ಕಟೀಲಿನಲ್ಲಿ ನ. 27 ಭಜನಾ ಸ್ಪರ್ಧೆ
ಕಟೀಲು : ಶ್ರೀ ಕಟೀಲು ಪ್ರತಿಷ್ಠಾನದ ವತಿಯಿಂದ ಕಟೀಲಿನಲ್ಲಿ ನವೆಂಬರ್ 27ರ ಭಾನುವಾರ ನಡೆಯಲಿರುವ ಕಟೀಲು ಕಲಾ ಉತ್ಸವದಲ್ಲಿ ಉಡುಪಿ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳ ಭಜನಾ ತಂಡಗಳಿಗೆ 16 ವರ್ಷಕ್ಕಿಂತ ಕೆಳಗೆ ಹಾಗೂ 16 ವರ್ಷಕ್ಕಿಂತ ಮೇಲಿನವರೆಗೆ ಭಜನಾ ಸ್ಪರ್ಧೆ ಆಯೋಜಿಸಲಾಗಿದೆ.
ದಾಸರ ಪದಗಳಿಗೆ ಮಾತ್ರ ಅವಕಾಶವಿದೆ. ವಿಜೇತರಿಗೆ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಲಾಗುವುದು.
ಪ್ರತಿ ತಂಡದಲ್ಲಿ 5ರಿಂದ 10 ಮಂದಿಗೆ ಅವಕಾಶವಿದೆ.
ಸ್ಪರ್ಧಾ ಆಸಕ್ತ ತಂಡಗಳು
ಅರುಣಾ ರಾವ್ ದೂರವಾಣಿ ಸಂಖ್ಯೆ 9900816350 ಇವರಲ್ಲಿ ಹೆಸರು ನೋಂದಯಿಸಬಹುದು ಎಂದು ಪ್ರಕಟಣೆ ತಿಳಿಸಿದೆ.