Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಿನ್ನಿಗೋಳಿ ಪ.ಪಂ ,ವಸತಿ ಕಟ್ಟಡಗಳ ಮರುಸಮೀಕ್ಷೆ


ಕಿನ್ನಿಗೋಳಿ: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ವಸತಿ, ವಾಣಿಜ್ಯ ಕಟ್ಟಡಗಳು, ಮದುವೆ ಸಭಾಂಗಣಗಳು ಹಾಗೂ ಕೈಗಾರಿಕಾ ಸಂಸ್ಥೆಗಳ ಮರುಸರ್ವೆ ನಡೆಸಲು ಪಟ್ಟಣ ಪಂಚಾಯತ್ ನಿರ್ಧರಿಸಿದೆ.

ಈ ಹಿಂದೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿದ್ದ ಕಟ್ಟಡಗಳು ಹಾಗೂ ಆಸ್ತಿಗಳಿಗೆ ಗ್ರಾಮ ಪಂಚಾಯತ್‌ಗೆ ತೆರಿಗೆ ಪಾವತಿಸಲಾಗುತ್ತಿತ್ತು. 2021ರಲ್ಲಿ ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ ಬಳಿಕ ಇದೀಗ ಆಸ್ತಿಗಳ ಮರುಸರ್ವೆ ನಡೆಸಲು ಮುಂದಾಗಿದೆ.

ಈ ಸರ್ವೆ ಕಾರ್ಯದ ಸಂದರ್ಭದಲ್ಲಿ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಕಾರ್ಯವೂ ನಡೆಯಲಿದೆ. ಆದ್ದರಿಂದ ಮರುಸರ್ವೆ ಕಾರ್ಯಕ್ಕೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಹಾಗೂ ಆಸ್ತಿ ಮಾಲೀಕರು ಅಗತ್ಯ ಸಹಕಾರ ನೀಡಬೇಕೆಂದು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಪ್ರಕಟಣೆ ತಿಳಿಸಿದೆ.