ಸರ್ವಧರ್ಮದ ಭಾವೈಕ್ಯತೆಯ ಮೂಲಕ ದೀಪಾವಳಿ ಆಚರಣೆ ಸಂಸ್ಥೆಯ ಕಾರ್ಯ ಅಭಿನಂದನೀಯ- ವಸಂತ್ ಬೆರ್ನಾಡ್
ಮುಲ್ಕಿ: ಸರ್ವಧರ್ಮದ ಭಾವೈಕ್ಯತೆಯ ಮೂಲಕ ದೀಪಾವಳಿ ಆಚರಣೆ ಮುಲ್ಕಿ ಸಂಸ್ಥೆಯ ಕಾರ್ಯ ಅಭಿನಂದನೀಯ. ಇಂದಿನ ಯುವ ಜನಾಂಗಕ್ಕೆ ಹಿಂದಿನ ಕಾಲದ ಸಂಸ್ಕಾರ ಸಂಸ್ಕೃತಿ ಹಾಗೂ ಆಚರಣೆಗಳ ಬಗ್ಗೆ ತಿಳಿ ಹೇಳುವ ಕಾರ್ಯ ಆಗಬೇಕಾಗಿದೆ. ದೀಪಾವಳಿ ಆಚರಣೆ ಮೂಲಕ ಕತ್ತಲೆಯನ್ನು ಹೋಗಲಾಡಿಸಿ ಎಲ್ಲರ ಮನೆಯ ದೀಪ ಬೆಳಗಲಿ ಹಾಗೂ ಲೋಕದಲ್ಲಿ ಸುಖ ಶಾಂತಿ ನೆಮ್ಮದಿ ಲಭಿಸಲಿ ಎಂದು ಹಳೆಯಂಗಡಿ ಪ್ರಿಯದರ್ಶಿನಿ ಕೊ .ಆಪರೇಟಿವ್, ಸೊಸೈಟಿಯ ಅಧ್ಯಕ್ಷ ಎಚ್ ವಸಂತ್ ಬೆರ್ನಾಡ್ ಹೇಳಿದರು
ಅವರು ಯುವವಾಹಿನಿ ಘಟಕದ ವತಿಯಿಂದ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾ ಭವನ ದಲ್ಲಿ ನಡೆದ
24 ನೇ ವರ್ಷದ ತುಳುವೆರೆ ತುಡಾರ ಪರ್ಬದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು
ಕಾರ್ಯಕ್ರಮವನ್ನು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಉದ್ಘಾಟಿಸಿದರು
ಅಧ್ಯಕ್ಷತೆಯನ್ನು ಮುಲ್ಕಿ ಯುವವಾಹಿನಿ ಘಟಕದ ಅಧ್ಯಕ್ಷೆ ಚರೀಷ್ಮಾ ಶ್ರೀನಿವಾಸ್ ವಹಿಸಿದ್ದರು
ಮುಖ್ಯ ಅತಿಥಿಗಳಾಗಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಬಿ. ನರಸಿಂಹ ಭಟ್ , ಆಶೀರ್ವಚನ ನೀಡಿದರು
ವೇದಿಕೆಯಲ್ಲಿ ಮುಲ್ಕಿ ತಾಲೂಕು ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ನಿಸಾರ್ ಅಹಮ್ಮದ್ ಅಂಗರಗುಡ್ಡೆ ,ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ್ ಸುವರ್ಣ ಯುವ ವಾಹಿನಿ ಘಟಕದ ಕಾರ್ಯದರ್ಶಿ ವೇದ ಜಯ ಕುಬೆವೂರು,,ಕಾರ್ಯಕ್ರಮ ಸಂಯೋಜಕರಾದ ಚಿತ್ರಾ ಸುರೇಶ್ ಜತ್ತನ್ನ ಕು. ಮೇಘನಾ,ಮತ್ತಿತರರು ಉಪಸ್ಥಿತರಿದ್ದರು
ಯುವ ವಾಹಿನಿ ಅಧ್ಯಕ್ಷೆ ಚರೀಷ್ಮಾ ಶ್ರೀನಿವಾಸ್ ಸ್ವಾಗತಿಸಿದರು ಮಾಜೀ ಅಧ್ಯಕ್ಷ ಭರತೇಶ ಅಮೀನ್ ಮಟ್ಟು ಪ್ರಸ್ತಾವನೆಗೈದರು,ಪ್ರೀತಿಕಾ ಸನ್ಮಾನ ಪತ್ರ ವಾಚಿಸಿದರು,ನರೇಂದ್ರ ಕೆರೆಕಾಡು ನಿರೂಪಿಸಿದರು
ಕಾರ್ಯಕ್ರಮದಲ್ಲಿ ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಮಾಜಿ ಉಪಾಧ್ಯಕ್ಷ ಕರಿಯ ಪೂಜಾರಿಯವರನ್ನು ಸನ್ಮಾನಿಸಲಾಯಿತು ಹಾಗೂ ದಾನಿಗಳಾದ ಅಶೋಕ್ ಕರ್ಕೇರಾ ವತಿಯಿಂದ
ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ಸಹಾಯ ಹಸ್ತ ನೀಡಲಾಯಿತು
ತುಳುವೆರೆ ತುಡಾರ ಪರ್ಬ ಅಂಗವಾಗಿ ಗೂಡುದೀಪ, ರಂಗೋಲಿ ಸ್ಪರ್ಧೆ ಹಾಗೂ ಗೋ ಪೂಜೆ,
ಬಲೀಂದ್ರ ಪೂಜೆ,ಹಣತೆಯ ಬೆಳಕು, ನಡೆಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.