ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೇ 10 ರಿಂದ 23 ರ ವರೆಗೆ ಪುನ: ಪ್ರತಿಷ್ಠೆ.ಬ್ರಹ್ಮಕುಂಭಾಭಿಷೇಕ.ನಾಗಮಂಡಲೋತ್ಸವ
Monday, May 8, 2023
ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಧಾನದಲ್ಲಿ ಮೇ 10 ರಿಂದ 23 ರ ವರೆಗೆ ಪುನ: ಪ್ರತಿಷ್ಠೆ.ಬ್ರಹ್ಮಕುಂಭಾಭಿಷೇಕ.ನಾಗಮಂಡಲೋತ್ಸವ ನಡೆಯಲಿದೆ ಎಂದು ದೇವಸ್ಧಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ ಹೇಳಿದರು.
ಅವರು ಭಾನುವಾರದಂದು ದೇವಸ್ಧಾನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು . ಮೇ 10 ರಂದು ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥಾಪಾದರ ಉಪಸ್ದಿತಿಯಲ್ಲಿ ಸಾಮೂಹಿಕ ದೇವತಾ ಪ್ರಾರ್ಥನೆ ತೋರಣ ಮಹೂರ್ತ ಉಗ್ರಾಣ ಮಹೂರ್ತ ನಡೆಯಲಿದೆ.
ಮೇ 12 ರಂದು ಶ್ರೀ ಸುಬ್ರಹ್ಮಣ್ಯ ದೇವರ ಪ್ರತಿಷ್ಠೆ.ಮೇ 14 ರಂದು ಶ್ರೀ ಮಹಾಗಣಪತಿ ಹಾಗೂ ಶ್ರೀ ದುರ್ಗಾದೇವಿಯ ಪ್ರತಿಷ್ಠೆ ಮೇ 17 ರಂದು ಶ್ರೀ ಮಹಾಗಣಪತಿ ಹಾಗೂ ಶ್ರೀ ದುರ್ಗಾದೇವಿಯ ಬ್ರಹ್ಮಕಲಶ ಮೇ 21 ರಂದು ಬೆಳಗ್ಗೆ 5.45 ರ ಮೇಷ ಲಗ್ನದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕುಂಭಾಭಿಷೇಕ.ಮಧ್ಯಾಹ್ನ 11 ಗಂಟೆಗೆ ಹಗಲು ರಥೋತ್ಸವ.ಪಲ್ಲಪೂಜೆ.ಮಹಾ ಅನ್ನಸಂತರ್ಪಣೆ ರಾತ್ರಿ ಶಯನೋತ್ಸವ ಮೇ 23 ರಂದು ನಾಗಮಂಡಲೋತ್ಸವ ಹಾಗೂ ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.ಪರಿಸರದ ವಿವಿಧ ಸಂಘ ಸಂಸ್ಧೆಗಳು ಕಾರ್ಯಕ್ರಮಗಳಿಗೆ ಕೈ ಜೋಡಿಸಿದ್ದು ಲಕ್ಷಾಂತರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ.ಸೂಕ್ತ ಪಾರ್ಕಿಂಗ್ ವ್ಯವಸ್ಧೆ,ವಿಕಲಚೇತನರಿಗೆ ವಿಶೇಷ ವ್ಯವಸ್ದೆಯೊಂದಿಗೆ ದೇವರ ದರ್ಶನ ಭಾಗ್ಯ ಪ್ರತಿಯೊಂದು ಕಾರ್ಯಕ್ರಮಗಳಿಗೂ ಆಯಾ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದರು.
ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ 1987 ರ ಬಳಿಕ 36 ವರ್ಷಗಳ ನಂತರ ಕ್ಷೇತ್ರದಲ್ಲಿ ಬ್ರಹ್ಮಕಲಶ ನಡೆಯುತ್ತಿದ್ದು ಸುಮಾರು 10 ಕೋಟಿ ವೆಚ್ಚದಲ್ಲಿ ಜೀರ್ಣೋದ್ದಾರದ ಕಾರ್ಯಗಳು ನಡೆದಿದೆ ಎಂದರು.ಸ್ಥಳೀಯರು ಶ್ರಮದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವಸ್ಥಾನದ ಜೀರ್ಣೋದ್ದಾರದ ಕಾರ್ಯದಲ್ಲಿ ಕೈಜೋಡಿಸಿದ್ದರು.ಬ್ರಹ್ಮಕಲಶೋತ್ಸವವಕ್ಕೆ ದಾನಿಗಳ ಸಹಕಾರ ನಿರಂತವಾಗಿರಲಿ ಎಂದರು.
ಈಸಂದರ್ಭ ಪ್ರಧಾನ ಸಂಚಾಲಕ ಡಾ. ಸೋಂದಾ ಭಾಸ್ಕರ್ ಭಟ್.ವ್ಯವಸ್ಧಾಪನ ಸಮಿತಿಯ ಅಧ್ಯಕ್ಷ ಹರಿದಾಸ್ ಭಟ್,ದೇವಸ್ಧಾನದ ಪ್ರಧಾನ ಅರ್ಚಕ ಮಧುಸೂದನ್ ಆಚಾರ್,ವಿಜಯ್ ಕುಮಾರ್ ರೈ,ಪುರುಷೋತ್ತಮರಾವ್,ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ಮೋಹನ್ ದಾಸ್,ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಣ್ಣ ಬಿ ದೇವಾಡಿಗ,ಕಾರ್ಯದರ್ಶಿ ಪುರುಷೋತ್ತಮ ಕೋಟ್ಯಾನ್,ರಮೇಶ್ ಅಮೀನ್,ಸಂಪತ್ ದೇವಾಡಿಗ,ವಿನೋದ್ ಸುವರ್ಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.