Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಗಾಯತ್ರೀ ಉಡುಪ ಸ್ಮರಣಾರ್ಥ ಕಥಾ ಸ್ಫರ್ಧೆ : ನಳಿನಿ ಭೀಮಪ್ಪ ಪ್ರಥಮ


ಕಿನ್ನಿಗೋಳಿ : ಇಲ್ಲಿನ ಅನಂತ ಪ್ರಕಾಶ ಸಂಸ್ಥೆಯ ಏರ್ಪಡಿಸಿದ ಗಾಯತ್ರೀ ಉಡುಪ ಸ್ಮರಣಾರ್ಥ ಕಥಾ ಸ್ಪರ್ಧೆಯಲ್ಲಿ ನಳಿನಿ ಟಿ. ಭೀಮಪ್ಪ ಎ. ಧಾರವಾಡ ಇವರ ಚಾವಿ ಕಥೆಗೆ ಪ್ರಥಮ, ನರೇಂದ್ರ ಎಸ್. ಗಂಗೊಳ್ಳಿ ಅವರ ಬುರುಡೆ ಪ್ರಕರಣ ಕಥೆಗೆ ದ್ವಿತೀಯ ಹಾಗೂ ಜಯರಾಮಚಾರಿ, ಬೆಂಗಳೂರು ಇವರ ತೊರೆದು ಜೀವಿಸಬಹುದೇ ಮತ್ತು ಪುನೀತ್ ಕುಮಾರ್, ಮೈಸೂರು ಇವರ ತಪ್ಪಾದ ಮನೆಗೆ ಬಂದ ಪತ್ರ ಕಥೆಗಳಿಗೆ ತೃತೀಯ ಬಹುಮಾನ ಲಭಿಸಿದೆ ಎಂದು ಅನಂತಪ್ರಕಾಶದ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ ತಿಳಿಸಿದ್ದಾರೆ.
  ಪ್ರಥಮ ಬಹುಮಾನ  : ರೂ. ೭೫೦೦ ಮತ್ತು ರೂ. ೨೫೦೦ ಬೆಲೆಯ ಪುಸ್ತಕಗಳು
ಕಥೆ-ಕಥೆಗಾರರ ಹೆಸರು : ಚಾವಿ - ನಳಿನಿ ಟಿ. ಭೀಮಪ್ಪ ಎ. ಧಾರವಾಡ
ದ್ವಿತೀಯ ಬಹುಮಾನ : ರೂ. ೫೦೦೦ ಮತ್ತು ರೂ. ೨೦೦೦ ಬೆಲೆಯ ಪುಸ್ತಕಗಳು
ಕಥೆ-ಕಥೆಗಾರರ ಹೆಸರು  ಬುರುಡೆ ಪ್ರಕರಣ  -  ನರೇಂದ್ರ ಎಸ್. ಗಂಗೊಳ್ಳಿ
ತೃತೀಯ ಬಹುಮಾನಗಳು : ರೂ. ೩೦೦೦ ಮತ್ತು ರೂ. ೧೫೦೦ ಬೆಲೆಯ ಪುಸ್ತಕಗಳು
ಕಥೆ ಕಥೆಗಾರರ ಹೆಸರು    
ತೊರೆದು ಜೀವಿಸಬಹುದೇ  -  ಜಯರಾಮಚಾರಿ, ಬೆಂಗಳೂರು
ತಪ್ಪಾದ ಮನೆಗೆ ಬಂದ ಪತ್ರ - ಪುನೀತ್ ಕುಮಾರ್, ಮೈಸೂರು
ಸಮಾಧಾನಕರ ಬಹುಮಾನಗಳು : ರೂ. ೧೦೦೦ ಮತ್ತು ರೂ. ೧೦೦೦ ಬೆಲೆಯ ಪುಸ್ತಕಗಳು
ಕಥೆಯ ಹೆಸರು ಕಥೆಗಾರರು
ಶಾಲಿನಿ ರಮೇಶ್, ಸಿದ್ಧಾಪುರ ಅವರ ವಿಶ್ವಮಾತೆ, ಸಿರಾಜ್, ತೆಂಕಮಿಜಾರು ಮೂಡಬಿದ್ರೆ ಬರೆದ ಕಾಣೆಯಾದವರು, ಸುಶೀಲ ಎಸ್. ಅಮೀನ್, ಕೊಡೆವೂರು ಬರೆದ ಕ್ರೌಯದೆದುರು ತಲೆಬಾಗಿದ ಸತ್ಯ, ಟಿ. ಎಮ್. ಭಾರತಿ ಹಾದಿಗೆ, ಹಾಸನ ಬರೆದ ಸೀರಿ, ಶ್ರೀ ರಂಜನಿ ಅಡಿಗ, ಬೆಂಗಳೂರು ರಚಿತ ಅಜ್ಞಾತೆ, ಪೂರ್ಣಿಮಾ ಜೆ. ರಾವ್, ಬೆಂಗಳೂರು ಇವರ ಬೇರು, ಅನಂತ ಕುಣಿಗಲ್, ತುಮಕೂರು ಇವರ ಸಂಸ, ಭಾಸ್ಕರ ಕೆ. ಕುಂಟಪದವು, ಮಂಜೇಶ್ವರ ಬರೆದ ಶಾರದೆಯ ಮನೆಗೆ ಮೂರು ಬಾಗಿಲು, ವಿದ್ಯಾಶ್ರೀ ಹಡಪದ, ಕಾರಟಗಿ ರಚಿತ ಬದುಕು - ಬದುಕಬೇಕಿದೆ, ಕದ್ರಿ ಕಂಬಳ ರೇಖಾದೇವಿ ಮಂಗಳೂರು ಇವರ ಬೆಡ್ ನಂ-೧೩, ಟಿ.ಎಂ. ಜಗದೀಶ, ಕುಪ್ಪಳ್ಳಿ ಬರೆದ ಚಾತಕ ಕಥೆಗಳಿಗೆ ಸಮಾಧಾನಕರ ಬಹುಮಾನ ಲಭಿಸಿದೆ.
ಸಾಹಿತಿಗಳಾದ ಟಿ.ಎ.ಎನ್. ಖಂಡಿಗೆ, ದೇವು ಹನೆಹಳ್ಳಿ, ದಾಮೋದರ ಶೆಟ್ಟಿ,ಇರುವೈಲು ಹಾಗೂ ಡಾ. ಸುಧಾರಾಣಿ, ತೀರ್ಪುಗಾರರಾಗಿ ಸಹಕರಿಸಿದ್ದರು.  ವಿಜೇತರಿಗೆ ನಗದು ಹಾಗೂ ಪುಸ್ತಕಗಳ್ನು ಬಹುಮಾನವಾಗಿ ಸಂಸ್ಥೆಯ ೩೧ ವಾರ್ಷಿಕೋತ್ಸವದಲ್ಲಿ ನೀಡಲಾಗುವುದು ಎಂದು ಸಚ್ಚಿದಾನಂದ ಉಡುಪ ತಿಳಿಸಿದ್ದಾರೆ.