Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ದೇವರನ್ನು ತೋರಿಸುತ್ತೇನೆ ಎಂದು ಹೇಳಿ ವಶೀಕರಣ ಮಾಡಿ ಹಣ ಎಗರಿಸುತ್ತಿದ್ದ ಇಬ್ಬರು ಪೊಲೀಸ್ ವಶಕ್ಕೆ, ಉಳಿದವರು ಪರಾರಿ

ಕಿನ್ನಿಗೋಳಿ : ಕಿನ್ನಿಗೋಳಿ  ಟೆಂಪೋ ಪಾರ್ಕಿನಲ್ಲಿದ್ದ ಟೆಂಪೋ ಚಾಲಕರನ್ನು ಸನ್ಯಾಸಿ ವೇಷ ಧರಿಸಿದ್ದ ಅಪರಿಚಿತರು ದೇವರನ್ನು ತೋರಿಸುತ್ತೇನೆ ಎಂದು ಹೇಳಿ ವಶೀಕರಣ ಮಾಡಿ ಹಣ ಎಗರಿಸುತ್ತಿದ್ದ  ನಾಲ್ವರ ಪೈಕಿ ಇಬ್ಬರನ್ನು ಸ್ಥಳೀಯರು ಹಿಡಿದು ಮುಲ್ಕಿ ಪೊಲೀಸರಿಗೆ ಒಪ್ಪಿಸಿದ್ದು ಉಳಿದವರು ಪರಾರಿಯಾಗಿದ್ದಾರೆ ಕಿನ್ನಿಗೋಳಿ  ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಾಲ್ವರು ಸನ್ಯಾಸಿಗಳ ವೇಷ ಭೂಷಣ ಧರಿಸಿಕೊಂಡು ಶನಿವಾರ ಬೆಳಗ್ಗಿನಿಂದಲೇ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದು ಕಿನ್ನಿಗೋಳಿ ಟೆಂಪೋ ಪಾರ್ಕ್ ಕಡೆಗೆ ಬಂದಿದ್ದಾರೆ 
ಅಲ್ಲಿ ಟೆಂಪೋ ಚಾಲಕರಿಗೆ ದೇವರು ತೋರಿಸುತ್ತೇನೆ ಎಂದು ಹೇಳಿಕೊಂಡು ಹೇಳಿ ಅವರ ಕೈಯಲ್ಲಿ ವಸ್ತುವನ್ನಿಟ್ಟು  ಅದನ್ನು ಮ್ಯಾಜಿಕ್ ತರಹ ಮಾಯ ಮಾಡಿ ನಿಮ್ಮ ಬಳಿ ಇರುವ ಹಣವನ್ನು ನೀವೆ ನಿಮ್ಮ ಕೈಯಾರೆ ನೀಡುತ್ತೀರಿ. ಎಂದು ಹೇಳಿಕೊಂಡು
ವಶೀಕರಣ ಮಾಡಿ ಅವರ ಕಿಸೆಯಿಂದ ಹಣ ಎಗರಿಸಿದ್ದಾರೆ. 
ತಾವು ಮೋಸ ಹೋಗಿದ್ದ ಬಗ್ಗೆ ಎಚ್ಚೆತ್ತ
 ಕಿನ್ನಿಗೋಳಿ ಟೆಂಪೋ ಪಾರ್ಕಿನ ಚಾಲಕರು  ತಕ್ಷಣವೇ ಕಾರ್ಯಪ್ರವೃತ್ತರಾಗಿ ಹಣ ಎಗರಿಸಿದ ಇಬ್ಬರನ್ನು ಚರ್ಚ್ ಬಳಿ ಇರುವುದರ ಬಗ್ಗೆ ಮಾಹಿತಿ ಪಡೆದು ತಕ್ಷಣ ಧಾವಿಸಿ ಅವರನ್ನು ತರಾಟೆಗೆ ತೆಗೆದುಕೊಂಡು ರೆಡ್ ಹ್ಯಾಂಡಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ
ಮೋಸಗಾರರ ತಂಡವು  ಕೆಲ ಟೆಂಪೋ ಚಾಲಕರಿಗೆ ಹಾಗೂ ನಾಗರಿಕರಿಗೆ ಮೋಸ ಮಾಡಿದ್ದಾರೆ. ಎಂದು ತಿಳಿದುಬಂದಿದೆ
ಮೋಸಗಾರರ ತಂಡದಲ್ಲಿ ಸುಮಾರು ಮಂದಿ ಇದ್ದು ಇಬ್ಬರು ಮಾತ್ರ ಸಿಕ್ಕಿರುತ್ತಾರೆ. ಇಂದು ಸ್ಥಳೀಯರು ತಿಳಿಸಿದ್ದಾರೆ
ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ.ಈ ಬಗ್ಗೆ  ನಾಗರಿಕರು ಎಚ್ಚೆತ್ತುಕೊಳ್ಳಬೇಕಾಗಿದೆ.