Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ಸೀಮೆ ಅರಸು ಕಂಬಳಕ್ಕೆ ಒಂಬತ್ತು ಮಾಗಣೆಯ ಸರ್ವರ ಸಹಕಾರ ಅಗತ್ಯ- ಎಂ ದುಗ್ಗಣ್ಣ ಸಾವಂತರು

ಮುಲ್ಕಿ: ಸುಮಾರು 400 ವರ್ಷ ಇತಿಹಾಸವಿರುವ ಮುಲ್ಕಿ ಸೀಮೆ ಅರಸು ಕಂಬಳವು ಡಿಸೆಂಬರ್ 26 ರಂದು ನಡೆಯಲಿದ್ದು, ಕಂಬಳದ ಯಶಸ್ಸಿಗೆ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಸರ್ವರ ಸಹಕಾರ  ಅಗತ್ಯವಿದೆ ಎಂದು ಮುಲ್ಕಿ ಸೀಮೆಯ ಅರಸರು ಹಾಗೂ ಶ್ರೀ ಕ್ಷೇತ್ರ ಬಪ್ಪನಾಡಿನ ಅನುವಂಶಿಕ ಮೊಕೇಸರ ಎಂ ದುಗ್ಗಣ್ಣ ಸಾವಂತರು ಹೇಳಿದರು
ಅವರು ಮುಲ್ಕಿ ಸೀಮೆಯ ಅರಸು ಕಂಬಳದ ಬಗ್ಗೆ  ನಡೆದ ಪಡುಪಣಂಬೂರು ಮುಲ್ಕಿ ಅರಮನೆಯ ಧರ್ಮ ಚಾವಡಿಯಲ್ಲಿ ನಡೆದ   ಸಭೆಯಲ್ಲಿ ಮಾತನಾಡಿದರು 
 ವೇದಿಕೆಯಲ್ಲಿ ಬಂಕಿ ನಾಯಕರು ಹಳೆಯಂಗಡಿ,
 ವಕೀಲರಾದ ಚಂದ್ರಶೇಖರ್ ಜಿ.,ಕಾಸಪ್ಪಯ್ಯರ ಮನೆ, ಮಹೀಮ್ ಹೆಗ್ಡೆ ಬಪ್ಪನಾಡು,
ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ  ಸಂಪತ್ ಶೆಟ್ಟಿ ತೋಕೂರು ಗುತ್ತು , ಪಡುಪಣಂಬೂರು ಗ್ರಾಪಂ ಮಾಜೀ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು, ಮತ್ತಿತರರು ಉಪಸ್ಥಿತರಿದ್ದರು.  ಪ್ರಕಾಶ್ ಆಚಾರ್ಯ ಕಿನ್ನಿಗೋಳಿ  ಕಾರ್ಯಕ್ರಮ ನಿರೂಪಿಸಿದರು.
ಸಭೆಯಲ್ಲಿ ನವೀನ್ ಪುತ್ರನ್ ಕೆ ಎಸ್ ರಾವ್ ನಗರ, ಶರತ್ ಕಾರ್ನಾಡ್, ಪ್ರೇಮಲತಾ, ಚಂದ್ರಹಾಸ್ ಕೋಟ್ಯಾನ್ ಪಡುತೋಟ ಮತ್ತಿತರರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು


ಡಿ.26:ಮುಲ್ಕಿ ಸೀಮೆ ಅರಸು ಕಂಬಳ ನಡೆಸಲು ನಿರ್ಣಯ:

ಸಭೆಯಲ್ಲಿ  ಮುಂದಿನ ತಿಂಗಳು ಡಿಸೆಂಬರ್ 26ರಂದು ಮುಲ್ಕಿ ಸೀಮೆ ಅರಸು ಕಂಬಳ ನಡೆಸಲು ನಿರ್ಣಯಿಸಲಾಯಿತು. ಪ್ರಸಕ್ತ ಸಾಲಿನ ಅರಸು ಕಂಬಳದ ಸಮಿತಿಯ ಅಧ್ಯಕ್ಷರನ್ನಾಗಿ ದುಗ್ಗಣ್ಣ ಸಾವಂತ ಅರಸರನ್ನು ಹಾಗೂ  ಸಮಿತಿಯ ಕಾರ್ಯಾಧ್ಯಕ್ಷರಾಗಿ ವಿನೋದ್ ಸಾಲ್ಯಾನ್ ಬೆಳ್ಳಾಯರು, ಪ್ರಧಾನ ಕಾರ್ಯದರ್ಶಿಯಾಗಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸದಸ್ಯ  ಪ್ರಕಾಶ್ ಆಚಾರ್ಯ  ಕಿನ್ನಿಗೋಳಿ, ಜೊತೆ ಕಾರ್ಯದರ್ಶಿಯಾಗಿ ಅನಿಲ್ ಶ್ಯಾಮ್ ಶೆಟ್ಟಿ ಮೂಡು ತೋಟ,  ಕೋಶಾಧಿಕಾರಿಯಾಗಿ ಮಹೀಮ್ ಹೆಗ್ಡೆ ಬಪ್ಪನಾಡು, ಜೊತೆ ಕೋಶಾಧಿಕಾರಿಯಾಗಿ ಸುದರ್ಶನ್ ಪೂಜಾರಿ ಪಂಜ,ರವರನ್ನು ಆಯ್ಕೆ ಮಾಡಲಾಯಿತು ಹಾಗೂ ಕಂಬಳದ ಪೂರ್ವ ತಯಾರಿ ಸಿದ್ದತೆ ಅಂಗವಾಗಿ ಕರೆ ದುರಸ್ತಿ, ಶ್ರಮದಾನ ಬಗ್ಗೆ ಸಂಘ ಸಂಸ್ಥೆಗಳ ಸಹಕಾರದ ಬಗ್ಗೆ ಚರ್ಚಿಸಲಾಯಿತು.