Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ:ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ಬ್ರಹ್ಮ ಕಲಶೋತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ



ಮುಲ್ಕಿ:ಪಡುಪಣಂಬೂರು ಸಮೀಪದ ಇತಿಹಾಸ ಪ್ರಸಿದ್ಧ ಕಲ್ಲಾಪು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದಲ್ಲಿ ಶ್ರೀ ವೀರಭದ್ರ ಮತ್ತು ಶ್ರೀ ಮಹಾಗಣಪತಿ ದೇವರ ಅಷ್ಟ ಬಂಧ  ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ಮಹಾಮ್ಮಾಯಿ ಅಮ್ಮನವರ ಬ್ರಹ್ಮಕಲಶೋತ್ಸವ ಜನವರಿ 14 ರಿಂದ 24ರ ವರೆಗೆ ನಡೆಯಲಿದ್ದು ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ದೇವಸ್ಥಾನದ ತಂತ್ರಿಗಳಾದ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿಗಳ ಮಾರ್ಗದರ್ಶನದಲ್ಲಿ ಭಾನುವಾರ  ಶ್ರೀ ಕ್ಷೇತ್ರದಲ್ಲಿ ನಡೆಯಿತು 
ಕ್ಷೇತ್ರದ ಅರ್ಚಕರಾದ ಶ್ರೀಕೃಷ್ಣ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು
ಅಚ್ಯುತ್ ಭಟ್ ಪಾವಂಜೆ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ ಕ್ಷೇತ್ರದ ಬ್ರಹ್ಮಕಲಶೋತ್ಸವ ಯಶಸ್ವಿಯಾಗಲು ಸರ್ವರ ಸಹಕಾರ ಅಗತ್ಯ, ಒಗ್ಗಟ್ಟಿನಲ್ಲಿ ಬಲವಿದೆ, ಎಂದರು.
ಈ ಸಂದರ್ಭ ಕ್ಷೇತ್ರದ ಅರ್ಚಕರಾದ ಕುಮಾರ ಮುಕ್ಕಾಲ್ಡಿ , ನಾರಾಯಣ,ಗುರಿಕಾರರಾದ ರಾಮಗುರಿಕಾರ್, ಬಿ.ರತ್ನಾಕರ ಶೆಟ್ಟಿಗಾರ್ ಯಾನೆ ಕಾಂತಣ್ಣ ಗುರಿಕಾರ್, ಅಪ್ಪು ಗುರಿಕಾರ್ ಲಕ್ಷ್ಮಣ ಗುರಿಕಾರ್, ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಉಮಾನಾಥ ಜೆ ಶೆಟ್ಟಿಗಾರ್, ಉಪಾಧ್ಯಕ್ಷರಾದ ಪ್ರೇಮಾನಂದ ಶೆಟ್ಟಿಗಾರ್ ಉಡುಪಿ, ಶಂಕರ್ ಶೆಟ್ಟಿಗಾರ್ ಬೆಳ್ಳಾಯರು, ಕೃಷ್ಣ ಎಸ್ ಕಲ್ಲಾಪು, ಕೋಶಾಧಿಕಾರಿ ರಮೇಶ್ ಕಲ್ಲಾಪು, ಪ್ರಧಾನ ಕಾರ್ಯದರ್ಶಿ ಸತೀಶ್ ಎಸ್ ಕಲ್ಲಾಪು, ಜೊತೆ ಕಾರ್ಯದರ್ಶಿಗಳಾದ ಮೇಘನಾಥ ಕೊಪ್ಪಲ, ರಾಮಚಂದ್ರ ಟಿ ಸಾಗು, ವಾಮನ ಕಲ್ಲಾಪು, ಚೇತನ್ ಕುಮಾರ್ ಬೆಳ್ಳಾಯಿರು, ನವೀನ್ ಶೆಟ್ಟಿಗಾರ್ ತೋಕೂರು, ಉಮಾನಾಥ ಸಾಗು, ಸಹ ಕೋಶಾಧಿಕಾರಿ ಜನಾರ್ಧನ ಕೋಲ್ನಾಡು, ಯೋಗೀಶ್ ಸಾಗು, ಬೆಂಗಳೂರು ಸಮಿತಿಯ ಗೌರವಾಧ್ಯಕ್ಷ ಬಿ ದಾಮೋದರ್, ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾ ಸದಾನಂದ, ಯುವಕ ಮಂಡಲದ ಅಧ್ಯಕ್ಷ ಹರಿಪ್ರಸಾದ್ ಕೋಲ್ನಾಡ್ ಮತ್ತಿತರು ಉಪಸ್ಥಿತರಿದ್ದರು 
ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ  ಉಮಾನಾಥ ಜೆ ಶೆಟ್ಟಿಗಾರ್ ಸ್ವಾಗತಿಸಿದರು  ಶಂಕರ್ ಶೆಟ್ಟಿಗಾರ್  ಧನ್ಯವಾದ ಅರ್ಪಿಸಿದರು