Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಸ್ವಚ್ಛತೆಯ ಮೂಲಕ ಜಾಗೃತಿ ಮೂಡಿಸುವುದೇ ಕಂಬಳದ ಆಶಯ: ದುಗ್ಗಣ್ಣ ಸಾವಂತ ಅರಸರು

ಮುಲ್ಕಿ:ಐತಿಹಾಸಿಕ ಪ್ರಸಿದ್ಧ ಮುಲ್ಕಿ ಸೀಮೆ ಅರಸು ಕಂಬಳದ ಪೂರ್ವಭಾವಿಯಾಗಿ ಭಾನುವಾರ ಕಂಬಳದ ಕರೆ ಹಾಗೂ  ಬಾಕಿ ಮಾರು ಗದ್ದೆಯಲ್ಲಿ ವಿವಿಧ ಸೇವಾ ಸಂಸ್ಥೆಗಳ ವತಿಯಿಂದ ಸ್ವಚ್ಛತೆ ಮೂಲಕ ಶ್ರಮದಾನ ನಡೆಯಿತು
ಕಾರ್ಯಕ್ರಮ ಉದ್ಘಾಟಿಸಿ ಸೀಮೆಯ ಅರಸರು ಹಾಗೂ ಕಂಬಳ ಸಮಿತಿಯ ಅಧ್ಯಕ್ಷರಾದ ದುಗ್ಗಣ್ಣ ಸಾವಂತ ಅರಸರು ಮಾತನಾಡಿ  ಇತಿಹಾಸ ಪ್ರಸಿದ್ಧ ಸೀಮೆ ಅರಸು ಕಂಬಳ ಡಿಸೆಂಬರ್ 26ರಂದು
ನಡೆಯಲಿದ್ದು ಕಂಬಳದಲ್ಲಿ ಸ್ವಚ್ಛತೆಗೆ ಪ್ರಾಧಾನ್ಯತೆ ನೀಡಲಾಗಿದೆ. ಪರಿಸರ
ಸ್ವಚ್ಛತೆ ಮೂಲಕ ಜಾಗೃತಿ ಮೂಡಿಸುವುದೇ  ಕಂಬಳದ ಪ್ರಧಾನ ಉದ್ದೇಶವಾಗಿದೆ. 
ಸ್ವಚ್ಛತೆ ನಮ್ಮ ಉಸಿರಾಗಿರಲಿ ಎಂದರು 
ಈ ಸಂದರ್ಭ ವಕೀಲರಾದ ಚಂದ್ರಶೇಖರ ಜಿ ಕಾಸಪ್ಪಯ್ಯನವರ ಮನೆ,  ಹಳೆಯಂಗಡಿ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾಡ್ , ಕಂಬಳ ಸಮಿತಿ ಕಾರ್ಯಾಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ಕಿನ್ನಿಗೋಳಿ,
ಸಮಿತಿಯ  ರಾಜೇಂದ್ರ ಕುಮಾರ್, ಸುದರ್ಶನ್ ಪೂಜಾರಿ ಪಂಜ  ಅನಿಲ್ ಶ್ಯಾಮ್ ಶೆಟ್ಟಿ ಮೂಡುತೋಟ,
ಚಂದ್ರಹಾಸ್ ಕೋಟ್ಯಾನ್ ಪಡುತೋಟ,
ಸತೀಶ್  ಶೆಟ್ಟಿ ಕಂರ್ಬಿತ್ತಿಲು, ಪ್ರೇಮಲತಾ ಯೋಗೀಶ್, ನವೀನ್ ಪುತ್ರನ್,
ಹಳೆಯಂಗಡಿ ಪಿಸಿಎ ಬ್ಯಾಂಕ್‌ ನಿರ್ದೇಶಕ ಧರ್ಮಾನಂದ ಶೆಟ್ಟಿಗಾ‌ರ್, ಮತ್ತಿತರರು ಉಪಸ್ಥಿತರಿದ್ದರು
ಸೇವಾ ಸಂಸ್ಥೆಗಳಾದ ನಂದಿನಿ ಕ್ರಿಕೆಟ್ ಆರಂದ್ ಮತ್ತು ಪಡುಪಣಂಬೂರು ಕ್ರಿಕೆಟರ್ಸ್  ವತಿಯಿಂದ  ಬಾಕಿಮಾರು ಗದ್ದೆ ಸ್ವಚ್ಛತೆ ಮೂಲಕ ಶ್ರಮದಾನ ನಡೆಯಿತು