Logo
ಸುದ್ದಿ ಸಂಚಯ
ಲೋಡ್ ಆಗುತ್ತಿದೆ...

ಕಲೆಯ ಆರಾಧನೆಯಿಂದ ಸಂಸ್ಕೃತಿಯ ಉಳಿವು ಸಾಧ್ಯ: ಚಿತ್ರಾಪುರ ಸ್ವಾಮೀಜಿ

ಕಟೀಲು: ಸನಾತನ ಧರ್ಮದ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ವಿಶೇಷ ಸಿದ್ಧಿ ಪ್ರಾಪ್ತಿಯಾಗುತ್ತದೆ. ಜೀವನದಲ್ಲಿ ಸಾಧನೆ ಮಾಡಲು ಕಲೆಯ ಆರಾಧನೆ ಅಗತ್ಯ. ಪ್ರತಿಷ್ಠಾನದ ಮೂಲಕ ಕೇವಲ ಕಲೆಯ ಬೆಳವಣಿಗೆಯಷ್ಟೇ ಅಲ್ಲದೆ, ನಮ್ಮ ಸಂಸ್ಕೃತಿಯ ಪ್ರತಿಷ್ಠೆಯೂ ಹೆಚ್ಚಾಗಲಿ ಎಂದು ಚಿತ್ರಾಪುರ ಮಠದ ಮಠಾಧೀಶರಾದ ಶ್ರೀ ವಿಜಯೇಂದ್ರ ಸ್ವಾಮೀಜಿ ಹೇಳಿದರು.

ಅವರು ಶ್ರೀ ಕಟೀಲು ಪ್ರತಿಷ್ಠಾನ (ರಿ.) ವತಿಯಿಂದ ಆಯೋಜಿಸಲಾದ ಕಟೀಲು ಕಲಾ ಉತ್ಸವದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಡಾ. ಸುರೇಶ್ ರಾವ್ ಕಟೀಲು ಹಾಗೂ ಧಾರ್ಮಿಕ ನೇತಾರ ವಾಮಯ್ಯ ಶೆಟ್ಟಿ ಮುಂಬೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಎಲ್.ವಿ. ಅಮೀನ್, ರಾಜೇಶ್ ಶೆಟ್ಟಿ ಅತ್ತೂರು ಭಂಡಾರಮನೆ, ಚಂದ್ರಶೇಖರ ಬೆಳ್ಚಡ, ಲೀಲಾಕ್ಷ ಕರ್ಕೇರ, ಸಿ.ಎ. ಚಂದ್ರಶೇಖರ ಶೆಟ್ಟಿ, ಅಭಯಚಂದ್ರ ಜೈನ್, ಗಿರೀಶ್ ಶೆಟ್ಟಿ ತೆಳ್ಳಾರ್, ವೇಣುಗೋಪಾಲ ಶೆಟ್ಟಿ, ಬರೋಡ ಶಶಿಧರ ಶೆಟ್ಟಿ, ಅಶೋಕ್ ಪೈವ ಹೆಗ್ಡೆ, ಅರುಣೋದಯ ರೈ, ಶಶಿಧರ ಶೆಟ್ಟಿ, ಆನಂದ ಶೆಟ್ಟಿ, ಸುರೇಶ್ ಶೆಟ್ಟಿ, ನಿಶಾನ್ ಉಳ್ಳಾಲ್, ಸತೀಶ್ ಶೆಟ್ಟಿ ಪಡುಬಿದ್ರೆ, ಅನಂತ ಪದ್ಮನಾಭ ಆಚಾರ್ಯ, ದೊಡಯ್ಯ ಮೂಲ್ಯ ಕಟೀಲು, ಲೋಕಯ್ಯ ಸಾಲಿಯಾನ್ ಕೊಂಡೇಲ, ಪ್ರದ್ಯುಮ್ನ ರಾವ್ ಶಿಬರೂರು, ಗಿರೀಶ್ ಕಟೀಲು, ಮಧುಕರ್ ಅಮೀನ್ ಶಿಬರೂರು, ಸುಬ್ರಹ್ಮಣ್ಯ ಪ್ರಸಾದ್, ರತ್ನಾಕರ ಶೆಟ್ಟಿ ಎಕ್ಕಾರು, ಸಿ.ಎ. ಸುದೇಶ್ ರೈ, ಶ್ರೀಕರ ಆಸ್ರಣ್ಣ, ತಿಮ್ಮಪ್ಪ ಕೋಟ್ಯಾನ್, ಮಿಥುನ್ ಉಡುಪ ಕೊಡೆತ್ತೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಮಲಾದೇವಿ ಪ್ರಸಾದ್ ಆಸ್ರಣ್ಣ ಸನ್ಮಾನಪತ್ರ ವಾಚಿಸಿದರು. ಶ್ರೀಹರಿನಾರಾಯಣ ದಾಸ ಆಸ್ರಣ್ಣ ಸ್ವಾಗತಿಸಿದರು. ಕಟೀಲು ಪ್ರತಿಷ್ಠಾನದ ಅಧ್ಯಕ್ಷ ಅನಂತ ಪದ್ಮನಾಭ ಆಸ್ರಣ್ಣ ಧನ್ಯವಾದ ಸಮರ್ಪಿಸಿದರು. ನಿತೇಶ್ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.

