Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯಲ್ಲಿ 71ನೇ ಕನ್ನಡ ರಾಜ್ಯೋತ್ಸವ ಆಚರಣೆ

ಬಜಪೆ:ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯಲ್ಲಿ   71ನೇ ಕನ್ನಡ ರಾಜ್ಯೋತ್ಸವವನ್ನು  ಸಂಭ್ರಮದಿಂದ ಆಚರಿಸಲಾಯಿತು. 
 ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ  ಶ್ರೀಮತಿ ಇಂದಿರಾ ಎನ್ ರಾವ್  ಮಾತನಾಡಿ 
ಕನ್ನಡ ರಾಜ್ಯೋತ್ಸವವನ್ನು ಕೇವಲ ಧ್ವಜಾರೋಹಣ ಮಾಡಿ, ಸಿಹಿ ಹಂಚಿ ಸಂಭ್ರಮಿಸುವ ದಿನವನ್ನಾಗಿ ಸೀಮಿತಗೊಳಿಸಬಾರದು. ಬದಲಾಗಿ ಕನ್ನಡವನ್ನು ಮಾತನಾಡುವ, ಓದುವ, ಬರೆಯುವ ಮತ್ತು ಗೌರವಿಸುವ ಸಂಕಲ್ಪ ಮಾಡುವ ದಿನವನ್ನಾಗಿ ಆಚರಿಸಬೇಕು. ಅನ್ಯ ಭಾಷೆಗಳನ್ನು ಕಲಿಯುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅನ್ಯ ಭಾಷೆಗಳನ್ನು ಕಲಿಯುವ ಭರದಲ್ಲಿ ನಮ್ಮ ಮಾತೃಭಾಷೆಯನ್ನು ಮರೆಯಬಾರದು.
ನಮ್ಮ ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯೂ ಕನ್ನಡದ ಕಂಪನ್ನು ತನ್ನ ಬದುಕಿನಲ್ಲಿ ಪಸರಿಸುವ ಕನ್ನಡದ ರಾಯಭಾರಿಯಾಗಬೇಕು. ಕನ್ನಡ ನಾಡು, ನುಡಿ, ನೆಲ, ಜಲ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳಾದ ವಿದ್ಯಾ ಕಿಂಜಲ್ ಅಪ್ಸಾನ ಸಾನ್ವಿಕ ಎಸ್ ಶೆಟ್ಟಿ ಖುಷಿ ಸಾನಿಕ ವರ್ಷ ಎಸ್ ಪೂಜಾರಿ ಸ್ವರಚಿತ ಕಥೆ, ಕವನ, ಲೇಖನಗಳನ್ನು ಪ್ರಸ್ತುತಪಡಿಸಿದರು. 
ಈ ಸಂದರ್ಭ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿದ್ಯಾಗೌರಿ ಕಾರ್ಯಕ್ರಮ ನಿರೂಪಿಸಿದರು.