ಮುಲ್ಕಿ: ಪತ್ರಿಕಾ ವಿತರಕರು ನಿಜವಾದ ಶ್ರಮ ಜೀವಿಗಳು -ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ
ಮುಲ್ಕಿ: ಹಗಲು ರಾತ್ರಿ ಎನ್ನದೆ ಪ್ರತಿ ಮನೆಗೆ ಪತ್ರಿಕೆಯನ್ನು ವಿತರಣೆ ಮಾಡಿ ಜೀವನ ಸಾಗಿಸುತ್ತಿರುವ ಪತ್ರಿಕಾ ವಿತರಕರು ನಿಜವಾದ ಶ್ರಮ ಜೀವಿಗಳು ಎಂದು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು
ಕಳೆದ 25 ವರ್ಷಕ್ಕೂ ಮಿಕ್ಕಿ ಮುಲ್ಕಿ ಪರಿಸರದಲ್ಲಿ ವಿವಿಧ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸಿ ವಿಶ್ರಾಂತಿ ಜೀವನ ನಡೆಸುತ್ತಿರುವ ನಾರಾಯಣ ಕಾಮತ್ ಕೆಂಚನಕೆರೆ ರವರನ್ನು ಪತ್ನಿ ಶ್ರೀದೇವಿ ಕಾಮತ್ ಜೊತೆ ಅವರ ಕ ಸ್ವಗೃಹದಲ್ಲಿ ಮುಲ್ಕಿ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ವತಿಯಿಂದ ಆಶ್ರಮದ ಸಂಚಾಲಕರಾದ ಪುನೀತ್ ಕೃಷ್ಣ ಅವರು ಗೌರವಿಸಿ ಬಳಿಕ ವಿಡಿಯೋ ಕಾಲ್ ಮುಖಾಂತರ ಬೆಂಗಳೂರಿನ ಆಧ್ಯಾತ್ಮಿಕ ಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶೀರ್ವಚನ ನೀಡಿ ಕೆಂಚನಕೆರೆ ನಾರಾಯಣ ಕಾಮತ್ ರವರು ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ, ಕೃಷಿಕರಾಗಿ, ಅನೇಕ ಚಟುವಟಿಕೆಗಳಿಂದ ಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ಮಾನವೀಯ ಮೌಲ್ಯತೆಗಳನ್ನು ಮರೆಯುತ್ತಿರುವ ಆಧುನಿಕ ಯುಗದಲ್ಲಿ ನಾರಾಯಣ ಕಾಮತ್ ರವರು ಶ್ರೇಷ್ಠ ವ್ಯಕ್ತಿಯಾಗಿದ್ದಾರೆ ಎಂದರು
ಈ ಸಂದರ್ಭ ರಾಮಚಂದ್ರ ಕಾಮತ್, ರಾಘವೇಂದ್ರ ಕಾಮತ್ ,ವಿದ್ಯಾಶ್ರೀ ಪೈ, ಹರ್ಷಿತಾ ಪೈ ಮತ್ತಿತರರು ಉಪಸ್ಥಿತರಿದ್ದರು
ಹರ್ಷಿತಾ ಪೈ ಸ್ವಾಗತಿಸಿ ನಿರೂಪಿಸಿದರು. ಮುಲ್ಕಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ಸೇವಾ ಭಕ್ತರಾದ ಶರತ್ ಕಾರ್ನಾಡ್ ಧನ್ಯವಾದ ಅರ್ಪಿಸಿದರು