ಕಟೀಲು–ಎಕ್ಕಾರು ರಸ್ತೆಯಲ್ಲಿ ಹೊಂಡಗಳದ್ದೇ ಕಾರುಬಾರು: ವಾಹನ ಸವಾರರಿಗೆ ಅಪಾಯದ ಆತಂಕ
ಬಜಪೆ: ಬಜಪೆ–ಕಟೀಲು ರಾಜ್ಯ ಹೆದ್ದಾರಿಯ ಕಟೀಲು ಸೇತುವೆಯಿಂದ ಎಕ್ಕಾರು ತನಕ ರಸ್ತೆಯ ಅಲ್ಲಲ್ಲಿ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆಯುಂಟಾಗುತ್ತಿದೆ.
ಹೆದ್ದಾರಿಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಹಾಗೂ ಇತರ ವಾಹನ ಚಾಲಕರು ಹೊಂಡಗಳನ್ನು ತಪ್ಪಿಸಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ರಾತ್ರಿ ವೇಳೆ ಹೊಂಡಗಳು ಸರಿಯಾಗಿ ಕಾಣಿಸದೆ ಅಪಘಾತ ಸಂಭವಿಸುವ ಭೀತಿ ಎದುರಾಗಿದೆ.