ಮುಲ್ಕಿತಾಲೂಕು ಮಟ್ಟದ "ಪ್ರಜಾ ಸೇವೆ ಆಂದೋಲನ ಸಭೆ"
ಮುಲ್ಕಿ: ಮುಲ್ಕಿತಾಲೂಕು ಮಟ್ಟದ "ಪ್ರಜಾ ಸೇವೆ ಆಂದೋಲನ ಸಭೆ"ಶನಿವಾರ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಗುತ್ತಕಾಡು ತಾಳಿಪಾಡಿ ಗ್ರಾಮದ"ಕೊರಗ ಸಮುದಾಯ ಭವನ" ಸಭಾಂಗಣದಲ್ಲಿ ನಡೆಯಿತು
ಮುಲ್ಕಿ ತಾಲೂಕು ತಹಶೀಲ್ದಾರ್ ಪೃಥ್ವಿ ಸಾನಿಕಂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ತಾಲೂಕು ವ್ಯಾಪ್ತಿಯಲ್ಲಿ ಪ್ರಜಾ ಸೇವೆ ಆಂದೋಲನ ಸಭೆ ನಡೆಯುತ್ತಿದ್ದು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಹಾಗೆ ಅಧಿಕಾರಿಗಳು ಜನರಿಗೆ ಸ್ಪಂದನೆ ನೀಡುವುದರ ಜೊತೆಗೆ ಅವರ ಸಮಸ್ಯೆಗಳಿಗೆ ಪರಿಹಾರ ನೀಡಲು ಶ್ರಮಿಸಬೇಕು ಎಂದರು
ಮುಖ್ಯ ಅತಿಥಿಗಳಾಗಿ ಮುಲ್ಕಿ ನಗರ ಪಂಚಾಯತಿ ಮುಖ್ಯಾಧಿಕಾರಿ ಮಧುಕರ್
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಗುರುದತ್, ತಾಲೂಕು ಉಪ ತಹಶೀಲ್ದಾರ್ ದಿಲೀಪ್ ರೋಡ್ಕರ್ ಮತ್ತಿತರರು
ಸಭೆಯಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಥಾಮಸ್ ಕಟ್ಟೆ ಎಂಬಲ್ಲಿ ಚರಂಡಿ ಹಾಗೂ ಕಸ ವಿಲೇವಾರಿ ಬಗ್ಗೆ ತಾಳಿಪಾಡಿ ಗ್ರಾಮಸ್ಥರು ದೂರಿದ್ದು ಈ ಬಗ್ಗೆ ಸೂಕ್ತ ಪರಿಹಾರ ಒದಗಿಸುವ ಬಗ್ಗೆ ಭರವಸೆ ನೀಡಲಾಯಿತು
ಬಳಿಕ ನಾಗರಿಕರ ಸಣ್ಣಪುಟ್ಟ ದೂರುಗಳನ್ನು ಸ್ಥಳದಲ್ಲಿ ವಿಲೇವಾರಿ ಮಾಡಲಾಯಿತು