Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಶ್ರೀ ಆದಿಶಕ್ತಿ ನಾಗಕನ್ನಿಕ ಕ್ಷೇತ್ರ ಬಾಬಾಕೋಡಿ ಪುನರೂರು, ವಿಜೃಂಭಣೆಯ ದೀಪೋತ್ಸವ



ಕಿನ್ನಿಗೋಳಿ : ಬಾಬಾಕೋಡಿ ಪುನರೂರಿನ ಶ್ರೀ ಆದಿಶಕ್ತಿ ನಾಗಕನ್ನಿಕ ಕ್ಷೇತ್ರದಲ್ಲಿ ಕಾರ್ತಿಕ ಮಾಸದ ಅಂಗವಾಗಿ ತೃತೀಯ ವರ್ಷದ ದೀಪೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಸನ್ನಿಧಿಯಲ್ಲಿ ಸತ್ಯನಾರಾಯಣ ಪೂಜೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಸಹಸ್ರಾರು ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಶ್ರೀ ಆದಿಶಕ್ತಿ ನಾಗಕನ್ನಿಕ ದೇವಿಯ ದರ್ಶನ ಪಡೆದು ತಾಯಿಯ ಕೃಪಾಕಟಾಕ್ಷಕ್ಕೆ ಪಾತ್ರರಾದರು.

ಇದೇ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಜೆ.ಬಿ. ಫ್ರೆಂಡ್ಸ್ ಕ್ಲಬ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಯತೀಶ್ ಶೆಟ್ಟಿ ಕಟೀಲು ಅವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರದ ಮುಖ್ಯಸ್ಥರಾದ ವಸಂತಿ ಸೇಸಪ್ಪ ಮಡಿವಾಳ, ಸೇಸಪ್ಪ ಮಡಿವಾಳ, ಕ್ಷೇತ್ರದ ಅರ್ಚಕರಾದ ವಿಶ್ವೇಶ್ವರ ಭಟ್ ಸುರಗಿರಿ, ಯುಗಪುರುಷದ ಭುವನಾಭಿರಾಮ ಉಡುಪ, ನಾಗರಾಜ್ ಮಂಗಳೂರು, ರಮೇಶ್ ರಾವ್ ಪುನರೂರು, ಸಂಗೀತ ಯತೀಶ್ ಶೆಟ್ಟಿ, ಗೋಪಾಲ್ ಕುಲಾಲ್ ಹಾಗೂ ಜಯಂತ್ ಮಂಗಳೂರು ಉಪಸ್ಥಿತರಿದ್ದರು.

ಜೆ.ಬಿ. ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಶೆಟ್ಟಿ ಪುನರೂರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿ ದೇವಿಯ ಅನ್ನಪ್ರಸಾದ ಸ್ವೀಕರಿಸಿದರು.