ಸರ್ಕಾರದ ಧೋರಣೆಯನ್ನು ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ
ಮೂಲ್ಕಿ:ಭಾರತೀಯ ಜನತಾ ಪಾರ್ಟಿಯ ಹಳೆಯಂಗಡಿ ಶಕ್ತಿಕೇಂದ್ರ ಹಾಗೂ ಕಿಲ್ಪಾಡಿ ಪಂಚಾಯತ್ ಮುಂಭಾಗ ನಡೆದ ರಾಜ್ಯ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಹಾಗೂ ಗ್ರಾಮ ಪಂಚಾಯತ್,ಸ್ಥಳೀಯ ಆಡಳಿತಕ್ಕೆ ಸೌಲಭ್ಯ ,ಅನುದಾನಗಳನ್ನು ನೀಡದೆ ಜನರನ್ನು ಅಲೆದಾಡುವಂತ ಪರಿಸ್ಥಿತಿ ನಿರ್ಮಾಣ ಮಾಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಸರ್ಕಾರದ ಧೋರಣೆಯನ್ನು ಖಂಡಿಸಿದರು.
ಭಾರತೀಯ ಜನತಾ ಪಾರ್ಟಿಯ ಕೆಮ್ರಾಲ್ ಶಕ್ತಿ ಕೇಂದ್ರದ ಪಕ್ಷಿಕೆರೆ ಪೇಟೆಯ ಬಳಿ ನಡೆದ ರಾಜ್ಯ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಹಾಗೂ ಗ್ರಾಮ ಪಂಚಾಯತ್,ಸ್ಥಳೀಯ ಆಡಳಿತಕ್ಕೆ ಸೌಲಭ್ಯ ,ಅನುದಾನಗಳನ್ನು ನೀಡದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೃಹತ್ ಜನಾಂದೋಲನ ಸಭೆ ನಡೆಯಿತು.
ಮೂಲ್ಕಿ:ಭಾರತೀಯ ಜನತಾ ಪಾರ್ಟಿಯ ಅತಿಕಾರಿಬೇಟ್ಟು ಶಕ್ತಿ ಕೇಂದ್ರದ ಪಂಚಾಯತ್ ಮುಂಭಾಗ ನಡೆದ ರಾಜ್ಯ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಹಾಗೂ ಗ್ರಾಮ ಪಂಚಾಯತ್,ಸ್ಥಳೀಯ ಆಡಳಿತಕ್ಕೆ ಸೌಲಭ್ಯ ,ಅನುದಾನಗಳನ್ನು ನೀಡದೆ ಜನರನ್ನು ಅಲೆದಾಡುವಂತ ಪರಿಸ್ಥಿತಿ ನಿರ್ಮಾಣ ಮಾಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಸರ್ಕಾರದ ಧೋರಣೆಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಪಾಧ್ಯಕ್ಷ ಸುನಿಲ್ ಆಳ್ವ,ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ತೋಡಾರು, ಕಾರ್ಯಕ್ರಮದ ಪ್ರಭಾರಿ ಈಶ್ವರ್ ಕಟೀಲ್, ಜಿ. ಪಂ. ಮಾಜಿ ಸದಸ್ಯ ವಿನೋದ್ ಬೊಳ್ಳೂರು, ಪಂಚಾಯತ್ ನ ಮಾಜಿ ಅಧ್ಯಕ್ಷೆ ಮಮತಾ ದಿವಾಕರ್ ಪೂಂಜಾ, ತಾ. ಪಂ. ಮಾಜಿ ಸದಸ್ಯೆ ರಶ್ಮಿ ಆಚಾರ್ಯ, ಹಳೆಯಂಗಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಲಕ್ಷ್ಮಣ್ ಸಾಲ್ಯಾನ್, ಕಾರ್ಯದರ್ಶಿ ಜೀವನ್ ಶೆಟ್ಟಿ ಅಂಗರಗುಡ್ಡೆ, ಪಂಚಾಯತ್ ಮಾಜಿ ಸದಸ್ಯರು, ಕಾಯ೯ಕತ೯ರು, ಭಾಗವಹಿಸಿದ್ದರು.
ಭಾರತೀಯ ಜನತಾ ಪಾರ್ಟಿಯ ಬಜ್ಪೆ ಮಹಾಶಕ್ತಿಕೇಂದ್ರ ವತಿಯಿಂದ ಬಜಪೆ ಪಟ್ಟಣ ಪಂಚಾಯತ್ ಮುಂಭಾಗ ನಡೆದ ರಾಜ್ಯ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಹಾಗೂ ಗ್ರಾಮ ಪಂಚಾಯತ್,ಸ್ಥಳೀಯ ಆಡಳಿತಕ್ಕೆ ಸೌಲಭ್ಯ ,ಅನುದಾನಗಳನ್ನು ನೀಡದೆ ಜನರನ್ನು ಅಲೆದಾಡುವಂತ ಪರಿಸ್ಥಿತಿ ನಿರ್ಮಾಣ ಮಾಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಸರ್ಕಾರದ ಧೋರಣೆಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಮಂಡಲ ಉಸ್ತುವಾರಿಗಳಾದ ಪ್ರೇಮ್ ರಾಜ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ, ಮಂಡಲ ಉಪಾಧ್ಯಕ್ಷ ಕೇಶವ್ ಕರ್ಕೇರ, ಸುಮಾ ಬಿ ಶೆಟ್ಟಿ ,ಮಹಾಶಕ್ತಿಕೇಂದ್ರ ಅಧ್ಯಕ್ಷ ವಿಜಯ್ ಕುಮಾರ್ ಪೊರ್ಕೋಡಿ, ಕಾರ್ಯದರ್ಶಿ ದಿನೇಶ್ ಶೆಟ್ಟಿ, ಜಿಲ್ಲಾ ಎಸ್ ಸಿ ಮೋರ್ಚಾದ ಕಾರ್ಯದರ್ಶಿ ವಿನಯ್ ಸಾಲ್ಯಾನ್, ರೈತ ಮೋರ್ಚಾ ಅಧ್ಯಕ್ಷ ರಾಜೇಶ್ ಅಮೀನ್, ಮಹಿಳಾ ಮೋರ್ಚಾದ ಅಧ್ಯಕ್ಷ ಗೀತಾಲಕ್ಷ್ಮಿ, ಪಟ್ಟಣ ಪಂಚಾಯತ್ ಅಧ್ಯಕ್ಷ ಲೋಕೇಶ್ ಬಜ್ಪೆ ,ಉಪಾಧ್ಯಕ್ಷ ಶರ್ಮೀಳಾ ಸೇರಿದಂತೆ ಶಕ್ತಿಕೇಂದ್ರ ಪ್ರಮುಖರು, ಪಟ್ಟಣ ಪಂಚಾಯತ್ ಜನಪ್ರತಿನಿಧಿಗಳು, ಪಕ್ಷದ ವಿವಿಧ ಪದಾಧಿಕಾರಿಗಳು , ಕಾರ್ಯಕರ್ತರು, ನಾಗರಿಕರು ಉಪಸ್ಥಿತರಿದ್ದರು.