Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಮುಲ್ಕಿ: ಕಾಮಗಾರಿ ಹಿನ್ನೆಲೆ-ನವೆಂಬರ್ 24 ರಿಂದ ಫೆಬ್ರವರಿ 23ರವರೆಗೆಮುಲ್ಕಿ -ಕಾರ್ನಾಡ್ ರಸ್ತೆ ವಾಹನ ಸಂಚಾರ ನಿಷೇಧ



ಮುಲ್ಕಿ:  ಮೂಡಬಿದ್ರೆ ಮುಲ್ಕಿ ರಾಜ್ಯ ಹೆದ್ದಾರಿ 70 ರ ಕಿಮೀ58.78 ರಿಂದ 59--58 ರ ವರೆಗೆ (ಕಾರ್ನಾಡ್ ಜಂಕ್ಷನ್ ನಿಂದ ಮುಲ್ಕಿ ನಾರಾಯಣಗುರು ಸಂಕೀರ್ಣದ ವರೆಗೆ) ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುವ ಸಮಯ ವಾಹನ ಸಂಚಾರವನ್ನು ನಿಷೇಧಿಸಿ ನವೆಂಬರ್ 24 ರಿಂದ ಫೆಬ್ರವರಿ 23 ರವರೆಗೆ ಹಾಗೂ ಬದಲಿ ವ್ಯವಸ್ಥೆ ಬಗ್ಗೆ ತಾತ್ಕಾಲಿಕ ಅಧಿಸೂಚನೆ ಹೊರಡಿಸಲಾಗಿದೆ 
 ಕಾರ್ನಾಡು ಜಂಕ್ಷನ್ ನಿಂದ ಮುಲ್ಕಿ/ಮಂಗಳೂರು ಕಡೆಗೆ ಸಂಚರಿಸುವ ಎಲ್ಲಾರೀತಿಯ ವಾಹನಗಳು ಕಾರ್ನಾಡು ಜಂಕ್ಷನ್ ನಿಂದ ಕಾರ್ನಾಡು ಬೈಪಾಸ್ ಮೂಲಕ ರಾಷ್ಟ್ರೀಯ ಹೆದ್ದಾರಿ-66ನ್ನು ಸಂಪರ್ಕಿಸಿ ಮುಲ್ಕಿ/ಮಂಗಳೂರು ಕಡೆಗೆ ಸಂಚರಿಸುವುದು.
ಮಂಗಳೂರು ಕಡೆಯಿಂದ ಕಾರ್ನಾಡು/ಕಿನ್ನಿಗೋಳಿ ಕಡೆಗೆ ಸಂಚರಿಸುವವರು ರಾಷ್ಟ್ರೀಯ ಹೆದ್ದಾರಿಯ ಕಾರ್ನಾಡು ಬೈಪಾಸ್ ಬಳಿ ಬಲಕ್ಕೆ ತಿರುಗಿ ಕಾರ್ನಾಡು/ಕಿನ್ನಿಗೋಳಿ ಕಡೆಗೆ ಸಂಚರಿಸುವುದು.
 ಮುಲ್ಕಿ ಕಡೆಯಿಂದ ಕಿನ್ನಿಗೋಳಿ ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳು ರಾಷ್ಟ್ರೀಯ ಹೆದ್ದಾರಿ -66ರ ಕಾರ್ನಾಡ್ ಬೈಪಾಸ್ ಮೂಲಕ ಕಾರ್ನಾಡ್ ಜಂಕ್ಷನ್ ನ್ನು ಸಂಪರ್ಕಿಸಿ ಕಿನ್ನಿಗೋಳಿ ಕಡೆಗೆ ಸಂಚರಿಸುವುದು.
ಈ ಅಧಿಸೂಚನೆಯು ನವೆಂಬರ್ 24 ರಿಂದ ಫೆಬ್ರವರಿ 23 ರವರೆಗೆ ಊರ್ಜಿತದಲ್ಲಿರುತ್ತದೆ.
ಕಾಮಗಾರಿ ನಡೆಸುವ ರಸ್ತೆಯಲ್ಲಿ ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರವಿದ್ದು, ತುರ್ತು ಚಿಕಿತ್ಸಾ ವಾಹನಗಳು ಹಾಗೂ ರೋಗಿಗಳು ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಲು ಪ್ರತ್ಯೇಕ ದಾರಿಯನ್ನು ಮಾಡಿಕೊಟ್ಟು ಕಾಮಗಾರಿಯನ್ನು ನಡೆಸುವುದು
ಮುಲ್ಕಿ ವಿಜಯ ಸನ್ನಿಧಿಯಿಂದ-ಕಾರ್ನಾಡು ಜಂಕ್ಷನ್ ವರೆಗಿನ ರಸ್ತೆಯ ಬದಿಯಲ್ಲಿ ಕಮರ್ಷಿಯಲ್ ಕಟ್ಟಡಗಳಿದ್ದು, ವ್ಯಾಪಾರಕ್ಕೆ ಅಡಚಣೆ ಯಾಗದಂತೆ ರಸ್ತೆ ಕಾಮಗಾರಿ ನಡೆಸುವುದು.
