ತೋಕೂರು ದೇವಸ್ಥಾನಕ್ಕೆ ಉಚಿತ ಬಸ್ಸಿನ ವ್ಯವಸ್ಥೆ
Sunday, May 14, 2023
ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪುನಃಪ್ರತಿಷ್ಠೆ, ಅಷ್ಟ ಬಂಧ ಬ್ರಹ್ಮಕುಂಭಾಭಿಷೇಕ ಮತ್ತು ನಾಗಮಂಡಲೋತ್ಸವದ ಪ್ರಯುಕ್ತ ಕೆ.ಎಸ್.ಆರ್.ಟಿ.ಸಿ ನಿಗಮ ದಿಂದ ಮೇ21 ರಿಂದ 23 ರ ವರೆಗೆ ಉಚಿತ ಬಸ್ಸಿನ ವ್ಯವಸ್ಥೆ ಇದೆ ಎಂದು
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮಂಗಳೂರು ವಿಭಾಗದ ಡೀವಿಜನಲ್ ಕಂಟ್ರೋಲರ್, ಶ್ರೀ ರಾಜೇಶ್ ಶೆಟ್ಟಿ ಅವರು ಹೇಳಿದರು.ಅವರು ದೇವಳಕ್ಕೆ ಭೇಟಿ ನೀಡಿದ ಸಂದರ್ಭ ಈ ಬಗ್ಗೆ ಮಾಹಿತಿಯನ್ನು ನೀಡಿದರು.
ದೇವಳಕ್ಕೆ ಬರುವಂತಹ ಭಕ್ತರಿಗಾಗಿ ಉಚಿತ ಬಸ್ಸಿನ ಸೇವೆಯು ಸುರತ್ಕಲ್,ಮೂಲ್ಕಿ ಮತ್ತು ಕಿನ್ನಿಗೋಳಿ ಯಿಂದ ಲಭ್ಯವಿರುತ್ತದೆ.