Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ವಿಜೃಂಭಣೆಯ ಮೃಗ ಬೇಟೆ ಹಾಗೂ ವನಭೋಜನ ಉತ್ಸವ

ಮುಲ್ಕಿ: ಇತಿಹಾಸ ಪ್ರಸಿದ್ಧ ಒಳಲಂಕೆ  ಶ್ರೀ ವೆಂಕಟರಮಣ ದೇವಸ್ಥಾನದ ಮಹೋತ್ಸವದಲ್ಲಿ ಬಹಳ ಪ್ರಸಿದ್ದಿ ಪಡೆದ ಮೃಗ ಬೇಟೆ ಹಾಗೂ ವನಭೋಜನ  ಉತ್ಸವು ಸೋಮವಾರ ಸಂಜೆ ಪ್ರಾರಂಭಗೊಂಡಿತು. ಶ್ರೀ ಕ್ಷೇತ್ರದಲ್ಲಿ ಮಹಾ ಪ್ರಾರ್ಥನೆಯಿಂದ ಆರಂಭಗೊಂಡು ಶ್ರೀ ವೀರ ವಿಠ್ಠಲ ದೇವರು ಮತ್ತು ಉತ್ಸವದ ಬಿಂದು ಮಾಧವ ದೇವರು ಪಲ್ಲಕಿಯಲ್ಲಿ ಆರೂಢರಾಗಿ ವನ ಭೋಜನಕ್ಕಾಗಿ ಕಿಲ್ಪಾಡಿ ಗೇರುಟ್ಟೆಗೆ ತೆರಳಿ ಅಲ್ಲಿ ಶ್ರೀದೇವರಿಗೆ ವಿಶೇಷ ಅಲಂಕಾರ ಪೂಜೆ ,ಕಾಲಭೈರವ ದರ್ಶನ ಸೇವೆ , ಮಹಾ ಪೂಜೆ ನಡೆದು ಬಳಿಕ ವನ ಭೋಜನ ಆರಂಭ ಗೊಳ್ಳುವುದು. 
ಸಹಸ್ರಾರು ಭಕ್ತರು ವನದ ನೆಲದಲ್ಲಿ ಒಟ್ಟಿಗೆ ಕುಳಿತು ಭೋಜನ ಸವಿಯುವುದು ಇಲ್ಲಿನ ಮಹತ್ವ. ಇಲ್ಲಿನ ಭೋಜನ ಪ್ರಸಾದ ಬಹಳ ರುಚಿ,ಪರಿಮಳಯುಕ್ತ ಹಾಗೂ ಅಹಾದ್ಲಕರ ಎನ್ನುವುದು ಭಕ್ತರ ನಂಬಿಕೆ.
ಭೋಜನದ ಬಳಿಕ ಶ್ರೀ ದೇವರ ವನ ಸವಾರಿ ಹಾಗೂ ಕಟ್ಟೆ ಪೂಜೆ ಆರಂಭಗೊಳ್ಳುತ್ತದೆ. ರಾತ್ರಿ ಪೂರಾ ನಡೆದು ಸಾಗುವ ಸುಮಾರು 16 ಕಿಮೀಗೂ ಅಧಿಕ ದೂರದ ಸವಾರಿಯಲ್ಲಿ ಭಕ್ತಜನ  ಶ್ರೀದೇವರ ನಾಮ ಸಂಕೀರ್ಥನೆಯೊಂದೆ ಸಾಗುತ್ತಾರೆ. ಗೇರುಕಟ್ಟೆ ಯಿಂದ ಒಳಮಾರ್ಗವಾಗಿ ಗುಡ್ಡ ,ಗದ್ದೆಗಳನ್ನು ಹತ್ತಿ ಇಳಿದು ವನ ಸವಾರಿ ನಡೆದು ಬಳಿಕ ಪಡುಪಣಂಬೂರು ಅರಮನೆಯಲ್ಲಿ ಅರಸರಿಂದ ಕಾಣಿಕೆ ಪಡೆದು ಪೂಜೆ ಸ್ವೀಕರಿಸುತ್ತಾ ಮೂಲ್ಕಿಗೆ ಆಗಮಿಸಿ ದೇವಳ ತಲುಪಿ ವಿಶ್ರಾಂತಿ ಪೂಜೆ ನಡೆಯುವಾಗ ಬೆಳಗಾಗುವುದರೊಂದಿಗೆ ವನಭೋಜನ ಉತ್ಸವ ಸಂಪನ್ನಗೊಳ್ಳುತ್ತದೆ.




ವನಭೋಜನದ ಕಟ್ಟೆ ಪೂಜೆಯಲ್ಲಿ ಬೆಂಗಳೂರಿನ ಆಧ್ಯಾತ್ಮಿಕ ಗುರು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ, ಪಾಲ್ಗೊಂಡು ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಮಾತೃಶ್ರೀ ಶಾರದಮ್ಮ, ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕರಾದ ರಜನಿ ಸಿ ಭಟ್, ರಾಹುಲ್ ಚಂದ್ರಶೇಖರ್, ಸಂಚಾಲಕರಾದ ಪುನೀತ ಕೃಷ್ಣ ,ಹರಿ ಭಟ್  ಮುಂಡ್ಕೂರು, ವಕೀಲ ರವೀಶ್ ಕಾಮತ್,ಆದಿತ್ಯ ಮತ್ತಿತರರು ಉಪಸ್ಥಿತರಿದ್ದರು