನಾಥ ಸಾಲ್ಯಾನ್ ,ಕೆಂಜಾರು - ಕರಂಬಾರು ಶ್ರೀದೇವಿ ಭಜನಾ ಮಂದಿರದ ಅಧ್ಯಕ್ಷ  ಶೇಖರ್ ಬಂಗೇರ,ಕೆಂಜಾರು ಶ್ರೀ ರಾಮಾಂಜನೇಯ ದೇವಸ್ಥಾನದ ಅಧ್ಯಕ್ಷ ಮಹಾಬಲ ಪೂಜಾರಿ,ಜಾನಪದ ವಿದ್ವಾಂಸ ಕೆ.ಕೆ ಪೇಜಾವರ,ಮಾಜಿ ಮೇಯರ್ ಗಳಾದ ಶಶಿಧರ ಹೆಗ್ಡೆ,ದಿವಾಕರ್ ಪಾಂಡೇಶ್ವರ,ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಮಂಗಳೂರು ಅಧ್ಯಕ್ಷ ಸಹಕಾರರತ್ನ ಚಿತ್ತರಂಜನ್ ಬೋಳಾರ್,ಕರಂಬಾರು ಮಹಾಲಕ್ಷ್ಮೀ ದೇವಸ್ಥಾನದ ಅಧ್ಯಕ್ಷ ಲಕ್ಷ್ಮಣ್ ಬಂಗೇರ,ಗಣೇಶ್ ಅರ್ಬಿ,ರಮೇಶ್ ಪೂಜಾರಿ ನಡುಪಟ್ಣ ಕರಂಬಾರು,ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಹರೀಶ್ಚಂದ್ರ,ಹಿಂದೂ ಸಂಘಟನೆಯ ಮುಖಂಡ ಸತ್ಯಜಿತ್ ಸುರತ್ಕಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ರಾಜೇಂದ್ರ ಪ್ರಸಾದ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.


ಕಾರ್ಯಕ್ರಮದಲ್ಲಿ ನಿಧಿಶೋಧ,ತಪ್ಪಂಗಾಯಿ,ಹಿಮ್ಮುಖ ಓಟ,ಹಗ್ಗ ಜಗ್ಗಾಟ,ಸಮೂಹ ನೃತ್ಯ ,ಮಡಕೆ ಒಡೆಯುವ ಸ್ಪರ್ಧೆ ಹಾಗೂ ಮತ್ತಿತರ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು.ಕರೊನಾ ಸಂದರ್ಭ ಸಹಕರಿಸಿದ ಆಶಾ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಗೌರವಾರ್ಪಣೆ, ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಪದಕ ಗಳಿಸಿದ ಕ್ರೀಡಾಳುಗಳಿಗೆ ಸನ್ಮಾನ, ಕೆಂಜಾರು-ಕರಂಬಾರು ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ನಡೆಯಿತು.ಸಂಜೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭವು ನಡೆಯಿತು.
ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿರಿ 9880954630,8618554807

Advertise in articles 1

advertising articles 2

ಸುದ್ದಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ 9880954630,8618554807

ಸುದ್ದಿಗಳಿದ್ದರೆ Chigurunewss@gmail.com or ವಾಟ್ಸಪ್ ಸಂಖ್ಯೆ 8618554807 ಗೆ ಕಳಿಸಿರಿ