ಬಸ್ಸಿನ ವೇಗ ನಿಯಂತ್ರಣ, ಸಮಯದ ಪಾಲನೆಯ ವಿಷಯದಲ್ಲಿ ಪ್ರಮುಖರೊಂದಿಗೆ ಸಭೆ
Saturday, July 1, 2023
ಮಂಗಳೂರು: ತಾಲೂಕಿನಾದ್ಯಂತ ವಿಶೇಷವಾಗಿ ಮಂಗಳೂರು ಹೊರವಲಯದಿಂದ ಮೂಡಬಿದ್ರೆಗೆ ಸಾಗುವ ರಸ್ತೆಯಲ್ಲಿ ಆಗಾಗ ಅಪಘಾತಗಳು ಸಂಭವಿಸಿ ಅಮಾಯಕರು ಪ್ರಾಣ ತ್ಯಜಿಸಿದ್ದಾರೆ.
ಈ ಸಾವು, ನೋವು ತಪ್ಪಿಸಲು, ಬಸ್ಸಿನ ವೇಗ ನಿಯಂತ್ರಣ, ಸಮಯದ ಪಾಲನೆಯ ವಿಷಯದಲ್ಲಿ ಪೊಲೀಸ್ ಕಮೀಷನರ್, ಟ್ರಾಫಿಕ್ ಪೊಲೀಸ್ ಅಧಿಕಾರಿಗಳು, ಆರ್ ಟಿಒ ಅಧಿಕಾರಿಗಳು, ಬಸ್ ಅಸೋಸಿಯೇಶನ್ ಪ್ರಮುಖರೊಂದಿಗೆ ಶಾಸಕ ಡಾ. ಭರತ್ ಶೆಟ್ಟಿಯವರು ಸಭೆ ನಡೆಸಿದರು.
ಸರ್ವಿಸ್ ಬಸ್, ಎಕ್ಸಪ್ರೆಸ್ ಬಸ್ ವೇಗ ನಿಯಂತ್ರಣ, ಸಮಯ ಹೊಂದಾಣಿಕೆ, ಸ್ಟಾಪ್ ವಿಷಯದಲ್ಲಿ ಬಸ್ ಅಸೋಸಿಯೇಶನ್ ಗಳೊಂದಿಗೆ ಸಮಾಲೋಚನೆ ನಡೆಸಿ ಅಪಘಾತಗಳನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತೀರ್ಮಾನಿಸಲಾಗಿದೆ. ಸರ್ವಿಸ್ ಬಸ್ ಹಾಗೂ ಎಕ್ಸಪ್ರೆಸ್ ಬಸ್ಸಿನ ವೇಗವನ್ನು ನಿಯಂತ್ರಿಸಿ ಬಸ್ ಚಲಾಯಿಸಬೇಕು ಮತ್ತು ಬಸ್ಸಿನಲ್ಲಿ ಸರ್ವಿಸ್ ಬಸ್ ಮತ್ತು ಎಕ್ಸಪ್ರೆಸ್ ಬಸ್ ಎಂದು ಬೋರ್ಡ್ ಹಾಕಬೇಕು. ಎಕ್ಸಪ್ರೆಸ್ ಬಸ್ಸಿನವರಿಗೆ ಕೆಲವು ರಿಕ್ವೆಸ್ಟ್ ಸ್ಟಾಪ್ ಕಡಿಮೆ ಮಾಡಿದ್ದು, ಇದರಿಂದ ಉಳಿತಾಯವಾಗುವ ಸಮಯದಲ್ಲಿ ನಿಯಂತ್ರಣ ವೇಗದಲ್ಲಿ ಮಾತ್ರ ಚಲಾಯಿಸಬೇಕು. ಸಮಯ ಹೊಂದಾಯಿಸಲು ಅನಗತ್ಯ ವೇಗದಲ್ಲಿ ಬಸ್ಸುಗಳು ಸಂಚರಿಸಿ ಅಪಘಾತ ಉಂಟಾಗುವುದನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಕುಲದೀಪ್ ಕುಮಾರ್ ಜೈನ್ ಐಪಿಎಸ್ ಪೋಲಿಸ್ ಆಯುಕ್ತರು, ಮಂಗಳೂರು ನಗರ, ದಿನೇಶ್ ಕುಮಾರ್ ಉಪ ಪೊಲೀಸ್ ಆಯುಕ್ತರು,ಅಪರಾಧ ಮತ್ತು ಸಂಚಾರ ಮಂಗಳೂರು ನಗರ, ವಿಶ್ವನಾಥ ನಾಯಕ್ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ,
ಗೀತಾ ಕುಲಕರ್ಣಿ ಎಸಿಪಿ ಸಂಚಾರ ಉಪ ವಿಭಾಗ,ಮನೋಜ್ ನಾಯಕ್ ಎಸಿಪಿ ಉತ್ತರ ಉಪ ವಿಭಾಗ, ಪಣಂಬೂರು, ಸಂಚಾರ ಠಾಣೆ ಇನ್ಸ್ಪೆಕ್ಟರ್ ಗಳು, ಬಜ್ಪೆ ಮತ್ತು ಮೂಡುಬಿದಿರೆ ಠಾಣೆಯ ಇನ್ಸ್ಪೆಕ್ಟರ್ ಗಳು, ರಾಜವರ್ಮ ಬಲ್ಲಾಳ್ ಅಧ್ಯಕ್ಷರು, ಕೆನರಾ ಬಸ್ ಮಾಲಕರ ಸಂಘ, ಜಯಶೀಲ ಅಡ್ಯಂತಾಯ ಅಧ್ಯಕ್ಷರು,ದ.ಕ ಜಿಲ್ಲಾ ಬಸ್ ಮಾಲಕರ ಸಂಘ,ದುರ್ಗಾಪ್ರಸಾದ ಹೆಗ್ಡೆ ಅಧ್ಯಕ್ಷರು ಕಿನ್ನಿಗೋಳಿ ವಲಯ ಬಸ್ ಮಾಲಕರ ಸಂಘ, ನಾರಾಯಣ ಪಿ.ಎಂ ಅಧ್ಯಕ್ಷರು ಮೂಡುಬಿದಿರೆ ವಲಯ ಮಾಲಕರ ಸಂಘ ಹಾಗೂ ಪ್ರಮುಖರು ಉಪಸ್ಥಿತರಿದ್ದರು.