ಉಲ್ಲಂಜೆ ಕ್ಲಸ್ಟರ್ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ "ಪ್ರತಿಭಾಕಾರಂಜಿ"
ಕಟೀಲು : ಉಲ್ಲಂಜೆ ಕ್ಲಸ್ಟರ್ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ "ಪ್ರತಿಭಾಕಾರಂಜಿ" ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಇಂಗ್ಲಿಷ್ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ನಡೆಯಿತು.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ಅಧ್ಯಕ್ಷ ಗುರುರಾಜ್ ಮಲ್ಲಿಗೆ ಅಂಗಡಿ ಉದ್ಘಾಟಿಸಿದರು.
ಕಿನ್ನಿಗೋಳಿ ಪಟ್ಟಣ ಪಂಚಾಯತ್ ಸದಸ್ಯರಾದ ಲೋಕಯ್ಯ ಸಾಲಿಯಾನ್, ಪ್ರಕಾಶ್ ಆಚಾರ್, ಉಲ್ಲಂಜೆ ಕ್ಲಸ್ಟರ್ನ ಸಿಆರ್ಪಿ ಶ್ರೀಮತಿ ಜ್ಯೋತಿ ಖಾರ್ವಿ, ದಯಾನಂದ ಮಾಡ, ಅನುದಾನಿತ ಪ್ರಾಥಮಿಕ ಶಾಲೆಯ ಶ್ರೀಮತಿ ಸರೋಜಿನಿ, ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಯ ಚಂದ್ರಶೇಖರ್ ಭಟ್ ಉಪಸ್ಥಿತರಿದ್ದರು.
ಉಲ್ಲಂಜೆ ಕ್ಲಸ್ಟರ್ನ ಏಳು ಪ್ರಾಥಮಿಕ ಶಾಲೆಗಳ ಸುಮಾರು 150 ವಿದ್ಯಾರ್ಥಿಗಳು ಹಾಗೂ 20 ಶಿಕ್ಷಕಿಯರು ಭಾಗವಹಿಸಿದ್ದು, 27 ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಕ್ಷಕಿ ಶ್ರೀಮತಿ ಸಂಧ್ಯಾ ನಿರೂಪಿಸಿದರು.