ರಾ.ಹೆ. 66ರ ಕಾರ್ನಾಡು ಬೈಪಾಸ್- ಕಾರ್ನಾಡು ಜಂಕ್ಷನ್‌ಗೆ ಸಂಚರಿಸುವ ರಸ್ತೆಯ ಧರ್ಮಸ್ಥಾನ ದೇವಸ್ಥಾನ ಹಾಗೂ ಹರಿಹರ ದೇವಸ್ಥಾನ ರಸ್ತೆ ಬದಿಯಲ್ಲಿ ಆಳವಾದ ಚರಂಡಿಯಿದ್ದು ರಸ್ತೆಯ ಬದಿಗೆ ಬ್ಯಾರಿಕೇಡ್ ಅಳವಡಿಸಿ ರಿಪ್ಲೇಕ್ಟರ್ ಟೇಪ್ ಅಳವಡಿಸುವುದು.,
ರಸ್ತೆಯ ಒಂದು ಬದಿಯ ಕಾಮಗಾರಿ ಪೂರ್ಣಗೊಂಡ ಬಳಿಕ ಲಘು ವಾಹನಗಳ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡುವುದು.
 ಕಾಮಗಾರಿ ನಡೆಸುವ ವೇಳೆ ವಾಹನ ಸಂಚಾರ ನಿರ್ವಹಣೆ ಕರ್ತವ್ಯಕ್ಕೆ ಪೊಲೀಸ್ ಸಿಬ್ಬಂದಿ ಜೊತೆಗೆ ಸಹಕರಿಸಲು ಸಿಬ್ಬಂದಿಗಳನ್ನು ನೇಮಿಸುವುದು., 
ರಾ.ಹೆ. 66ರ ಕಾರ್ನಾಡು ಬೈಪಾಸ್‌ನಲ್ಲಿ ಎಲ್ಲಾ ವಾಹನಗಳು ಬಂದು ತಿರುವು ತೆಗೆದುಕೊಳ್ಳುವುದರಿಂದ ಸಂಚಾರ ದಟ್ಟಣೆ ಆಗುವ ಸಾಧ್ಯತೆ ಇರುವುದರಿಂದ ಸದ್ರಿ ಜಂಕ್ಷನ್ ನಲ್ಲಿ ಸಿಸಿ ಕ್ಯಾಮರಾ, ಹೈ ಮಾಸ್ಟ್ ಲೈಟ್, ಬೀದಿ ದೀಪ, ಸೈನ್ ಬೋರ್ಡ್, ಸೋಲಾರ್ ಕ್ಯಾಟ್ ಐಸ್, ಅಪಘಾತ ವಲಯ ಎಂದು ಸೂಚನಾ ಫಲಕ ಅಳವಡಿಸುವುದು. ಹಾಗೂ ರಸ್ತೆ ಕಾಮಗಾರಿ ಮುಕ್ತಾಯದ ನಂತರ ಮುಲ್ಕಿ ವಿಜಯ ಸನ್ನಿಧಿಯ ಹತ್ತಿರ ಹಾಗೂ ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಹತ್ತಿರ ವೈಜ್ಞಾನಿಕ ರೀತಿಯಲ್ಲಿ ರಸ್ತೆ ಹಂಪ್ಸ್ ಗಳನ್ನು ಅಳವಡಿಸುವುದು.
ಕಾಮಗಾರಿ ನಡೆಯುವ ಹಾಗೂ ಡೈವರ್ಶನ್ ರಸ್ತೆಗಳಲ್ಲಿ ಸ್ಥಳದಲ್ಲಿ ಬ್ಯಾರಿಕೇಡ್/ಡೈವರ್ಷನ್ ಬೋರ್ಡ್, ನೋ ಪಾರ್ಕಿಂಗ್ ಬೋರ್ಡ್ ಗಳನ್ನು ಅಳವಡಿಸುವುದು.
ಕಾಮಗಾರಿ ನಡೆಯುವ ಸ್ಥಳದಲ್ಲಿ ಬೆಳಕಿನ ವ್ಯವಸ್ಥೆ ಮಾಡುವುದು. ನ್ಯಾಯಾಲಯಗಳು ನಿರ್ದೇಶಿಸಿರುವ ರಸ್ತೆ ಕಾಮಗಾರಿ ವೇಳೆ ಕೈಗೊಳ್ಳಬೇಕಾಗಿರುವ ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಮಂಗಳೂರು ಪೊಲೀಸ್ ಆಯುಕ್ತರ ಪ್ರಕಟಣೆ ತಿಳಿಸಿದೆ