ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಏಳನೇ ವರ್ಷದ ಯಾನಾರಂಭ
ಹಳೆಯಂಗಡಿ:ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ನಾಗವೃಜ ಕ್ಷೇತ್ರ ಪಾವಂಜೆ ಏಳನೇ ವರ್ಷದ ಯಾನಾರಂಭವು ನ.21 ರ ಶನಿವಾರ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದು, ವಿವಿಧ ಧಾರ್ಮಿಕ ವಿಧಿಗಳ ಬಳಿಕ ಭಾಗವತರಿಗೆ ಜಾಗಟೆ, ಕಲಾವಿದರಿಗೆ ಗೆಜ್ಜೆ ನೀಡಿ, ಶ್ರೀ ದೇವರ ಪೂಜೆಯ ಮೂಲಕ ಆರಂಭಗೊಂಡಿತು.
ಈ ಸಾಲಿನ ಮೊದಲ ಸೇವಾ ರೂಪದ ಬಯಲಾಟ ಪಾಂಡವಾಶ್ವಮೇಧ ಪ್ರಸಂಗವು ಶ್ರೀ ದೇವಳದ ಬಾಕಿಮಾರು ಗದ್ದೆಯಲ್ಲಿ ಹಾಕಲಾಗಿದ್ದ ಸಾಂಪ್ರದಾಯಿಕ ರಂಗಸ್ಥಳದಲ್ಲಿ ನಡೆಯಿತು.