ಕಲಾ ಉತ್ಸವದ ಅಂಗವಾಗಿ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಆಯ್ದ ತಂಡಗಳಿಂದ ಭಜನಾ ಸ್ಪರ್ಧೆ ನಡೆಯಿತು. ಪ್ರತಿಷ್ಠಾನದ ಗುರುಗಳಾದ ಅರುಣಾ ರಾವ್ ಕಟೀಲು, ವಾಸು ಮಾಸ್ಟರ್, ಶ್ರಾವ್ಯ ಕಿಶೋರ್, ಸತ್ಯಪ್ರಜ್ಞಾ ರಾವ್ ಕಟೀಲು ಹಾಗೂ ಸುರೇಶ್ ಕಡಂದಲೆ ಅವರನ್ನು ಗುರು ಸನ್ಮಾನದೊಂದಿಗೆ ಗೌರವಿಸಲಾಯಿತು.



ಭಜನಾ ಸ್ಪರ್ಧೆ : ಸ್ತುತಿಸಾಗರ ಮಲ್ಪೆ, ಸ್ವರಸಾಗರ ಕೃಷ್ಣಾಪುರ ತಂಡಗಳಿಗೆ ಬಹುಮಾನ


ಕಟೀಲು ಪ್ರತಿಷ್ಟಾನದ ವತಿಯಿಂದ ಕಟೀಲಿನಲ್ಲಿ ನಡೆದ ಆಹ್ವಾನಿತ ತಂಡಗಳ ಭಜನಾ ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. 
ಹದಿನಾರು ವಯಸ್ಸಿಗಿಂತ ಕೆಳಗಿನವರ ವಿಭಾಗದದಲ್ಲಿ ಉತ್ತಮ ತಬಲಾ ವಾದನಕ್ಕೆ ಸ್ತುತಿಸಾಗರ ಮಲ್ಪೆ, ಉತ್ತಮ ಹಾರ್ಮೋನಿಯಂ ವಾದನಕ್ಕೆ ಸ್ವರಾಂಜಲಿ ಸುರತ್ಕಲ್, ಹದಿನಾರು ವರ್ಷಕ್ಕಿಂತ ಮೇಲ್ಪಟ್ಟ ವಿಭಾಗದಲ್ಲಿ ಉತ್ತಮ ತಬಲಾ ವಾದನಕ್ಕೆ, ಉತ್ತಮ ಹಾರ್ಮೋನಿಯಂ ವಾದನಕ್ಕೆ ಶ್ರೀಹರಿಕೃಷ್ಣ ಭಜನ ಮಂಡಳಿ ಉಜಿರೆ ತಂಡ ಬಹುಮಾನ ಗಳಿಸಿದವು.
ಹದಿನಾರು ವಯಸ್ಸಿನ ಕೆಳಗಿನವರ ವಿಭಾಗದಲ್ಲಿ ಪ್ರಥಮ ಸ್ತುತಿಸಾಗರ ಮಲ್ಪೆ, ದ್ವಿತೀಯ ಬಾಲಕರ ಶ್ರೀರಾಮ ಮಂದಿರ ಮಲ್ಪೆ ತೃತೀಯ ಉಳ್ಳಾಳ್ತಿ ಭಜನಾ ಮಂಡಳಿ ಬೊಂಡಾಲ ಹದಿನಾರು ವಯಸ್ಸಿನ ಮೇಲಿನವರ ವಿಭಾಗದಲ್ಲಿ ಪ್ರಥಮ ಸ್ವರಸಾಗರ ಕೃಷ್ಣಾಪುರ, ದ್ವಿತೀಯ ಶ್ರೀ ಕಾಳಿಕಾಂಬಾ ಮಹಿಳಾ ಮಂಡಳಿ ಕುಳಾಯಿ, ತೃತೀಯ ಸ್ವರಾಂಜಲಿ ಸುರತ್ಕಲ್ ಪ್ರಶಸ್ತಿ ಪಡೆದರು.

ಜಾಹೀರಾತು: