Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಜನಸ್ನೇಹಿ ಬ್ಯಾಂಕಿಂಗ್‌ನಿಂದ ದೇಶದ ಅಭಿವೃದ್ಧಿ ಸಾಧ್ಯ: ಸತೀಶ್ ಭಂಡಾರಿ

ಮುಲ್ಕಿ: ಬ್ಯಾಂಕುಗಳು ಜನಸ್ನೇಹಿಯಾದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ನಿವೃತ್ತ ಬ್ಯಾಂಕ್ ಅಧಿಕಾರಿ ಸತೀಶ್ ಭಂಡಾರಿ ಹೇಳಿದರು
ಅವರು  ಮುಲ್ಕಿಯ ಪ್ರಧಾನ ಕೆನರಾ ಬ್ಯಾಂಕ್  ಶಾಖೆಯಲ್ಲಿ  ಬ್ಯಾಂಕಿನ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ  174ನೇ ಜನ್ಮದಿನದ ಪ್ರಯುಕ್ತ ಅವರ ಪುತ್ತಳಿಗೆ ಮಾಲಾರ್ಪಣೆ ಸಲ್ಲಿಸಿ ಮಾತನಾಡಿದರು
ಮುಖ್ಯ ಅತಿಥಿಗಳಾಗಿ ಮಂಗಳೂರುಕೆನರಾ ಬ್ಯಾಂಕ್ ವೃತ್ತ ಕಚೇರಿಯ ಎ ಜಿ ಎಂ  ಸಂಜಯ್ ತ್ರಿವೇದಿ ,ಮುಲ್ಕಿ ಕೆನರಾ ಬ್ಯಾಂಕ್ ಶಾಖೆ ಮುಖ್ಯ ಪ್ರಬಂದಕ ಅನಿಲ್ ಮೊರೆ,ಸಿಬ್ಬಂದಿಗಳಾದ  ಮಾಧುರಿ, ವಿಘ್ನೇಶ್,  ಸುರೇಶ್ ಬಂಗೇರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರರಾದ ನರಸಿಂಹ ಪೈ ,ಪಾಂಡುರಂಗ ಭಟ್ ಮತ್ತು  ಸತೀಶ್ ಭಂಡಾರಿ ಸಾಧಕರ ನೆಲೆಯಲ್ಲಿ ಗೌರವಿಸಲಾಯಿತು 
 ವಕೀಲ ಡೇನಿಯಲ್  ದೇವರಾಜ್  ಸುಜಾತಾ ಹಾಗೂ ಮತ್ತಿತರರು ಅನಿಸಿಕೆಗಳನ್ನು ವಿವರಿಸಿದರು
 ಪ್ರಜ್ಞಾ  ಸ್ವಾಗತಿಸಿದರುವಿಶಾಲ್ ನಾಯಕ ಧನ್ಯವಾದ ಅರ್ಪಿಸಿದರು