Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ವಿಜಯ ರೈತರ ಸೇವಾ ಸಂಘದಲ್ಲಿ ದೀಪಾವಳಿ ಸಂಭ್ರಮ ಧನಲಕ್ಷ್ಮಿ ಪೂಜೆ

ಮುಲ್ಕಿ: ಪ್ರತಿಷ್ಠಿತ ವಿಜಯ ರೈತ ಸೇವಾ ಸಹಕಾರಿ ಸಂಘದಲ್ಲಿ ದೀಪಾವಳಿ ಸಂಭ್ರಮ ಹಾಗೂ ಧನಲಕ್ಷ್ಮಿ ಪೂಜೆಯು ಬಪ್ಪನಾಡು ಕ್ಷೇತ್ರದ ಅರ್ಚಕರಾದ ನರಸಿಂಹ ಭಟ್ ಹಾಗೂ ಪ್ರಸಾದ್ ಭಟ್ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು 
ಈ ಸಂದರ್ಭ ಅರ್ಚಕ ನರಸಿಂಹ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿ ಸಹಕಾರಿ ಸಂಘಗಳು ಜನ ಸ್ನೇಹಿಯಾಗಿ ಮತ್ತಷ್ಟು ಅಭಿವೃದ್ಧಿ ಹೊಂದಲಿ ಹಾಗೂ ನೂತನ ಕಟ್ಟಡ ಶೀಘ್ರ ಲೋಕಾರ್ಪಣೆಗೊಳ್ಳಲಿ ಮತ್ತು ಇತ್ತೀಚೆಗೆ ನಿಧನರಾದ ಸಂಘದ ನಿರ್ದೇಶಕ ದಿ. ಗಂಗಾಧರ ಶೆಟ್ಟಿ ಬರ್ಕೆ ತೋಟ ರವರ ಸೊಸೈಟಿ ಅಭಿವೃದ್ಧಿಯ ಕನಸುಗಳು ಈಡೇರಲಿ ಎಂದು ಆಶೀರ್ವಚನ ನೀಡಿದರು ಮುಲ್ಕಿ ವಿಜಯ ರೈತರ ಸೇವಾ ಸಂಘದ ಅಧ್ಯಕ್ಷ ರಂಗನಾಥ ಶೆಟ್ಟಿ, ಉಪಾಧ್ಯಕ್ಷ ಪ್ರಸಾದ್‌ ಶೆಟ್ಟಿ,  ನಿರ್ದೇಶಕರಾದ  ನರಸಿಂಹ ಪೂಜಾರಿ, ಅಶೋಕ್ ಕುಮಾ‌ರ್, ದೇವಪ್ರಸಾದ್, ರಾಮ ನಾಯ್ಕ, ಪದ್ಮಿನಿ ವಿಜಯಕುಮಾರ್ ಶೆಟ್ಟಿ,ಮಮತಾ ಪೂಂಜಾ, ನಂಜುಂಡ ಆರ್ ಕೆ, ಪ್ರಭಾಕರ ದೇವಾಡಿಗ, ರಾಜೇಶ್ ಶೆಟ್ಟಿ, ಪ್ರಬಂಧಕ ಚಂದ್ರಕಾಂತ ಶೆಟ್ಟಿ, ಮುಲ್ಕಿ ಬ್ಯಾಂಕ್ ಆಫ್ ಬರೋಡಾದ ಅಭಿಲಾಶ್ ದೇಸಾಯಿ, ಉಪಸ್ಥಿತರಿದ್ದರು.